Goodnews for pregnant womens:ಗರ್ಭಿಣಿ ಮಹಿಳೆಯರು, ಬಾಣಂತಿಯರೇ ಈ ಯೋಜನೆ ಸ್ಥಗಿತ ಇಲ್ಲ!!! ನಿಮಗಿದೋ ಭರ್ಜರಿ ಗುಡ್ ನ್ಯೂಸ್!

Latest national news Good news for pregnant womens this project is not stopped

Goodnews for pregnant womens : ರಾಜ್ಯ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಶುಭ ಸುದ್ದಿಯೊಂದನ್ನು(Goodnews for pregnant womens) ನೀಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಆಗಿರುವ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ(Pradhan Mantri Matru Vandana Yojana) ಮೂಲಕ ಗರ್ಭಿಣಿಯರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಧನ ಸಹಾಯ ನೀಡುತ್ತಾ ಬಂದಿದೆ. ಈ ನಡುವೆ, ಈ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಊಹಾಪೋಹ ಎಲ್ಲೆಡೆ ಹರಿದಾಡಿ ಚರ್ಚೆಗೆ ಕಾರಣವಾಗಿತ್ತು. ಸದ್ಯ, ಈ ಕುರಿತು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯ ಸರ್ಕಾರವು ಗರ್ಭಿಣಿ ಮಹಿಳೆಯರು, ಬಾಣಂತಿಯರಿಗೆ , ಮಾತೃ ವಂದನ ಹಾಗೂ ಮಾತೃಪೂರ್ಣ ಯೋಜನೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಈ ಯೋಜನೆಯು ಈ ತಾಯಂದಿರ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ನಗದು ಪ್ರೋತ್ಸಾಹ ನೀಡಿ ಗರ್ಭಿಣಿ ಮಹಿಳೆಯರ ಅಪೌಷ್ಟಿಕತೆಯ ಪರಿಣಾಮವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಹೀಗಾಗಿ, ಈ ಯೋಜನೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸುವುದಿಲ್ಲ. ಬದಲಿಗೆ ಈ ರೀತಿಯ ಯೋಜನೆಗಳನ್ನು ಪ್ರೋತ್ಸಾಹಿಸಿ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ್ದಾರೆ.

ಮಾತೃವಂದನಾ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಿತ ಡಿಬಿಟಿ ಯೋಜನೆ, ಈ ಯೋಜನೆಯಡಿ ನೇರವಾಗಿ ನಗದು ಪ್ರೋತ್ಸಾಹವನ್ನು ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರ ಬ್ಯಾಂಕ್ ಖಾತೆಗೆ ಬರಲಿದೆ. ಇಂತಹ ಯೋಜನೆಯನ್ನು ಸುಧಾರಿಸುತ್ತೇವೆ ಹೊರತು ಈ ಯೋಜನೆಯನ್ನು ಸ್ಥಗಿತಗೊಳಿಸಲ್ಲ ಎಂದು ಹೇಳಿದ್ದಾರೆ.ಮಾತೃ ವಂದನ ಹಾಗೂ ಮಾತೃಪೂರ್ಣ ಯೋಜನೆಗಳಿಗೆ ಬಜೆಟ್ ಅನುದಾನ ನೀಡಿಲ್ಲ ಎಂಬ ವಿಚಾರ ಸತ್ಯಕ್ಕೆ ದೂರವಾದ ಮಾತು. ಶಿಶು ಹಾಗೂ ಮಹಿಳೆಯರ ಪೌಷ್ಠಿಕತೆಯ ವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವುದು ನಮ್ಮ ಇಲಾಖೆಯ ಪ್ರಮುಖ ಉದ್ದೇಶವೆಂದು ಇದೆ ವೇಳೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಳೆಯ ನಡುವೆ ದಂಡೆಯ ಮೇಲೆ ಕುಳಿತು ದಂಪತಿಯ ಫೋಟೋ ಕ್ರೇಜ್! ಸಮುದ್ರದಲೆಗೆ ಕೊಚ್ಚಿಹೋದ ಪತ್ನಿ!

Leave A Reply

Your email address will not be published.