Puducherry: ಜೋಡಿಯೊಂದು ಲಾಡ್ಜ್ ನಲ್ಲಿ ಜಾಲಿ ಮೂಡಲಿದ್ದಾಗ ಕಾದಿತ್ತೊಂದು ಶಾಕ್!!!

Latest national news Secret camera in hotel room- Love couple running screaming in puducherry

Puducherry: ಸುಂದರ ಪ್ರವಾಸಿ ತಾಣವಾಗಿರುವ ಪುದುಚೇರಿಯಲ್ಲಿ ಪ್ರವಾಸಿಗರು ವೀಕೆಂಡ್ ನಲ್ಲಿ ತಿರುಗಾಟ ನಡೆಸುವುದು ಮಾಮೂಲಿ.ಅದೇ ರೀತಿ,ಯುವ ಜೋಡಿಗಳು ಪ್ರಕೃತಿಯ ಸೌಂದರ್ಯ ಸವಿಯಲು ಪ್ರವಾಸಿ ತಾಣ ಪುದುಚೇರಿಗೆ( Puducherry) ಆಗಮಿಸಿದ್ದು, ಈ ವೇಳೆ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಯಾವುದೇ ಪ್ರವಾಸಿ ತಾಣಗಳಿಗೆ ಹೋಗುವ ಸಂದರ್ಭ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ತಂಗುವುದು ಸಹಜ. ಹೀಗೆ ಸುತ್ತಾಟ ನಡೆಸಿ, ಸಮಯ ಕಳೆಯಲು ರೂಮ್ ಮಾಡುವುದು ಸಹಜ. ಇದೇ ರೀತಿ, ಯುವ ಜೋಡಿಯೊಂದು ಪುದುಚೇರಿಯಲ್ಲಿ ಸುತ್ತಾಟ ನಡೆಸಿ, ಸಮಯ ಕಳೆದು ವಿಶ್ರಾಂತಿ ಪಡೆಯಲು ರೂಮಿಗೆ ಬಂದಿದ್ದಾರೆ. ಹೀಗೆ, ಈ ಜೋಡಿ ಎರಡು ದಿನ ವಾಸ್ತವ್ಯ ಹೂಡಿದ್ದಾರೆ. ಹೀಗೆ, ವಾಸ್ತವ್ಯ ಹೂಡಿದ್ದ ಎರಡನೇ ದಿನ ಕೋಣೆಯ ಒಳಗೆ ಬೆಡ್ ಮೇಲಿರುವ ಪ್ಲಗ್ ಪಾಯಿಂಟ್ ಗೆ ಮೊಬೈಲ್ ಚಾರ್ಜ್ ಮಾಡಲು ಕನೆಕ್ಟ್ ಮಾಡಲು ಹೊರಟಾಗ ರಂಧ್ರದಿಂದ ವಿಚಿತ್ರ ಫ್ಲ್ಯಾಶಿಂಗ್ ಲೈಟ್ ಬರುವುದು ಗೊತ್ತಾಗಿದೆ.ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ರಹಸ್ಯ ಕ್ಯಾಮೆರಾಗಳಿಂದ ಪ್ರವಾಸಿಗರಿಗೆ ಸುರಕ್ಷತೆಯೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ವಿಚಿತ್ರ ಫ್ಲಾಶಿಂಗ್ ಲೈಟ್ ನೋಡಿದಾಗ ಅಲ್ಲಿ ಕ್ಯಾಮೆರಾ ಇರುವುದನ್ನು ಈ ಜೋಡಿ ಗಮನಿಸಿದ್ದಾರೆ. ಯುವ ಜೋಡಿ ರೂಮಿನಲ್ಲಿದ್ದ ಅಷ್ಟು ಹೊತ್ತು ಎಲ್ಲ ಚಲನವಲನವನ್ನು ಕ್ಯಾಮೆರಾ ರೆಕಾರ್ಡ್ ಆಗಿದೆ.ಈ ಜೋಡಿಗೆ ಕ್ಯಾಮೆರಾ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಈ ನಡುವೆ ಹೋಟೆಲ್ ಸಿಬ್ಬಂದಿ, ಇದರಲ್ಲಿ ನಮ್ಮ ಕೈವಾಡವಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ, ಜೋಡಿ ಉರುಳಾಯನಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ.

ಮೊದಲಿಗೆ, ಪೊಲೀಸರು ದೂರನ್ನು ಸ್ವೀಕರಿಸಲು ಹಿಂದೂ ಮುಂದೂ ಆಲೋಚಿಸಿ ವಜಾಗೊಳಿಸಿದ್ದರಂತೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸಾರ್ವಜನಿಕರ ಒತ್ತಡಕ್ಕೆ ಮಣಿದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುವ ಸಂದರ್ಭ ಕೊಠಡಿಯಲ್ಲಿ ಕ್ಯಾಮೆರಾ ಇರುವುದು ದೃಢಪಟ್ಟಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ತನಿಖೆ ನಡೆಸಿದ ಸಂದರ್ಭ ಇಬ್ಬರು ಹೋಟೆಲ್ ಉದ್ಯೋಗಿಗಳಾದ ಆನಂದು ಮತ್ತು ಅಬ್ರಹಾಂ ವಿರುದ್ಧ ಅನುಮಾನ ವ್ಯಕ್ತವಾಗಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಬ್ಬರು ತಲೆ ಮರೆಸಿಕೊಂಡಿದ್ದು, ಇವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನಮ್ಮ ಓದುಗ ಸ್ನೇಹಿತರಿಗೆ ಸವಾಲ್! ಈ ಮಾವಿನ ಹಣ್ಣಿನ ಮಧ್ಯೆ ಒಂದು ಗಿಣಿ ಅಡಗಿದೆ! ಹುಡುಕಲು ಸಹಾಯ ಮಾಡುವಿರಾ?

Leave A Reply

Your email address will not be published.