Nagpur: 10 ವರ್ಷದ ಬಾಲೆಯ ಮೇಲೆ 60 ರ ವೃದ್ಧನ ಕಾಮವಾಂಛೆ! ಅಸ್ವಾಭಾವಿಕ ಲೈಂಗಿಕತೆಗೆ ಬೆಚ್ಚಿದ ಹುಡುಗಿ, ಪಾಪಿ ವೃದ್ಧ ಅರೆಸ್ಟ್

Latest national news Senior citizen book for unnatural intercourse with 10 years old girl in Nagpur

Nagpur: ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿಯೂ ಮಹಿಳೆಯರ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಎಸಗುವ ಹೇಯ ಕೃತ್ಯ ವರದಿಯಾಗುತ್ತಲೇ ಇರುತ್ತವೆ.

ಮೊಮಹದ್‌ ಇದ್ರೀಸ್‌( 65 )ಎಂಬ ವ್ಯಕ್ತಿ ತನ್ನ ಮಾಲೀಕನ 10 ವರ್ಷದ ಮಗುವಿನೊಂದಿಗೆ ಅಸ್ವಾಭಾವಿಕ ಸೆಕ್ಸ್‌ ಮತ್ತು ರೇಪ್‌ ಮಾಡಿದ ಆರೋಪದ ಮೇರೆಗೆ ನಾಗ್ಪುರ(Nagpur) ದ ಪೋಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಜುಲೈ 12 ರಂದು ಈ ಘಟನೆ ನಡೆದಿದ್ದು,ಇದ್ರಿಸ್‌ ಖಾಸಗಿ ಜಿನ್ನಿಂಗ್‌ ಘಟಕದಲ್ಲಿ ಹತ್ತಿ ಬಿಡಿಸುವ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಕಳೆದ ಐದು ವರ್ಷಗಳಿಂದ ಇದ್ರಿಸ್ ತನ್ನ ಮಗ ಮತ್ತು ಸೊಸೆಯೊಂದಿಗೆ ಮಾಲೀಕರ ನಿವಾಸದಲ್ಲಿ ಬಾಡಿಗೆದಾರನಾಗಿ ಉಳಿದುಕೊಂಡಿದ್ದ. 10 ವರ್ಷದ ಮಗುವಿಗೆ ಚಾಕೋಲೇಟ್‌ ಕೊಡಿಸುವ ಆಮಿಷ ಒಡ್ಡಿದ್ದನಂತೆ. ಆ ಬಳಿಕ ಇದ್ರಿಸ್‌ ಆಕೆಯನ್ನು ಬಲವಂತವಾಗಿ ಟೆರಸ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯ ಜೊತೆ ಅಸ್ವಾಭಾವಿಕ ಸೆಕ್ಸ್‌ ಹಾಗೂ ರೇಪ್‌ ಮಾಡುವಾಗ ಸ್ವಂತ ಮಗನ ಕೈಯಲ್ಲಿಯೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ, ತಂದೆಯ ಕೃತ್ಯವನ್ನು ಮಗ ಗಮನಿಸಿದ್ದ ಕೂಡಲೇ ಅಲ್ಲಿಂದ ಎಸ್ಕೇಪ್ ಆಗಲು ಆರೋಪಿ ಮುಂದಾಗಿದ್ದಾನೆ. ಈ ಸಂದರ್ಭ ಮಗನೇ ತನ್ನ ತಂದೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಮಾತ್ರವಲ್ಲದೇ ಘಟನೆಯನ್ನು ಪೊಲೀಸರಿಗೆ ತಿಳಿಸಿ ಮಾಲೀಕನ 10 ವರ್ಷದ ಮಗುವನ್ನು ರಕ್ಷಿಸಿದ ಅಪರೂಪದ ಘಟನೆ ನಡೆದಿದೆ.

ಇದನ್ನೂ ಓದಿ: 35ರ ಆಂಟಿಯ ವೈಯಾರದ ಮಾತಿಗೆ ಬಲೆಗೆ ಬಿದ್ದ ಯುವಕ! ಲಕ್ಷ ಲಕ್ಷ ಹಣ ಕಳೆದುಕೊಂಡವ ಕೊನೆಗೇನಾದ?

Leave A Reply

Your email address will not be published.