Optical Illusion: ನಮ್ಮ ಓದುಗ ಸ್ನೇಹಿತರಿಗೆ ಸವಾಲ್! ಈ ಮಾವಿನ ಹಣ್ಣಿನ ಮಧ್ಯೆ ಒಂದು ಗಿಣಿ ಅಡಗಿದೆ! ಹುಡುಕಲು ಸಹಾಯ ಮಾಡುವಿರಾ?

Optical Illusion found out A parrot is hidden in the middle of this mango

Optical Illusion: ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ (Optical Illusion Game)ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ಅಷ್ಟೆ ಏಕೆ ನೀವು ಈಗಾಗಲೇ ಅನೇಕ ಸವಾಲುಗಳನ್ನು ಬಗೆಹರಿಸಿರುತ್ತೀರಿ. ಈಗ ಮತ್ತೊಂದು ಸವಾಲು ನಿಮಗಾಗಿ ನೀಡಲಾಗಿದೆ.

ಸಾಮಾನ್ಯವಾಗಿ ಹೆಚ್ಚಿನವರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ಈ ಆಪ್ಟಿಕಲ್ ಭ್ರಮೆಯು ನಿಮ್ಮ ಸೃಜನಶೀಲ ಬುದ್ಧಿಮತ್ತೆಯ ಮಟ್ಟವನ್ನು ಪರೀಕ್ಷಿಸಲು ಸಹ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್ಗಳು ಸಹ ಪ್ರಯೋಜನಕಾರಿಯಾಗಿದ್ದು, ನಿಮ್ಮ ಕಣ್ಣಿಗೆ ಕೆಲಸ ಕೊಡಲು ನೀವು ರೆಡಿನಾ??

ಹಾಗಿದ್ದರೆ, ನಿಮಗಿರುವ ಟಾಸ್ಕ್ ಏನಪ್ಪಾ ಅಂದ್ರೆ, ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಮಾವಿನ ಹಣ್ಣುಗಳು ನಿಮಗೆ ಕಾಣುತ್ತಿವೆ ಅಲ್ಲವೇ? ಅವುಗಳ ನಡುವೆ ಒಂದು ಗಿಣಿ ಅಡಗಿದೆ. ಅದು ಎಲ್ಲಿದೆ ಎಂಬುದನ್ನು ಕಂಡು ಹಿಡಿಯಬೇಕು! ನೀವು ಈಗಾಗಲೇ ಈ ರೀತಿಯ ಅನೇಕ ಸವಾಲುಗಳನ್ನೂ ಸ್ವೀಕರಿಸಿ, ಪರಿಹರಿಸಿರುತ್ತೀರಿ !!! ಹಾಗಾಗಿ, ಈ ಟಾಸ್ಕ್ ಅನ್ನು ಸುಲಭವಾಗಿ ಕಂಡುಹಿಡಿಯುವಿರಿ ಎಂಬ ನಂಬಿಕೆ ನಮಗಿದೆ. ಹಾಗಿದ್ದರೂ, ನಾವು ನಿಮಗೊಂದು ಹಿಂಟ್ ನೀಡುತ್ತೇವೆ. ಮಾವಿನ ಹಣ್ಣಿನ ಬಣ್ಣಕ್ಕೂ ಗಿಣಿಯ ಬಣ್ಣಕ್ಕೂ ಸಾಮ್ಯತೆ ಇರುವ ಹಿನ್ನೆಲೆ ನಿಮ್ಮ ಕಣ್ಣಿಗೆ ಸ್ವಲ್ಪ ಮಟ್ಟಿಗೆ ಕೆಲಸ ನೀಡಬೇಕು.ಹಾಗಿದ್ರೆ, ಸವಾಲು ಸ್ವೀಕರಿಸಲು ನೀವು ರೆಡಿ ನಾ!! ನಿಮಗೆ ಈಗ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಫೋಟೋದಲ್ಲಿರುವ ಗಿಣಿಯನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.

ಈಗಾಗಲೇ ಕೆಲವರು 10 ಸೆಕೆಂಡ್ ಸಮಯದಲ್ಲಿ ಗಿಣಿಯನ್ನ ಪತ್ತೆ ಹಚ್ಚಿರುತ್ತಿರಿ. ಹಾಗಿದ್ರೆ,ನಿಮ್ಮ ಬುದ್ಧಿವಂತಿಕೆಗೆ ಮತ್ತು ಕಣ್ಣಿನ ಸಾಮರ್ಥ್ಯಕ್ಕೆ ನೀವೇ ಫುಲ್ ಮಾರ್ಕ್ಸ್ ಕೊಟ್ಟು ಬಿಡಿ. ಎಷ್ಟು ಹುಡುಕಿದರೂ ಕೂಡ ಗಿಣಿ ಕಾಣಿಸುತ್ತಿಲ್ಲ ಎನ್ನುವವರು ಕೆಳಗಿನ ಚಿತ್ರ ನೋಡಿ ನಿಮಗೆ ಉತ್ತರ ಸಿಗಲಿದೆ.

ಇದನ್ನೂ ಓದಿ: NIA ಯಿಂದ‌ ಪ್ರವೀಣ್ ನೆಟ್ಟಾರು ಆರೋಪಿಗಳಿಗೆ ಕೊನೆಯ ವಾರ್ನಿಂಗ್!!!

 

Leave A Reply

Your email address will not be published.