ರಾಜ್ಯದ ಗ್ರಾಮೀಣ ಜನತೆಗೆ ಬಂತು ನೋಡಿ ಬಿಗ್ ನ್ಯೂಸ್: ಇನ್ನೂ ಜನನ ಮರಣ ಪ್ರಮಾಣ ಪತ್ರ ಗ್ರಾಮ ಪಂಚಾಯತಿಯಲ್ಲಿ ಲಭ್ಯ!

Birth and death certificate available in Gram Panchayat

ರಾಜ್ಯದ ಗ್ರಾಮೀಣ ಜನತೆಗೆ ಸಿಹಿ ಸುದ್ದಿ ಇಲ್ಲಿದೆ. ಗ್ರಾಮ ಪಂಚಾಯತಿಯಲ್ಲಿಯೇ ಜನನ- ಮರಣ ಪ್ರಮಾಣಪತ್ರಗಳು ಲಭ್ಯವಾಗುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರ ಪಂಚತಂತ್ರ 2.0 ತಂತ್ರಾಂಶದ ಪ್ರಾಯೋಗಿಕ ಚಾಲನೆಯನ್ನು ಆರಂಭಿಸಿದ್ದು, ಇದನ್ನು ಶೀಘ್ರದಲ್ಲೇ ಪ್ರಾಯೋಗಿಕ ಆಧಾರದ ಮೇಲೆ ಎರಡು ಆಯ್ದ ಜಿಲ್ಲೆಗಳಲ್ಲಿ ಪರಿಚಯಿಸಲಾಗಿರುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಇದೆ ವೇಳೆ ಮಾಹಿತಿ ನೀಡಿದ್ದಾರೆ. ಪಂಚತಂತ್ರ 2.0 ಹೊಸ ಸಾಫ್ಟ್ ವೇರ್ ಪ್ಲಾಟ್ಫಾರ್ಮ್ ಆಗಿದ್ದು, ಇದು ಗ್ರಾಮ ಪಂಚಾಯಿತಿಗಳ ಎಲ್ಲಾ ಪ್ರಮುಖ ಕಾರ್ಯಾಚರಣೆಗಳನ್ನು ಬಲಪಡಿಸಲು, ಡಿಜಿಟಲೀಕರಣಗೊಳಿಸಲು ನೆರವಾಗುತ್ತದೆ.

ರಾಜ್ಯ ಸರ್ಕಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (PDO) ಸಬ್ ರಿಜಿಸ್ಟರ್ ಗಳಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಜನನ ನೋಂದಣಿಗಾಗಿ ಗ್ರಾಮ ಲೆಕ್ಕಿಗರನ್ನು ಸಬ್ ರಿಜಿಸ್ಟ್ರಾರ್ ಗಳಾಗಿ ನೇಮಕ ಮಾಡಲಾಗಿದೆ. ಅವರು ಗ್ರಾಮ ಪಂಚಾಯತಿಯಲ್ಲೇ ಜನನ- ಮರಣ ಪ್ರಮಾಣಪತ್ರಗಳನ್ನು ನೀಡಲಿದ್ದಾರೆ. ಹೀಗಾಗಿ ಘಟನೆ ನಡೆದ 30 ದಿನಗಳಲ್ಲಿ ಜನನ ಮತ್ತು ಮರಣವನ್ನು ನೋಂದಾಯಿಸಿಕೊಂಡು ಗ್ರಾಮ ಪಂಚಾಯಿತಿಯಲ್ಲಿ ಜನನ- ಮರಣ ಪ್ರಮಾಣಪತ್ರಗಳನ್ನು ಪಡೆಯಬಹುದು.

Leave A Reply

Your email address will not be published.