Rajasthan: ಲವರ್ಸ್‌ ಹೆಲ್ಪ್‌ಗೆಂದು ಬಂದ ಮೂವರು ವ್ಯಕ್ತಿಗಳು! 17ರ ಬಾಲೆಯ ಮೇಲೆ ಒಬ್ಬರಾದ ಮೇಲೆ ಒಬ್ಬರಿಂದ ಗ್ಯಾಂಗ್‌ರೇಪ್‌!!!

Latest news attempt to rape 17 year old girl was raped by three people

Rajasthan: ಇದೊಂದು ರೀತಿಯ ಹೀನಾಯ ಕೃತವೆಂದೇ ಹೇಳಬಹುದು. ಹೆಣ್ಮಕ್ಕಳ ಮೇಲೆ ನಡೆಯುವ ಈ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದಕ್ಕೆ ನಿದರ್ಶನವಾಗಿ ಒಂದು ಹೀನಾಯಕರ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು, ರಾಜಸ್ಥಾನದ ಜೋಧ್‌ಪುರದಲ್ಲಿ 17ವರ್ಷದ ದಲಿತ ಬಾಲಕಿಯ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಘಟನೆ ನಿನ್ನೆ ಅಂದರೆ ಭಾನುವಾರ ಬೆಳಗ್ಗೆ ನಡೆದಿದೆ.

ಯುವತಿ ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದು, ಈಕೆ ತನ್ನ ಪ್ರಿಯಕರನೊಂದಿಗೆ ಜೋಧ್‌ಪುರಕ್ಕೆ ಬಂದಿದ್ದರು. ಅಲ್ಲಿ ಈ ಆರೋಪಿಗಳು ಅವರಿಗೆ ಸಹಾಯ ಮಾಡುವ ನೆಪದಲ್ಲಿ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ನಂತರ ಅವರು ತಮ್ಮ ನಿಜರೂಪವನ್ನು ತೋರಿಸಿದ್ದಾರೆ. ಮೊದಲಿಗೆ ಪ್ರಿಯಕರನಿಗೆ ಮನಸೋಇಚ್ಛೆ ಥಳಿಸಿ, ನಂತರ ಆತನ ಮುಂದೆಯೇ ಒಬ್ಬೊಬ್ಬರಾದ ನಂತರ ಒಬ್ಬರು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಸಮಾಧಾನಕರ ವಿಷಯವೇನೆಂದರೆ ಈ ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಅಂದ ಹಾಗೆ ಪೊಲೀಸ್‌ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ, ಈ ಮೂವರು ಆರೋಪಿಗಳು ಆರೆಸ್ಸೆಸ್‌ ವಿದ್ಯಾರ್ಥಿ ಘಟಕ ಎಂದರೆ ಎಬಿವಿಪಿಯ ವಿದ್ಯಾರ್ಥಿ ಸಂಘದ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದರು ಎಂದು ಹೇಳಿದ್ದಾರೆ. ಆದರೆ ಎಬಿವಿಪಿ ಈ ಆರೋಪಿಗಳೊಂದಿಗಿನ ಸಂಬಂಧವನ್ನು ಸ್ಪಷ್ಟವಾಗಿ ನಿರಾಕರಣೆ ಮಾಡಿದೆ. ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.

ಈ ಅಪರಾಧ ತಮ್ಮ ತವರು ಜಿಲ್ಲೆಯ ನಡೆದಿರುವುದಕ್ಕೆ ಸಿಎಂ ಗೆಹ್ಲೋಟ್‌ ಅವರು ಡಿಜಿಪಿ ಜೊತೆ ಮಾತನಾಡಿ, ಆರೋಪಿಗಳ ಜೊತೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ ಎಂದು ಸಿಎಂ ಗೆಹ್ಲೋಟ್‌ ಹೇಳಿದ್ದಾರೆ. ಅಲ್ಲದೆ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂತ್ರಸ್ತ ಹುಡುಗಿ ತನ್ನ ಗೆಳೆಯನೊಂದಿಗೆ ಅಜ್ಮೀರ್‌ನಿಂದ ಓಡಿ ಹೋಗಿ ಜೋಧ್‌ಪುರಕ್ಕೆ ಬಂದಿದ್ದಾಳೆ. ಇವರಿಬ್ಬರು ಶನಿವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಜೋಧ್‌ಪುರ ಬಂದಿದ್ದರು. ಅಲ್ಲಿ ಅವರಿಗೆ ರಾತ್ರಿ ಕಳೆಯಲು ಅತಿಥಿಗೃಹ ಬೇಕಿತ್ತು. ಅಲ್ಲಿ ಕೊಠಡಿ ಪಡೆದುಕೊಂಡಾಗ ಅಲ್ಲಿನ ಸುರೇಶ್‌ ಜಾಟ್‌ ಕಿರುಕುಳ ನೀಡಿದ್ದಾನೆ. ನಂತರ ಅವರಿಬ್ಬರು ಅಲ್ಲಿ ನಿಲ್ಲದೆ ಕೊಠಡಿ ತೆಗೆದುಕೊಳ್ಳದೆ ಅಲ್ಲಿ ಓಡಿ ಹೋಗಿದ್ದಾರೆ.

ಅಲ್ಲಿಂದ ಅವರಿಬ್ಬರು ಪೌಟಾ ಕ್ರಾಸಿಂಗ್‌ ತಲುಪಿದ್ದಾರೆ. ಅಲ್ಲಿ ಅವರು ಸಮಂದರ್‌ ಸಿಂಗ್‌ ಭಾಟಿ, ಧರಂಪಾಲ್‌ ಸಿಂಗ್‌ ಮತ್ತು ಭಟ್ಟಮ್‌ ಸಿಂಗ್‌ ಅವರನ್ನು ಭೇಟಿಯಾಗಿದ್ದಾರೆ. ಈ ಆರೋಪಿಗಳ ವಯಸ್ಸು ಸರಿ ಸುಮಾರು 20-22. ಈ ಮೂವರು ಸಂತ್ರಸ್ತೆ ಮತ್ತು ಆಕೆಯ ಪ್ರಿಯಕರನೊಂದಿಗೆ ಸ್ನೇಹ ಬೆಳೆಸಿ ಅವರಿಗೆ ಆಹಾರ ಎಲ್ಲಾ ನೀಡಿದ್ದಾರೆ. ನಂತರ ಮೂವರು ಆರೋಪಿಗಳು ಇವರಿಬ್ಬರಿಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.

ಸಹಾಯ ಮಾಡುವ ಹೆಸರಿನಲ್ಲಿ ಮೂವರು ಆರೋಪಿಗಳು ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸಂತ್ರಸ್ತೆ ಹಾಗೂ ಆಕೆಯ ಗೆಳೆಯನನ್ನು ರೈಲ್ವೇ ನಿಲ್ದಾಣಕ್ಕೆ ಡ್ರಾಪ್ ಮಾಡುವುದಾಗಿ ಹೇಳಿದ್ದಾರೆ. ಇಬ್ಬರೂ ತಮ್ಮೊಂದಿಗೆ ಹೋಗಲು ಒಪ್ಪಿದಾಗ ಆರೋಪಿಗಳು ನೇರವಾಗಿ ಜೈ ನಾರಾಯಣ ವ್ಯಾಸ್ ವಿಶ್ವವಿದ್ಯಾಲಯದ ಹಾಕಿ ಮೈದಾನಕ್ಕೆ ಕರೆದೊಯ್ದಿದ್ದಾರೆ. ಇದು ಹಳೆಯ ಕ್ಯಾಂಪಸ್‌ನಲ್ಲಿದೆ. ಇಲ್ಲಿ ಅವರು ಹುಡುಗನನ್ನು ಹೊಡೆದು ಒತ್ತೆಯಾಳಾಗಿ ಮಾಡಿ, ಇದಾದ ಬಳಿಕ ಒಬ್ಬೊಬ್ಬರಾಗಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಡಿಜಿಪಿ ಘಟನೆಯ ಬಗ್ಗೆ ಹೇಳಿದ್ದಾರೆ.

 

ಇದನ್ನು ಓದಿ: Murder news: ಗೆಳೆಯರ ನಡುವೆ ಬಂದಳೋರ್ವಳು ಹುಡುಗಿ; ಫ್ರೆಂಡ್‌ಶಿಪ್‌ ಮರೆತು ಮಾರಾಮಾರಿ, ಗೆಳೆಯನ ತಲೆ ಪೀಸ್‌ಪೀಸ್‌!!

Leave A Reply

Your email address will not be published.