Guaranty Money: ನಾಳೆಯಿಂದ ಧನ ವೃಷ್ಟಿ ಶುರು: ಜನರ ಅಕೌಂಟ್’ಗೆ ಬಂದು ಬೀಳಲಿದೆ 10,000 ರೂಪಾಯಿ !

Latest news CM Jagan Mohan Reddy has promised to release the Guaranty Money

Guaranty Money: ಬಡಜನರ ಏಳಿಗೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ, ಕೇಂದ್ರ ಸರ್ಕಾರ ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ನೆರವು ನೀಡುತ್ತಿದೆ. ಇತ್ತೀಚೆಗಷ್ಟೇ ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ( Jagan Mohan Reddy) ಯವರು ಆಂಧ್ರದ ಜನತೆಗೆ ಮತ್ತೊಂದು ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಜಗನಣ್ಣ ತೋಡು ಯೋಜನೆಗೆ ಸಂಬಂಧಿಸಿದ ಹಣವನ್ನು ನಾಳೆಯೆ ಬಿಡುಗಡೆ ಮಾಡುವ ಕುರಿತು ಸಿಎಂ ಜಗನ್ ಮೋಹನ್ ರೆಡ್ಡಿ ಭರವಸೆ ನೀಡಿದ್ದಾರೆ.

ಆಂಧ್ರ ಪ್ರದೇಶದ ಸಣ್ಣ ವ್ಯಾಪಾರಿಗಳಿಗೆ ಆಸರೆಯಾಗುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರ್ಕಾರದ ಈ ಯೋಜನೆಯ ಜವಬ್ದಾರಿ ವಹಿಸಿಕೊಂಡಿದೆ. ರಾಜ್ಯ ಸರ್ಕಾರ ಜಗನಣ್ಣ ತೋಡು ಯೋಜನೆಯ ಮೂಲಕ ಸಣ್ಣ ವ್ಯಾಪಾರಿಗಳಿಗೆ ರೂ.10,000 ಬಡ್ಡಿ ರಹಿತ ಸಾಲ ಒದಗಿಸುತ್ತಿದ್ದು, ಸರಕಾರದ ಈ ಯೋಜನೆಗೆ ಜನವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಜಗನಣ್ಣ ತೋಡು ಯೋಜನೆಯ ಭಾಗವಾಗಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತಾವಧಿಯ ನಾಲ್ಕನೇ ವರ್ಷದಲ್ಲಿ ಮೊದಲ ಕಂತಿನ ಕಾರ್ಯಕ್ರಮ ನಡೆಸಲಾಗಿ, ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳ ಖಾತೆಗೆ ತಲಾ 10 ಸಾವಿರ ರೂಪಾಯಿ ಹಣವನ್ನು ಜಮೆ ಮಾಡಲು ನಿರ್ಣಯ ಕೈಗೊಂಡಿದೆ.ಇದರ ಜೊತೆಗೆ, ಬಡ್ಡಿ ಮನ್ನಾ ಅನುಸಾರ, 4.58 ಲಕ್ಷ ಜನರಿಗೆ 10.03 ಕೋಟಿ ರೂಪಾಯಿ ಹಣ ಖರ್ಚಾಗಲಿದೆ. ಜಗನಣ್ಣ ತೋಡು ಯೋಜನೆಯ ಭಾಗವಾಗಿ ತಲಾ ರೂ.10,000 ಯಂತೆ ಆಂಧ್ರ ಪ್ರದೇಶದ ಸುಮಾರು 5.1 ಲಕ್ಷ ಜನರ ಖಾತೆಗಳಿಗೆ ಜಮೆ ಆಗಲಿದೆ.

Leave A Reply

Your email address will not be published.