Belthangady: ಕೊರಗಜ್ಜನ ಗುಡಿಯ ಚಪ್ಪರಕ್ಕೆ ಬೆಂಕಿ‌ ಇಟ್ಟ ಪ್ರಕರಣ; ಪ್ರತಿದೂರು ದಾಖಲು

Latest news daiva news Belthangady case of setting fire to Koragajja's hut

Belthangady: ಜುಲೈ 11ರಂದು ವೇಣೂರಿನ ಬಜಿರೆ ಗ್ರಾಮದ ಬಾಡಾರು ಎಂಬಲ್ಲಿನ ಕೊರಗಕಲ್ಲು ಸ್ವಾಮಿ ಕೊರಗಜ್ಜನ ಗುಡಿಯ ಚಪ್ಪರಕ್ಕೆ ಬೆಂಕಿ ಹಚ್ಚಿ ಆರಾಧನಾ ಕೇಂದ್ರಕ್ಕೆ ಹಾನಿ ಮಾಡಿದ ಘಟನೆ ವರದಿಯಾಗಿತ್ತು. ವೇಣೂರು ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೇಲೆ ಪ್ರಕರಣ ದಾಖಲಿಸಿ ಒಬ್ಬರನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರತಿ ದೂರು ದಾಖಲಾಗಿದೆ.

ಸರಕಾರಿ ಜಮೀನಿನಲ್ಲಿದ್ದ ಕೊರಗಜ್ಜನ ಕಟ್ಟೆಯನ್ನು ಊರಿನವರೆಲ್ಲ ಆರಾಧಿಸಿಕೊಂಡು ಬರುತ್ತಿದ್ದರು.ಅದೇ ರೀತಿ, ಬಂಧಿತನಾಗಿತ ಹರೀಶ್‌ ಪೂಜಾರಿ ಕಟ್ಟೆಗೆ ಪೂಜೆ ನೆರವೇರಿಸುತ್ತಿದ್ದ. ಆದರೆ ಈ ನಡುವೆ ಜಗದ ವಿಚಾರಕ್ಕೆ ಸಂಬಂಧಪಟ್ಟಂತೆ ಮನಸ್ತಾಪ ಭುಗಿಲೆದ್ದಿದೆ. ಹೀಗಾಗಿ, ಆರೋಪಿತರು ವಿವಾದಿತ ಕೊರಗಜ್ಜ ಕಟ್ಟೆಯನ್ನು ಕೆಡವಿ ಹೊಸದಾಗಿ ಕೆಸರು ಕಲ್ಲು ಹಾಕಲು ಮುಂದಾಗಿದ್ದಾರೆ.

ಈ ವೇಳೆ, ಬಾಡಾರು ಕೊರಗಕಲ್ಲು ಶ್ರೀ ಕೊರಗಜ್ಜ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಕುಮಾರ್ ಹಾಗೂ ಇನ್ನುಳಿದ ಭಕ್ತರು ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೇ,ಟ್ರಸ್ಟ್ ನವರು ಹಳೇ ಕೊರಗಜ್ಜ ಕಟ್ಟೆಯನ್ನೇ ಚಪ್ಪರ ಹಾಕಿ ಆರಾಧಿಸುವುದನ್ನು ಮುಂದುವರಿಸಿದ್ದಾರೆ. ಈ ನಡುವೆ ಜುಲೈ.11ರಂದು ಬೆಳಗ್ಗೆ 10.30ರ ಸುಮಾರಿಗೆ ಚಪ್ಪರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳೀಯರು ಬೆಂಕಿಯನ್ನು ಆರಿಸಿದ್ದು, ಈ ಪ್ರಕರಣ ಮೇಲ್ನೋಟಕ್ಕೆ ಹಣತೆ ಬೆಂಕಿ ತಾಗಿ ಆಕಸ್ಮಿಕವಾಗಿ ಬೆಂಕಿ ಹಚ್ಚಿದಂತೆ ಕಂಡುಬಂದಿತ್ತು. ಆದರೆ, ಆರೋಪಿತ ಹರೀಶ್ ಪೂಜಾರಿ ಇತರರ ನೆರವಿನಿಂದ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಉಂಟು ಮಾಡಿರುವುದಲ್ಲದೆ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಟ್ರಸ್ಟ್ನ ಅಧ್ಯಕ್ಷರಾಗಿರುವ ಪ್ರದೀಪ್ ಕುಮಾರ್ ಹೆಗ್ಡೆ ವೇಣೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಪ್ರತಿ ದೂರು ದಾಖಲಾಗಿದೆ.

ಧಾರ್ಮಿಕ ಶ್ರದ್ಧಾ ಕೇಂದ್ರದ ವಿಷಯಕ್ಕೆ ಸಂಬಂಧಿಸಿ ಡಾ| ರಾಜೇಶ್‌ ಮತ್ತು ಅವರ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕುತ್ತಾ ಬರುತ್ತಿದ್ದರು. ಫಿರ್ಯಾದಿದಾರರು ಮತ್ತು ಕುಟುಂಬಸ್ಥರ ನಂಬಿಕೆಗೆ ದ್ರೋಹ ಉಂಟು ಮಾಡಿದ್ದಾರೆ ಎಂಬುದಾಗಿ ಆರೋಪಿಸಿ ಒಟ್ಟು 13 ಜನರ ವಿರುದ್ಧ ನೀಡಿದ ದೂರಿನ ಮೇರೆಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್‌ ಮ್ಯಾನೇಜಿಂಗ್‌ ಟ್ರಸ್ಟಿ ಡಾ| ರಾಜೇಶ್‌ ನೀಡಿದ ದೂರಿನಂತೆ ಹಿಂದಿನಿಂದಲೂ ಆರಾಧಿಸಿಕೊಂಡು ಬರುತ್ತಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಪ್ರದೀಪ್‌ ಕುಮಾರ್‌ ಹೆಗ್ಡೆ ತನ್ನ ಸಂಗಡಿಗರೊಂದಿಗೆ ಸೇರಿ ಅನಧಿಕೃತ ಟ್ರಸ್ಟ್‌ ರಚಿಸಿಕೊಂಡು ಸಾರ್ವಜನಿಕ ಹಣ ಸಂಗ್ರಹಣೆ ಮಾಡುವ ಜೊತೆಗೆ ವಂಚನೆ ಮಾಡುವ ದುರುದ್ದೇಶದಿಂದ ತನ್ನ ಮೇಲೆ ಹಾಗೂ ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದು ಮಾತ್ರವಲ್ಲದೇ ಪ್ರತಿ ದೂರು ನೀಡಿದ್ದಾರೆ.

Leave A Reply

Your email address will not be published.