Heart Attack: ಕ್ರಿಕೆಟ್ ಮೈದಾನದಲ್ಲಿ ಆಡುತ್ತಾ ಕುಸಿದು ಬಿದ್ದ 20 ರ ಹರೆಯದ ಯುವಕ ಮೃತ್ಯು!!!

Latest news death news boy died after collapsing while playing on the cricket field

Heart Attack: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ(Heart Attack) ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚೆಚ್ಚು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿಯೂ ಫಿಟ್ ಅಂಡ್ ಫೈನ್ ಆಗಿದ್ದ ಯುವಕರು, ವ್ಯಾಯಾಮ, ಆಟ ಆಡುವ ಸಂದರ್ಭದಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆ ವರದಿಯಾಗುತ್ತಿದ್ದು, ಈ ರೀತಿ ಹದಿಹರೆಯದ ಯುವಜನತೆ ಸಾವಿನ ದವಡೆಗೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಗುಜರಾತಿನ ಅರಾವಳಿಯಲ್ಲಿ 20ರ ಹರೆಯದ ಯುವಕನೊಬ್ಬ ಕ್ರಿಕೆಟ್ ಮೈದಾನದಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟ ಘಟನೆ ನಡೆದಿದೆ. ಬಲ್ಲ ಮೂಲಗಳ ಪ್ರಕಾರ, ಮೃತಪಟ್ಟ ಯುವಕನನ್ನು ಪರ್ವ ಸೋನಿ ಎಂದು ಗುರುತಿಸಲಾಗಿದೆ. ಪರ್ವ ಸೋನಿ ಅರವಳ್ಳಿಯ ಮೊಡಸದಲ್ಲಿರುವ ಗೋವರ್ಧನ್ ಸೊಸೈಟಿಯಲ್ಲಿರುವ ಶ್ರೈನ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು.

ಸೋನಿ ಅವರು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಇಂಜಿನಿಯರಿಂಗ್ ಜೊತೆಗೆ ದೇಶಿಯ ಕ್ರಿಕೆಟ್ ನಲ್ಲಿ ಮಿಂಚುವ ಆಸೆಯನ್ನು ಹೊಂದಿದ್ದ ಸೋನಿ ಇದಕ್ಕೆ ಪೂರಕ ಟ್ರೈನಿಂಗ್ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ, ಕ್ರಿಕೆಟ್ ಮೈದಾನದಲ್ಲಿ ಕುಸಿದು ಬಿದ್ದ ಯುವಕ ಮೃತಪಟ್ಟಿದ್ದಾನೆ. ಯುವಕರಲ್ಲಿ ಈ ರೀತಿ ಹೃದಯಾಘಾತವಾಗುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಅದರಲ್ಲಿಯೂ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಂಪೂರ್ಣವಾಗಿ ದೇಹ ಫಿಟ್ ಆಗಿದ್ದರೂ ಈ ರೀತಿ ಸಾವು ಸಂಭವಿಸುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ

Leave A Reply

Your email address will not be published.