Murder news: ಗೆಳೆಯರ ನಡುವೆ ಬಂದಳೋರ್ವಳು ಹುಡುಗಿ; ಫ್ರೆಂಡ್‌ಶಿಪ್‌ ಮರೆತು ಮಾರಾಮಾರಿ, ಗೆಳೆಯನ ತಲೆ ಪೀಸ್‌ಪೀಸ್‌!!

Latest news death news crime new murder of a friend with handguns

ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿಯೂ ಎಣ್ಣೆಯ ಮತ್ತಿನಲ್ಲಿ ಹೆಣ್ಣು(Woman), ಮಣ್ಣು, ಹೊನ್ನಿಗಾಗಿ ಆಗುವ ಗಲಾಟೆ, ಜಗಳಗಳು ಕೊನೆಗೆ ಕೊಲೆಯಲ್ಲಿ ದುರಂತ ಅಂತ್ಯ ಕಂಡದ್ದು ಇದೆ.

ಬೆಂಗಳೂರಿನಲ್ಲಿ ಎಣ್ಣೆಯ ಮತ್ತಿನಲ್ಲಿ ಇಬ್ಬರು ಸ್ನೇಹಿತರ ನಡುವೆ ಮಾರಾಮಾರಿ ನಡೆದಿದ್ದು, ಇದಕ್ಕೆ ಕಾರಣವಾಗಿದ್ದು ಮಾತ್ರ ಪ್ರೀತಿಯೆಂಬ ಮಾಯೆ. ಇಬ್ಬರು ಸ್ನೇಹಿತರ ನಡುವೆ ಜಗಳಕ್ಕೆ ಕಾರಣವಾಗಿದ್ದು, ಇಬ್ಬರು ಗೆಳೆಯರನ್ನು ತನ್ನ ಪ್ರೀತಿಯ ಮೋಡಿಯಲ್ಲಿ ಬೀಳಿಸಿದ ಯುವತಿ. ಪ್ರೀತಿ ಕುರುಡು ಎಂಬಂತೆ ಇಬ್ಬರನ್ನ ಮರುಳು ಮಾಡಿ ಪ್ರೇಮ ಪ್ರಣಯದ ನಾಟಕವಾಡಿದ ಯುವತಿಯ ವಿಚಾರ ಯುವಕರಿಗೆ ಎಣ್ಣೆಯ ಅಮಲಿನಲ್ಲಿ ಮಾತಾಡುವ ಭರದಲ್ಲಿ ಇಬ್ಬರು ಒಬ್ಬಳನ್ನೇ ಪ್ರೀತಿಸುವ ವಿಚಾರ ಬಯಲಾಗಿದೆ.

ಹೀಗಾಗಿ, ಯುವತಿಯ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕೇರಿದೆ. ಗಫರ್ ಮತ್ತು ಹುಸೇನ್ ಎಂಬ ಸ್ನೇಹಿತರ ನಡುವಿನ ಜಗಳದಲ್ಲಿ ಕುಡಿತದ ಅಮಲಿನಲ್ಲಿದ್ದ ಹುಸೇನ್‌ ಬಿಯರ್‌‌ ಬಾಟೆಲ್‌ನಲ್ಲಿ ಗಫರ್‌‌ ತಲೆಗೆ ಹೊಡೆದಿದ್ದಾನೆ. ಆ ಬಳಿಕ ಬಾರ್‌ನಿಂದ ಹೊರಬಂದು ಕಲ್ಲಿನಿಂದಲೂ ಹಲ್ಲೆ ಮಾಡಿದ್ದಾನೆ. ಪ್ರೀತಿ ವಿಚಾರಕ್ಕೆ ಪೆಟ್ಟು ತಿಂದ ಗಫರ್‌‌ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂಟೋನ್ಮೆಂಟ್ ಬಳಿಯ ತಿಮ್ಮಯ್ಯ ಸರ್ಕಲ್‌ನಲ್ಲಿ ಕ್ಷಣ ಕಾಲ ರಕ್ತದೋಕುಳಿಯಲ್ಲಿ ಬಿದ್ದಿದ್ದಾನೆ. ಹೀಗಿದ್ದರೂ ಅಲಿದ್ದವರು ಈ ಘಟನೆಯ ಫೋಟೋ ವಿಡಿಯೋ ಮಾಡುವುದರಲ್ಲೇ ಮುಳುಗಿದ್ದಾರೆ. ಈ ನಡುವೆ, ಕೆಲವರು ಪ್ರೀತಿ ವಿಚಾರಕ್ಕೆ ಪೆಟ್ಟು ತಿಂದ ಗಫರ್‌‌ ತಲೆಗೆ ತೀವ್ರ ಪೆಟ್ಟಾಗಿದ್ದು, ಇವನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಪಾಗಲ್ ಪ್ರೇಮಿ ಹುಸೇನ್‌ನನ್ನು ಭಾರತೀ ನಗರ ಪೊಲೀಸರು ಬಂಧಿಸಿದ್ದರೆ,ಮತ್ತೋರ್ವ ಬಾರ್‌‌ ಟೇಬಲ್‌ ಫ್ರೆಂಡ್‌‌ ಪರಾರಿಯಾಗಿದ್ದಾನೆ. ಒಟ್ಟಿನಲ್ಲಿ ಇಬ್ಬರು ಯುವಕರ ಪಾಲಿಗೆ ವಿಲನ್ ಆಗಿದ್ದು ಮಾತ್ರ ಯುವತಿ ಎಂಬುದು ವಿಪರ್ಯಾಸ.

Leave A Reply

Your email address will not be published.