ರಾತ್ರೋರಾತ್ರಿ 11 ಗಂಟೆಗೆ ಹಾಸ್ಟೆಲ್ ನಿಂದ ಜಂಪ್ ಮಾಡಿ ಹಾರಿದ ಹುಡುಗಿ, ಬೆಳಗ್ಗೆ 5 ಗಂಟೆ ವಾಪಸ್! 11-5 ಒಳಗೆ ಆದದ್ದೇನು? ವೀಡಿಯೋ ವೈರಲ್!

latest news girl left hostel at night and returned at 5 am

ತುಮಕೂರು: ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಯುವಜನತೆಯ ಮನದಲ್ಲಿ ವಯೋಸಹಜ ನೂರಾರು ಹುಚ್ಚು ಆಸೆಗಳು, ಆಕರ್ಷಣೆಗೆ ಬಲಿಯಾಗುವುದು ನಾವೆಲ್ಲ ಕೇಳಿರುತ್ತೇವೆ. ವಯಸ್ಸಿಗೆ ಬಂದ ಮಕ್ಕಳನ್ನು ನಿಭಾಯಿಸುವುದು ಸುಲಭದ ಮಾತಲ್ಲ ಎಂಬುದನ್ನು ಅನೇಕ ಪೋಷಕರು ಕಂಡುಕೊಂಡಿದ್ದಾರೆ. ಹೀಗಾಗಿ, ಎಷ್ಟೋ ಮಂದಿ ಹಾಸ್ಟೆಲ್ ಗೆ ಮಕ್ಕಳನ್ನು ಸೇರಿಸಿದರೆ ಮಕ್ಕಳು ಕೊಂಚಮಟ್ಟಿಗೆ ಶಿಸ್ತು,ಸಂಯಮ, ಒಳ್ಳೆಯ ವಿಚಾರಗಳನ್ನು ಕಲಿಯುತ್ತಾರೆ ಎಂಬುದು ಪೋಷಕರ ಅಭಿಮತ. ಆದ್ರೆ, ನೀವೇನಾದರೂ ಮಕ್ಕಳನ್ನು ಹಾಸ್ಟೆಲಿಗೆ ಸೇರಿಸುವ ಯೋಜನೆ ಹಾಕಿದ್ದರೆ, ಈ ವಿಚಾರ ಮೊದಲು ತಿಳಿದುಕೊಳ್ಳಿ.

ತುಮಕೂರಿನ ಕೊರಟಗೆರೆ ಪಟ್ಟಣದಲ್ಲಿರುವ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯ (Post Metric girls Hostel) ದಲ್ಲಿ 17 ವರ್ಷದ ಹುಡುಗಿಯೊಬ್ಬಳು ರಾತ್ರೋರಾತ್ರಿ ಹಾಸ್ಟೆಲ್‌ ವಾರ್ಡನ್ ಗಳ ಕಣ್ಣು ತಪ್ಪಿಸಿ ಎಸ್ಕೇಪ್‌ (Girl Escaped) ಆಗಿದ್ದಷ್ಟೇ ಅಲ್ಲ ಬೆಳಗ್ಗೆ ಐದು ಗಂಟೆ ಹೊತ್ತಿಗೆ ಬಂದು ಮರಳಿ ರೂಮಿಗೆ ಬಂದು ಏನು ಆಗಿಯೇ ಇಲ್ಲವೆಂಬಂತೆ ಬೆಚ್ಚಗೆ ಮಲಗಿಬಿಟ್ಟಿದ್ದಾಳೆ. ಯಾರು ಆಕೆಯನ್ನು ಗಮನಿಸುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡ ವಿದ್ಯಾರ್ಥಿನಿ ರಾತ್ರಿ 11 ಗಂಟೆಯ ವೇಳೆಗೆ ಗೇಟ್‌ ಹಾರಿ ಪರಾರಿಯಾಗಿರುವ ಹುಡುಗಿ (Girl Escaped from Hostel) ಮಧ್ಯ ರಾತ್ರಿ(Midnight operation) ಹೋಗಿದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಕಾಡುತ್ತೆ.

ತುಮಕೂರು ಜಿಲ್ಲೆ (Tumkur News) ಕೊರಟಗೆರೆ ಪಟ್ಟಣದ ಹಾಸ್ಟೆಲ್‌ (Hostel in Koratagere) ನಲ್ಲಿ ಕಳೆದ ಶುಕ್ರವಾರದಂದು ನಡೆದ ಈ ಘಟನೆ ತಡವಾಗಿ ಮುನ್ನಲೆಗೆ ಬಂದಿದೆ. ವಿದ್ಯಾರ್ಥಿನಿ ಮಾರನೇ ದಿನ ಎಂದಿನಂತೆ ಇದ್ದುದ್ದರಿಂದ ಯಾರಿಗೂ ಸಣ್ಣ ಸಂದೇಹ ಕೂಡ ಬಂದಿಲ್ಲ ಎನ್ನಲಾಗಿದೆ.

ಈ ಹಾಸ್ಟೆಲ್‌ನಲ್ಲಿ ಪಿಯುಸಿ ಹಂತದಲ್ಲಿರುವ ವಿದ್ಯಾರ್ಥಿನಿಯರು ನೆಲೆಸುತ್ತಾರೆ. ಈ ಹಾಸ್ಟೆಲ್‌ಗೆ ಬಿಗಿ ಭದ್ರತೆ, ಸಿಸಿ ಕ್ಯಾಮೆರಾಗಳ ವ್ಯವಸ್ಥೆ, ವಾರ್ಡನ್‌ ಇಷ್ಟು ಬಿಗಿ ಭದ್ರತೆ ಇದ್ದರೂ ಕೂಡ ಎಲ್ಲರ ಕಣ್ಣು ತಪ್ಪಿಸಿ ವಿದ್ಯಾರ್ಥಿನಿ ನಡು ರಾತ್ರಿಯಲ್ಲಿ ಹೊರ ಹೋಗಿ ಬಂದಿರುವುದೇ ರೋಚಕ. ಶುಕ್ರವಾರ ತಡರಾತ್ರಿ 11 ಗಂಟೆಯ ಹೊತ್ತಿಗೆ ಹಾಸ್ಟೆಲ್‌ ವಾರ್ಡನ್‌ ತಮ್ಮ ದಿನದ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೋಗುವುದನ್ನು ಗಮನಿಸಿದ್ದಾಳೆ.

ಆ ಬಳಿಕ ವಿದ್ಯಾರ್ಥಿನಿ ಹಾಸ್ಟೆಲ್‌ನ ಹೊರಾವರಣದಲ್ಲಿ ಯಾರಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡ ವಿದ್ಯಾರ್ಥಿನಿ ಕಳ್ಳ ಹೆಜ್ಜೆ ಇಟ್ಟು ಮೊದಲ ಮಹಡಿಯಿಂದ ಕೆಳಗೆ ಇಳಿದಿದ್ದಾಳೆ. ಕೆಳಗಿನ ಮಹಡಿಯಲ್ಲೂ ಸ್ವಲ್ಪ ಹೊತ್ತು ನಿಂತು ನಂತರ ಗೇಟ್‌ನತ್ತ ಓಡಿ, ಅಲ್ಲಿಂದ ಗೇಟನ್ನು ಹತ್ತಿ ರಸ್ತೆ ಬದಿಗೆ ಬಂದಿದ್ದಾಳೆ. ಹುಡುಗಿ ಹಾಸ್ಟೆಲ್‌ನಿಂದ ಹೊರಗೆ ಬಂದು, ಗೇಟು ಹಾರಿ, ಕಾರು ಏರುವ ಸಿಸಿ ಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.ಈ ವೇಳೆಗೆ ಅವಳಿಗಾಗಿಯೇ ಕಾದು ನಿಂತಿದ್ದ ವಾಹನವನ್ನ ಏರುತ್ತಾಳೆ. ಆದರೆ, ಮಾರನೇ ದಿನ ಎಂದಿನಂತೆ ತನ್ನ ಕೋಣೆಯಲ್ಲೇ ಇದ್ದ ಹಿನ್ನೆಲೆ ಯಾರಿಗೂ ಈ ವಿಚಾರ ಗೊತ್ತಾಗಿಲ್ಲ.

ಈ ದೃಶ್ಯಗಳು ಹಾಸ್ಟೆಲ್‌ ಒಳಗಿನ ಕ್ಯಾಮೆರಾ ಮತ್ತು ಹಾಸ್ಟೆಲ್‌ ಗೇಟ್‌ಗೆ ಎದುರಾಗಿರುವ ಮನೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೇಕೋ ಏನೋ ಹಾಸ್ಟೆಲ್ ವಾರ್ಡನ್ ಸಿಸಿಟಿವಿ ಫೂಟೇಜ್ ಚೆಕ್ ಮಾಡಿದ ಸಂದರ್ಭ ಒಬ್ಬ ವಿದ್ಯಾರ್ಥಿನಿಯ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಂಶಯ ಹೆಚ್ಚಾಗಿ ವಿದ್ಯಾರ್ಥಿನಿಯ ಹುಚ್ಚಾಟ ಬಯಲಾಗಿದೆ. ಹೀಗಾಗಿ,ಹಾಸ್ಟೆಲ್‌ ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಪ್ರಕರಣದ ಕುರಿತಂತೆ ಕೊರಟಗೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ, ಮಧ್ಯರಾತ್ರಿಯ ಖುಷಿಗಾಗಿ ವಿದ್ಯಾರ್ಥಿನಿ ಎಸ್ಕೇಪ್ ಆಗಿರುವ ವಿಚಾರ ಬಯಲಾಗಿದೆ.

ಸಿಸಿಟಿವಿ ಫೂಟೇಜ್‌ಗಳನ್ನು ನೋಡಿದ ಸಂದರ್ಭ ಪೊಲೀಸರಿಗೆ ಆಕೆ ಹಾಸ್ಟೆಲ್‌ ಗೇಟ್‌ ಹತ್ತಿ ರಸ್ತೆಗೆ ಬಂದಾಗ ಅವಳಿಗಾಗಿ ಕಾದಿದ್ದ ಟಾಟಾ ಏಸ್‌ ವಾಹನದಲ್ಲಿ ಪರಾರಿಯಾಗಿದ್ದು ಗೊತ್ತಾಗಿದೆ. ಹುಡುಗಿಯನ್ನು ವಿಚಾರಿಸಿದಾಗ ಆಕೆ ತನ್ನನ್ನು ಕರೆದುಕೊಂಡು ಹೋದ ವ್ಯಕ್ತಿ ಆರ್ಯಗೌಡ ಎಂದು ಹೇಳಿದ್ದು, ಪೊಲೀಸರು ಇದೀಗ ಕೊರಟಗೆರೆ ತಾಲೂಕಿನ ದುಗ್ಗೇನಹಳ್ಳಿ ಗ್ರಾಮದ ಆರ್ಯಗೌಡನನ್ನು ಬಂಧಿಸಿದ್ದಾರೆ.

ಪೊಲೀಸರು ಆರೋಪಿಯನ್ನು ಹಾಸ್ಟೆಲ್‌ಗೆ ಕರೆದುಕೊಂಡು ಬಂದು ಸ್ಥಳ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿನಿಯ ಜೊತೆಗೆ ರಾತ್ರಿಯಿಡೀ ರೊಮ್ಯಾನ್ಸ್‌ ಮಾಡುವ ಆಸೆಯೊಂದಿಗೆ ಕರೆದುಕೊಂಡು ಹೋಗಿದ್ದ ಎನ್ನುವ ವಿಚಾರ ಬಯಲಾಗಿದೆ. ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ವ್ಯಕ್ತಿಯ ಪರಿಚಯವಾಗಿದ್ದು, ವಿದ್ಯಾರ್ಥಿನಿಯ ಮನವೊಲಿಸಿ ಜಾಲಿ ನೈಟ್ ರೌಂಡ್ಸ್‌ಗೆ ಕರೆದುಕೊಂಡು ಹೋಗಿರುವ ವಿಚಾರ ತಿಳಿದು ಬಂದಿದೆ. ಸದ್ಯ, ಪೋಲಿಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ

Leave A Reply

Your email address will not be published.