Tomato Price: ಟೊಮ್ಯಾಟೋ ಮಾರಾಟಕ್ಕೆ ಖುದ್ದು ಇಳಿದ ಸರ್ಕಾರ, ಇಂದಿನಿಂದಲೇ ಜಾರಿ !

Latest news intresting news government will reduce the tomato price

Government Selling Tomatoes For Rs 80: ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆಯಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಈಗಾಗಲೇ ತರಕಾರಿ(Vegitable), ವಿದ್ಯುತ್(Electricity )ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಇನ್ನೂ ಮುಂದಿನ ದಿನಗಳಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆಯೋ ಎಂಬ ಚಿಂತೆ ಕಾಡುತ್ತಿದೆ.ಈಗಾಗಲೇ ಟೋಮ್ಯಾಟೋ ಬೆಲೆ ಗಗನಕ್ಕೇರಿದೆ. ಈ ನಡುವೆ ಜನರಿಗೆ ಕೊಂಚ ಮಟ್ಟಿಗೆ ರಿಲೀಫ್ ನೀಡುವ ದೆಸೆಯಲ್ಲಿ ಸರಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.

ಒಂದೆಡೆ ವೀಳ್ಯದೆಲೆ ಬೆಲೆ ಕೂಡ ದುಪ್ಪಟ್ಟಾಗಿದ್ದು, ಮತ್ತೊಂದೆಡೆ ಎಣ್ಣೆ ಪ್ರಿಯರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಟೊಮೆಟೊ ಬೆಲೆ ಕೇಳಿ ಜನ ದಂಗಾಗಿ ಬಿಟ್ಟಿದ್ದಾರೆ. ದೇಶದ ಹೆಚ್ಚಿನ ಕಡೆಗೆ ಈ ಅವಧಿಯಲ್ಲಿ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಿಂದ ಟೊಮೆಟೋ ಹಣ್ಣಿನ ಪೂರೈಕೆ ಆಗುವುದು ವಾಡಿಕೆ. ಆದರೆ, ಈ ಬಾರಿ ಅತಿವೃಷ್ಟಿ ಮತ್ತು ಪ್ರವಾಹ ಉಂಟಾದ ಪರಿಣಾಮ ಟೊಮೆಟೋ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದೆ. ಕೋಲಾರದಲ್ಲಿ ಟೊಮೆಟೋ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ . ಹೀಗಾಗಿ, ಬೇಡಿಕೆಗಿಂತ ಸರಬರಾಜು ಕಡಿಮೆ ಇರುವ ಹಿನ್ನೆಲೆ ಟೊಮೆಟೋ ಬೆಲೆ ಏಕಾಏಕಿ ಏರಿಕೆ ಕಂಡಿದೆ. ರಾಜ್ಯದಲ್ಲೇ ಟೊಮೆಟೋ ಬೆಲೆ 100 ರೂಗಿಂತಲೂ ಹೆಚ್ಚಳ ಕಂಡಿದೆ. ದೇಶದ ಕೆಲವೆಡೆ ಟೊಮೆಟೋ ಬೆಲೆ 200 ರೂ ಗಡಿ ದಾಟಿದ್ದು ಕೂಡ ವರದಿಯಾಗಿದೆ.

ಕೆಂಪು ಸುಂದರಿಯ ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಹೀಗಾಗಿ, ಎರಡು ದಿನಗಳಿಂದ ಟೊಮೆಟೋವನ್ನು 90 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದೀಗ, ಸರ್ಕಾರ ಜುಲೈ 16ರಿಂದ ಕಿಲೋಗೆ 80 ರುಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ, ಜನ ಸಾಮಾನ್ಯರಿಗೆ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರ ಮೊನ್ನೆಯಿಂದ ದೆಹಲಿ ಎನ್ಸಿಆರ್ ಪ್ರದೇಶಗಳಲ್ಲಿ ವಾಹನಗಳ ಟೊಮೆಟೋ ಹಣ್ಣುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದೆ. ಜುಲೈ 15ರಿಂದ ದೇಶದ ವಿವಿಧ ನಗರಗಳಿಗೆ ಸರ್ಕಾರದಿಂದ ಟೊಮೆಟೋ ಹಣ್ಣಿನ ಮಾರಾಟ ವಿಸ್ತರಣೆಯಾಗಿದೆ.ಟೊಮೆಟೋ ಹಣ್ಣಿನ ಬೆಲೆ 80 ರುಪಾಯಿಗೆ ತಗ್ಗಿಸಿ ಮಾರಾಟ ಮಾಡುತ್ತಿದ್ದು, ಹೀಗಾಗಿ, ಟೊಮೆಟೋದ ಸಗಟು ಬೆಲೆಯೂ ಕಡಿಮೆಯಾಗಿದೆ.

Leave A Reply

Your email address will not be published.