Raichur: ಯುವತಿ ಹಾಕಿದ ಇನ್ಸ್ಟಾ ಗ್ರಾಮ್ ಪೋಸ್ಟ್, ಹಿಂದು – ಮುಸ್ಲಿಂ ಹಿಡಿದ ಸಂಘರ್ಷದ ದಾರಿ

Latest news Raichur news Controversial post about Allah from lady Instagram account

ರಾಯಚೂರು ಜಿಲ್ಲೆಯ ಸಿಂಧನೂರು (Sindhanur, Raichur) ತಾಲೂಕಿನ ಬಂಗಾಳಿ ಕ್ಯಾಂಪ್-2ರ ಸಮೀಪ ಹಿಂದೂ-ಮುಸ್ಲಿಂ ಯುವಕರ (Communal Clash) ನಡುವೆ ಸಂಘರ್ಷ ಉಂಟಾಗಿದೆ. ಯುವತಿಯ ಇನ್ಸ್ಟಾಗ್ರಾಂ ಖಾತೆಯಿಂದ (Instagram Post) ಅಲ್ಲಾಹುವಿನ ಕುರಿತ ವಿವಾದಾತ್ಮಕ ಪೋಸ್ಟ್ ಹಾಕಿದ್ದು, ಇದರಿಂದಾಗಿ ಮುಸ್ಲಿಂ ಯುವಕರು ಕುಪಿತರಾಗಿ ಗಲಾಟೆ ಮಾಡಿದ ಘಟನೆ ನಡೆದಿದೆ.

ಯುವತಿಯೊಬ್ಬಳು ಅಲ್ಲಾಹುವಿನ ಕುರಿತ ಇನ್ಸ್ಟಾಗ್ರಾಂ ಪೋಸ್ಟ್ ವೈರಲ್ ಆದ ಬಳಿಕ ಮುಸ್ಲಿಂ ಸಮುದಾಯದವರನ್ನು ಯುವತಿಯನ್ನು (Girl) ವಿಚಾರಿಸಲು ಬಂಗಾಳಿ ಕ್ಯಾಂಪ್ಗೆ (Bangali Camp) ಆಗಮಿಸಿದ್ದಾರೆ. ಈ ವೇಳೆ ಎರಡು ಕೋಮಿನ ನಡುವೆ ಗಲಾಟೆ ಉಂಟಾಗಿದ್ದು,ಮುಸ್ಲಿಂ ಸಮುದಾಯದ 50 ರಿಂದ 60 ಯುವಕರ ಗುಂಪು ಸ್ಥಳಕ್ಕೆ ಆಗಮಿಸಿ ಗಲಾಟೆ ಮಾಡಿದ್ದು ಆಗಮಿಸಿದ ಯುವಕರು ಸಿಂಧನೂರು ಪಟ್ಟಣದವರು ಎನ್ನಲಾಗಿದೆ.

ಪೋಸ್ಟ್ ಹಾಕಿದ ಯುವತಿಯನ್ನು ವಿಚಾರಣೆ ನಡೆಸಲು ಮುಸ್ಲಿಂ ಯುವಕರು ಬಂಗಾಳಿ ಕ್ಯಾಂಪ್ಗೆ ಬಂದು ಗಲಾಟೆ ಮಾಡಿ ಗ್ರಾಮಸ್ಥರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದಿರುವ ಬಗ್ಗೆ ಗ್ರಾಮಸ್ತರು ಆರೋಪ ಮಾಡಿದ್ದಾರೆ. ಇದೇ ವೇಳೆ ,ಅಕ್ರಮವಾಗಿ ಹಿಂದೂ ದೇವಸ್ಥಾನ ಪ್ರವೇಶಿಸಲು ಕೂಡ ಮುಸ್ಲಿಂ ಯುವಕರು ಮುಂದಾಗಿದ್ದಾರೆ. ಈ ವಿಚಾರ ತಿಳಿದು ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆಯ ಕುರಿತಂತೆ ಪೊಲೀಸರು ಅಕ್ಬರ್, ಶಾಮೀದ್, ತಾಜುದ್ದೀನ್ ಮತ್ತು ಸಮೀರ್ ಎಂಬ ನಾಲ್ವರನ್ನು ಬಂಧಿಸಿದ್ದು, ಮೂವತ್ತಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Leave A Reply

Your email address will not be published.