Kedarnath Temple: ಕೇದಾರನಾಥದಲ್ಲಿ ಮೊಬೈಲ್‌, ರೀಲ್‌ ಬ್ಯಾನ್‌! ಕಟ್ಟುನಿಟ್ಟಿನ ಆದೇಶ!!!

Latest news Strict order to ban mobile, reel in Kedarnath temple

ಉತ್ತರಾಖಂಡದ ಪ್ರಸಿದ್ಧ ಹಿಂದೂ ತೀರ್ಥಕ್ಷೇತ್ರ ಕೇದಾರನಾಥದಲ್ಲಿ ಈಗ ಎಲ್ಲಾ ಭಕ್ತರ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗಿದೆ. ಬಾಬಾ ಕೇದಾರನಾಥನ ಭಕ್ತರು ಇನ್ನು ಮುಂದೆ ದೇವಾಲಯದ ಒಳಗೆ ಯಾವುದೇ ರೀತಿಯ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮಾಡಲು ಸಾಧ್ಯವಾಗುವುದಿಲ್ಲ. ದೇವಸ್ಥಾನದ ಮುಂಭಾಗದಲ್ಲಿ ಹುಡುಗಿಯೊಬ್ಬಳು ತನ್ನ ಗೆಳೆಯನಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಕೇದಾರನಾಥ ದೇವಾಲಯದ ಹೊರಗೆ ನಿಷೇಧಕ್ಕೆ ಸಂಬಂಧಿಸಿದ ಬ್ಯಾನರ್ ಪೋಸ್ಟರ್‌ಗಳನ್ನು ಹಾಕಿದೆ.

ಭಕ್ತರು ಕೇದರನಾಥ ಧಾಮಕ್ಕೆ ಹೋಗಿ ದೇವಾಲಯದ ಮುಂದೆ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಅನೇಕ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಹಾಗಾಗಿ ದೇವಸ್ಥಾನ ಸಮಿತಿ ಈ ರೀತಿಯ ಚಟುವಟಿಕೆ ನಿಲ್ಲಿಸಲು ಈ ಕ್ರಮ ಕೈಗೊಂಡಿದೆ. ಹಾಗಾಗಿ ದೇವಸ್ಥಾನದ ಹೊರಭಾಗದಲ್ಲಿ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕಲಾಗಿದೆ. ಹಾಗೂ ದೇವಾಲಯದ ಆವರಣದಲ್ಲಿ ಯಾವುದೇ ರೀತಿಯ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ನಿಷೇಧ ಮಾಡಲಾಗಿದೆ ಎಂದು ಹೇಳಲಾಗಿದೆ.

ದೇವಾಲಯದ ಒಳಗೆ ಬರುವ ಮುನ್ನ ಒಳ್ಳೆಯ ಬಟ್ಟೆಗಳನ್ನು ಧರಿಸುವಂತೆ ದೇವಾಲಯದ ಸಮಿತಿಯು ಜನರಿಗೆ ಸೂಚನೆ ನೀಡಿದೆ. ಭಕ್ತರು ದೇವಾಲಯದ ಆವರಣದಲ್ಲಿ ಶಿಬಿರಗಳು ಅಥವಾ ಟೆಂಟ್‌ಗಳನ್ನು ಸ್ಥಾಪಿಸುವುದನ್ನು ಸಹ ನಿಲ್ಲಿಸಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬೋರ್ಡ್‌ಗಳಿವೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಇಲ್ಲಿನ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಈ ಕ್ಷೇತ್ರವು ಕೋಟ್ಯಂತರ ಜನರ ನಂಬಿಕೆಯ ಕೇಂದ್ರವಾಗಿದೆ. ಮತ್ತು ಜನರು ಅದನ್ನು ಗೌರವಿಸಬೇಕು. ಇದುವರೆಗೆ ಬದರಿನಾಥ ಧಾಮದಿಂದ ಅಂತಹ ಯಾವುದೇ ದೂರು ಬಂದಿಲ್ಲ ಎಂದು ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿದ್ದಾರೆ.

 

Leave A Reply

Your email address will not be published.