Wage revision: ಸಾರ್ವಜನಿಕ ಬ್ಯಾಂಕ್‌ ಉದ್ಯೋಗಿಗಳಿಗೆ ಶೀಘ್ರ ವೇತನ ಹೆಚ್ಚಳ ಸಾಧ್ಯತೆ?

latest news Wage revision Salary increase for bank employees soon

Wage revision : ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳಿಗೆ ವೇತನ ಪರಿಷ್ಕರಣೆಯ ಕುರಿತ ಪ್ರಸ್ತಾಪವನ್ನು 2023ರ ಡಿಸೆಂಬರ್ 1 ರೊಳಗೆ ಅಂತಿಮಗೊಳಿಸಲು ಸರ್ಕಾರ ( Wage revision) ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ಗೆ (Indian Banks association -IBA) ಸೂಚನೆ ನೀಡಿದೆ.

ಸಾರ್ವಜನಿಕ ಬ್ಯಾಂಕ್ ಉದ್ಯೋಗಿಗಳ ಈಗಿನ ವೇತನದ ಕುರಿತಾದ ಒಪ್ಪಂದವು (wage agreement) 2022ರ ನವೆಂಬರ್ 1ರಂದು ಕೊನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಐಬಿಎ ಮತ್ತು ಪಿಎಸ್ಯು ಬ್ಯಾಂಕ್ ಯೂನಿಯನ್ಗಳು ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿವೆ ಎನ್ನಲಾಗಿದೆ.

ಪಿಎಸ್ಯು ಬ್ಯಾಂಕ್ಗಳ ವೇತನ ಪರಿಷ್ಕರಣೆ ಮಾಡುವ ದೆಸೆಯಲ್ಲಿ ಅನೇಕ ವಿಚಾರಗಳನ್ನ ಪರಿಗಣಿಸುತ್ತದೆ. ಬ್ಯಾಂಕ್ಗಳ ಆರ್ಥಿಕ ಆರೋಗ್ಯ, ಜೀವನ ವೆಚ್ಚ, ಇತರ ವಲಯದ ಉದ್ಯೋಗಿಗಳ ವೇತನ ಇತ್ಯಾದಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ನಿರ್ಣಯ ಕೈಗೊಳ್ಳಲಾಗುತ್ತದೆ. ಬ್ಯಾಂಕ್ ಉದ್ಯೋಗಿಗಳ ಯೂನಿಯನ್ಗಳ ನಡುವೆ ವೇತನದ ಕುರಿತಾದ ಸಂವಾದ ನಡೆಸಿ ಮಾತುಕತೆ ಅಂತಿಮಪಡಿಸುವ ವಿಶ್ವಾಸವನ್ನು ಐಬಿಎ ಒಳಗೊಂಡಿದೆ.

ಇದೆಲ್ಲದರ ನಡುವೆ ಹಣಕಾಸು ಸಚಿವಾಲಯ ಐಬಿಎಗೆ, ಬ್ಯಾಂಕ್ ಉದ್ಯೋಗಿಗಳ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಕ್ರಮ ಕೈಗೊಳ್ಳಲು ಸೂಚಿಸಿದೆ. ಹಣಕಾಸು ಸಚಿವಾಲಯವು ಐಬಿಎ ಮತ್ತು ಬ್ಯಾಂಕ್ ಯೂನಿಯನ್ಗಳ ನಡುವೆ ಸೌಹಾರ್ದತೆಯ ನೆಲೆಯಲ್ಲಿ ಒಪ್ಪಂದ ನಡೆಯುವ ನಿರೀಕ್ಷೆ ಇಟ್ಟುಕೊಂಡಿದೆ. ಪ್ರಸ್ತುತ ಸಾರ್ವಜನಿಕ ವಲಯದ ಬ್ಯಾಂಕ್ಗಳು ಆರ್ಥಿಕವಾಗಿ ಉತ್ತಮ ಸ್ಥಿತಿಗತಿಯಲ್ಲಿದೆ. 2022-23ರಲ್ಲಿ ಸಾರ್ವಜನಿಕ ಬ್ಯಾಂಕ್ಗಳ ನಿವ್ವಳ ಆದಾಯ ಮೂರು ಪಟ್ಟು ಹೆಚ್ಚಳ ಕಂಡಿದೆ.

Leave A Reply

Your email address will not be published.