ಕೃಷಿ ಉದ್ಯಮಿ ಕೋರ್ಸ್ ಗೆ ಅರ್ಜಿ ಆಹ್ವಾನ! ಆಸಕ್ತರು ಈ ಕೂಡಲೇ ಸೇರಿಕೊಳ್ಳಿ

latest news Application for Agricultural Entrepreneur Course

ಇಂದು ಲಕ್ಷಗಟ್ಟಲೆ ಸಂಬಳ ಇರುವ ಉದ್ಯೋಗವಿದ್ದರು ಕೂಡ ಎಷ್ಟೋ ಮಂದಿ ಉದ್ಯೋಗ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡು ಅಧಿಕ ಲಾಭ ಪಡೆಯುವುದನ್ನು ಗಮನಿಸಬಹುದು. ಯಾವುದೇ ಉದ್ಯಮವಾದರು ಕೂಡ ಆರಂಭಿಸಿದಾಗ ತಗುಲಿದ ವೆಚ್ಚಕ್ಕಿಂತ ಹೆಚ್ಚಿನ ಲಾಭ ಪಡೆಯಬೇಕು ಎಂದು ಬಯಸುವುದು ಸಹಜ.ಹಾಗಿದ್ದರೆ, ನೀವು ಕೂಡ ಈ ಯೋಜನೆ ಹಾಕಿಕೊಂಡಿದ್ದರೆ, ಈ ಮಾಹಿತಿ ನಿಮಗೆ ನೆರವಾಗುವುದರಲ್ಲಿ ಸಂಶಯವಿಲ್ಲ.

ಸ್ವ ಉದ್ಯೋಗದ ಮೂಲಕ ಅಧಿಕ ಲಾಭ, ಹೂಡಿಕೆಗಿಂತ ಹೆಚ್ಚಿನ ಆದಾಯ ಗಳಿಸಬೇಕು ಎಂದು ಅಭಿಲಾಷೆ ಹೊತ್ತವರು, ವಿಶೇಷವಾಗಿ ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಲು ಬಯಸುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ನಿಮಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಲು ಪೂರಕ ಮಾಹಿತಿ ನೀಡುವ ನಿಟ್ಟಿನಲ್ಲಿ ಕಿರು ಉದ್ಯಮ ಪ್ರಾರಂಭಿಸಲು, ಪ್ರೋತ್ಸಾಹ ಮತ್ತು ಹೆಚ್ಚಿನ ಮಾಹಿತಿ ನೀಡುವ ದೆಸೆಯಲ್ಲಿ ಸಂವಾದ-ಬದುಕು ಸೆಂಟರ್‌ ಫಾರ್ ಲೈವಿಹುಡ್ ಲರ್ನಿಂಗ್ ಸಂಸ್ಥೆ, `ಕೃಷಿ ಉದ್ಯಮಿ’ ಎಂಬ ಮೂರು ತಿಂಗಳ ಸೆಮಿ ರೆಸಿಡೆನ್ಸಿಯಲ್ ಕೋರ್ಸ್ ಆಯೋಜನೆ ಮಾಡಿದೆ.

ಹಗಲಿರುಳು ದುಡಿದು ಕೃಷಿಯಲ್ಲೇ ಜೀವನ ನಡೆಸುವ ಅದೆಷ್ಟೋ ಮಂದಿಗೆ ಆದಾಯಕ್ಕಿಂತ ಹೆಚ್ಚು ವ್ಯಯವಾಗಿ ಲಾಭ ಬಿಡಿ , ಹೂಡಿಕೆ ಮಾಡಿದ ಕೂಡ ಕೆಲವೊಮ್ಮೆ ಕೈಗೆ ಸಿಗುವುದಿಲ್ಲ. ಹೀಗಾಗಿ, ಯುವಜನತೆಯ ಮನದಲ್ಲಿ ಕೃಷಿ ಕುರಿತು ಅರಿವು ಮೂಡಿಸುವ ಜೊತೆಗೆ ಬೇಸಾಯ ಮಾಡುವವರ ಕೈಯಲ್ಲಿ ಒಂದಿಷ್ಟು ಹಣ ಉಳಿಯುವಂತೆ ಮಾಡುವ ಸಲುವಾಗಿ ಮೂರು ತಿಂಗಳ ಸೆಮಿ ರೆಸಿಡೆನ್ಸಿಯಲ್ ಕೋರ್ಸ್ ಆಯೋಜಿಸಲಾಗಿದೆ. ಈ ಮೂಲಕ, ಯುವಜನರು ಕೃಷಿ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತೇಜನ ನೀಡುವ ಜೊತೆಗೆ ಕೃಷಿಕರ ಅರ್ಥಿಕ ಸ್ಥಿತಿ ಸುಧಾರಿಸಲು ನೆರವಾಗುವಂತೆ ಮಾಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಉದ್ಯಮಗಳ ಪ್ರಾರಂಭ, ಮಾರುಕಟ್ಟೆ ನಿರ್ವಹಣೆ, ಉದ್ಯಮ ನಿರ್ವಹಣೆ, ಹಣಕಾಸು ನಿರ್ವಹಣೆ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಕೋರ್ಸ್ ಪಡೆಯಲು ಬಯಸುವ ಆಸಕ್ತರು ಅರ್ಜಿ ಜುಲೈ 22ರ ಮೊದಲು ಅರ್ಜಿ ಸಲ್ಲಿಸುವುದು ಉತ್ತಮ. ಜುಲೈ 22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೋರ್ಸ್ ಆಯ್ಕೆ ಪ್ರಕ್ರಿಯೆ ನಡೆದ ಬಳಿಕ ಆಗಸ್ಟ್ ಮೊದಲ ವಾರದಿಂದ ಕೋರ್ಸ್ ಪ್ರಾರಂಭವಾಗಲಿದೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ: 9611562812, 8105818026 ಕರೆಮಾಡಬಹುದು. ಇಲ್ಲವೇ , farmer.fieldschool@ samvadabaduku.org Beer ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಕೆಳಕಂಡ ವಿಳಾಸ:
ಸಂವಾದ, ಬಂಜಾರಪಾಳ್ಯ, ಅಗರ ಗ್ರಾಮ, ತಾತಗುಣಿ ಅಂಚೆ, ಬೆಂಗಳೂರು ಉತ್ತರ -82 ಇಲ್ಲಿಗೆ ಕೃಷಿ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಸಂಪರ್ಕಿಸಬಹುದಾಗಿದೆ.

ಈ ಕೋರ್ಸ್‌ನಲ್ಲಿ ಸಾವಯವ ಗೊಬ್ಬರ, ಬೀಜ ಮತ್ತಿತರ ಕೃಷಿ ಒಳಸುರಿಗಳ ಉತ್ಪಾದನೆ ಮತ್ತು ಮಾರುಕಟ್ಟೆ ಕುರಿತ ತರಬೇತಿ ನೀಡಲಾಗುತ್ತದೆ. ಅಷ್ಟೆ ಅಲ್ಲದೇ, ಕೃಷಿ ಉಪಕರಣಗಳು ಮತ್ತು ಬೇಸಾಯಕ್ಕೆ ಅಗತ್ಯವಿರುವ ಬೆಂಬಲ ಸೇವೆಗಳು, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸೇರಿದಂತೆ ವಿವಿಧ ಹಂತಗಳಲ್ಲಿ, ಕೃಷಿ ಕ್ಷೇತ್ರದ ಕಿರು ಉದ್ಯಮ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅನುಭವಿ ಉದ್ಯಮಿಗಳ ಕ್ಷೇತ್ರ ಭೇಟಿ, ಕ್ಷೇತ್ರದ ತಜ್ಞರೊಂದಿಗೆ ಮಾತುಕತೆ, ಪ್ರಾಯೋಗಿಕ ತರಗತಿಗಳ ಮೂಲಕ ಈ ಕೋರ್ಸ್ ಅಧ್ಯಯನ ವಿಧಾನ ವಿರಲಿದೆ.

Leave A Reply

Your email address will not be published.