ಮತ್ತೊಂದು ಪ್ರೀತಿಯ ʼಸೀಮಾʼ; ಬಾಂಗ್ಲಾದೇಶದಿಂದ ಬಂದ ಜೂಲಿಯ ಪ್ರೀತಿಯ ಬಲೆಗೆ ಬಿದ್ದ ಹಿಂದೂ ಯುವಕ! ಆಕೆಯ ಹಿಂದೆ ಹೋದವ ಏನಾದ?

latest news fake love moradabad news ajay julie loveTragedy story

ಆನ್‌ಲೈನ್‌ ಪಬ್‌ಜಿ ಆಡುತ್ತಾ ಪ್ರೀತಿಯ ಬಲೆಯಲ್ಲಿ ಬಿದ್ದು, ಎರಡು ದೇಶಗಳ ಗಡಿಯನ್ನು ದಾಟಿ ಬಂದ ಪ್ರೇಮಿಗಳ ಸುದ್ದಿ ನಿಮಗೆ ತಿಳಿದೇ ಇರಬಹುದು. ನಾಲ್ಕು ಮಕ್ಕಳ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ ಹಾಗೂ ಗ್ರೇಟರ್‌ ನೋಯ್ಡಾದ ಸಚಿನ್‌ ಅವರ ಪ್ರೇಮ ಕಥೆ ಇನ್ನೂ ಜನರು ಅರ್ಥಮಾಡಿಕೊಳ್ಳುವ ಹಂತದಲ್ಲಿರುವಾಗಲೇ ಮೊರದಾಬಾದ್‌ನ ಸುನೀತಾ ಎಂಬ ಮಹಿಳೆ ಎಸ್‌ಎಸ್‌ಪಿಗೆ ಅರ್ಜಿ ಸಲ್ಲಿಸಿ ಸಂಚಲನ ಸೃಷ್ಟಿ ಮಾಡಿದ್ದಾರೆ. ಏನಿದು ಕಥೆ? ಬನ್ನಿ ತಿಳಿಯೋಣ.

ಸುನೀತಾ ಎಂಬ ಮಹಿಳೆ ತನ್ನ ಮಗ ಅಜಯ್‌ ಬಾಂಗ್ಲಾದೇಶದ ಜೂಲಿ ಎಂಬ ಮಹಿಳೆಯೊಂದಿಗೆ ವಾಟ್ಸಪ್‌ನಲ್ಲಿ ಚಾಟ್‌ ಮಾಡುತ್ತಿದ್ದುದಾಗಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜೂಲಿ ತನ್ನ ಹನ್ನೊಂದು ವರ್ಷದ ಮಗಳು ಹಲೀಮಾಳೊಂದಿಗೆ ಮೂರು ತಿಂಗಳ ಹಿಂದೆ ಮೊರಾದಾಬಾದ್‌ಗೆ ಬಂದಿದ್ದು, ಅಲ್ಲಿ ಸ್ವಲ್ಪ ದಿನ ವಾಸ ಮಾಡಿದ್ದು, ನಂತರ ಆಕೆ ಮುಸ್ಲಿಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ನಂತರ ನನ್ನ ಮಗ ಅಜಯ್‌ನೊಂದಿಗೆ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುನೀತಾ ಪ್ರಕಾರ, ಮದುವೆಯಾದ ಮೇಲೆ ಜೂಲಿ ತನ್ನ ವೀಸಾ ಡೇಟ್‌ ಹೆಚ್ಚಿಸುವ ಸಲುವಾಗಿ ಬಾಂಗ್ಲಾದೇಶಕ್ಕೆ ಹೋಗುವುದಾಗಿ ಹೇಳಿದ್ದಾಳೆ. ಆಕೆ ಮೊರಾದಾಬಾದ್‌ನಿಂದ ಕೋಲ್ಕತ್ತಾಗೆ ಹೋಗುವಾಗ ಮಗ ಅಜಯ್‌ ಕೂಡಾ ಅವಳ ಜೊತೆ ಹೋಗಿದ್ದ. ಆದರೆ ಕೋಲ್ಕತ್ತಾಗೆ ಹೋದ ಕೆಲವು ದಿನಗಳ ನಂತರ ಅಜಯ್‌ ಕರೆ ಮಾಡಿ ನಾನು ಆಕಸ್ಮಿಕವಾಗಿ ಗಡಿ ದಾಟಿ ಬಾಂಗ್ಲಾದೇಶ ತಲುಪಿರುವುದಾಗಿ ಹೇಳಿದ್ದಾನೆ. ಹಾಗಾಗಿ ನಾನು ಈಗ ಬಾಂಗ್ಲಾದೇಶದಲ್ಲಿದ್ದೇನೆ, 10-15ದಿನಗಳಲ್ಲಿ ನಾನು ಬರುತ್ತೇನೆ ಎಂದು ಹೇಳಿದ ಮಗ ಹಿಂತಿರುಗಿಲ್ಲ ಎಂದು ಹೇಳಿದ್ದಾರೆ.

ಕೆಲವು ದಿನಗಳ ನಂತರ ಮತ್ತೆ ಅಜಯ್‌ನಿಂದ ಕರೆ ಬರುತ್ತುದೆ. ನನಗೆ ಹಣ ಕಳಿಸು, ನನಗೆ ಹಣ ಬೇಕು ಎಂದು ಹೀಗೆ ಹೇಳುತ್ತಾ ಫೋನ್‌ ಡಿಸ್ಕನೆಕ್ಟ್‌ ಮಾಡುತ್ತಾನೆ. ಕರೆ ಕಟ್‌ ಮಾಡಿದ ತಕ್ಷಣ ಮಗ ರಕ್ತದಲ್ಲಿರುವ ಇರುವ ಫೋಟೋ ಅವರ ಮೊಬೈಲ್‌ಗೆ ಬರುತ್ತದೆ. ಇದನ್ನು ನೋಡಿದ ತಾಯಿ ಹೆದರಿ, ಪೊಲೀಸ್‌ ಠಾಣೆಗೆ ಬಂದಿದ್ದು, ಆದರೆ ಇಲ್ಲಿಯವರೆಗೆ ನ್ಯಾಯ ಸಿಕ್ಕಿಲ್ಲ ಎಂಬ ಮಾತನ್ನು ಹೇಳಿದ್ದಾರೆ.

ಬಾಂಗ್ಲಾದೇಶದಿಂದ ತನ್ನ ಮಗ ಅಜಯ್‌ನನ್ನು ಭಾರತಕ್ಕೆ ಕರೆತರುವಂತೆ ಸುನೀತಾ ಮಾಧ್ಯಮಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಸುನೀತಾ ಅವರು ಮೊರಾದಾಬಾದ್‌ನ ಎಸ್‌ಎಸ್‌ಪಿ ಅವರಿಗೆ ದೂರು ಪತ್ರವನ್ನು ಹಸ್ತಾಂತರಿಸಿದ್ದು, ಎಸ್‌ಎಸ್‌ಪಿ ಅವರು ತನಿಖೆಗೆ ಆದೇಶಿಸಿದ್ದಾರೆ.

Leave A Reply

Your email address will not be published.