Shubha Poonja: ಮದುವೆಯಾಗಿ 2 ವರ್ಷ ಆದರೂ ಆ ಆಸೆ ಈಡೇರಿಲ್ಲ, ನೇರವಾಗಿ ಗಂಡನ ಬಗ್ಗೆ ದೂರಿದ ಶುಭಾ ಪೂಂಜಾ

latest news Shubha Poonja complained about her husband After 2 years of marriage

Shubha Poonja: ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದ ನಟಿ ಶುಭಾ ಪೂಂಜಾ (Shubha Poonja) ಅವರು ಚಿತ್ರರಂಗದಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದ ಶುಭಾ ಪೂಂಜಾ ಅವರಿಗೆ ತಮಿಳು, ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟು ಅಲ್ಲಿಯೂ ತಮ್ಮ ಅಪೂರ್ವ ಅಭಿನಯದ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ನಡುವೆ ಪ್ರೀತಿಯಲ್ಲಿ ಬಿದ್ದ ನಟಿ ಶುಭಾ ಪೂಂಜಾ ತಮ್ಮ ಊರು ಮಜಲಬೆಟ್ಟು ಬೀಡುವಿನಲ್ಲಿ ಸುಮಂತ್ ಅವರ ಜೊತೆಗೆ 2020ರಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸುಮಂತ್ ಅವರನ್ನು ಎರಡು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಶುಭಾ ಪೂಂಜಾ ಪ್ರೀತಿಯಿಂದ ಚಿನ್ನಿ ಬಾಂಬ್ ಎಂದು ಕರೆಯುತ್ತಿದ್ದ ವಿಚಾರ ಇಡೀ ಕರ್ನಾಟಕಕ್ಕೆ ತಿಳಿದಿದೆ ಎನ್ನಬಹುದು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಚಿನ್ನಿ ಬಾಂಬ್ ಅವರದ್ದೇ ಜಪ ಮಾಡುತ್ತಿದ್ದದನ್ನು ಎಲ್ಲರೂ ಗಮನಿಸಿರುತ್ತಿರಿ. ಇದೀಗ,ತನ್ನ ನಲ್ಮೆಯ ಪತಿಯ ಮೇಲೆ ಶುಭಾ ಪೂಂಜಾ ಆರೋಪ ಮಾಡಿದ್ದಾರೆ.

ಸರಳವಾಗಿ ತನ್ನ ನೆಚ್ಚಿನ ಹುಡುಗನ ಕೈ ಹಿಡಿದ ಶುಭಾ ಪೂಂಜಾ ಮದುವೆಯಾಗಿ ಎರಡು ವರ್ಷ ಕಳೆದ ಬಳಿಕವೂ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ.ನಟಿ ಶುಭಾ ಪೂಂಜಾ ಅವರು ಸದ್ಯ, ನೈಜ ಘಟನೆ ಆಧಾರಿತ ಸಿನಿಮಾ ‘ಅಂಬುಜಾ’ ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ಈ ಚಿತ್ರದಲ್ಲಿ ರಜಿನಿ ಅವರು ಕೂಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೇ ಜುಲೈ 21ಕ್ಕೆ ತೆರೆಗೆ ಬರಲಿದ್ದು, ಈ ಸಿನಿಮಾದ ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ನಡುವೆ, ಮದುವೆಯಾದ ಎರಡು ವರ್ಷಗಳ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡುವಾಗ ನಟಿ ಶುಭಪುಂಜ ಅವರು ಮದುವೆಯಾಗಿ ಇಷ್ಟು ತಿಂಗಳುಗಳು ಕಳೆದಿದ್ದರು ಕೂಡ ನನ್ನ ಗಂಡ ಇನ್ನು ನನ್ನ ಆಸೆಯನ್ನು ಈಡೇರಿಸಿಲ್ಲ ಎನ್ನುವ ಹೇಳಿಕೆ ನೀಡಿದ್ದು, ಇದು ಸದ್ಯ ವೈರಲ್ ಆಗಿ ಸಂಚಲನ ಮೂಡಿಸಿದೆ. ತಮ್ಮ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ ಶುಭ ಅವರು ಮದುವೆಯಾಗಿ ಎರಡು ವರ್ಷಗಳಾದರೂ ತಮ್ಮ ಪ್ರೀತಿಯ ಗಂಡ ತನ್ನ ಆಸೆಯನ್ನು ಈಡೇರಿಸಿಲ್ಲ. ಸುಮಂತ್ ಬಿಲ್ಲವರವರು ಉದ್ಯೋಗದಲ್ಲಿ ಫುಲ್ ಬ್ಯುಸಿಯಾಗಿರುತ್ತಾರೆ. ಮತ್ತೊಂದೆಡೆ ನಟಿ ಶುಭ ಪೂಂಜ ಅವರು ಕೂಡ ಸಿನಿಮಾ ರಂಗದಲ್ಲಿ ಸಕ್ಕತ್ ಬ್ಯುಸಿ ಇರುವುದರಿಂದ ತಾವು ಪ್ಲಾನ್ ಮಾಡಿಕೊಂಡ ಹಾಗೆ ಹನಿಮೂನ್ ಪ್ಲೇಸ್ ಗಳಿಗೆ ಹೋಗಲು ಸಾಧ್ಯವಾಗಿಲ್ಲ ಎನ್ನುವ ಮೂಲಕ ಮಾತಿನಲ್ಲೇ ಹಾಸ್ಯಾಸ್ಪದವಾಗಿ ತಮ್ಮ ಗಂಡನ ಕಾಲೆಳೆದಿದ್ದಾರೆ.

Leave A Reply

Your email address will not be published.