Temple Travel: ನೀವೇನಾದರೂ ಧರ್ಮಸ್ಥಳ, ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಲು ಯೋಚನೆ ಮಾಡುತ್ತಿದ್ದೀರಾ? ಹಾಗಾದರೆ ಇದನ್ನೊಮ್ಮೆ ಗಮನಿಸಿ

Latest news Temple Travel intresting news Planning to visit Dharmasthala, Kukke Kshetra

Temple Travel: ಬೆಂಗಳೂರಿನಿಂದ ರೈಲಿನ ಮೂಲಕ ಕರಾವಳಿಗೆ ಪ್ರಯಾಣ ಮಾಡುವವರಿದ್ದರೆ ಭಾರತೀಯ ರೈಲ್ವೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಕರಾವಳಿಯ ದೇವಸ್ಥಾನ, ಧಾರ್ಮಿಕ ಕೇಂದ್ರಕ್ಕೆ ಹೋಗುವವರಿಗೆ ಇದೊಂದು ಮುಖ್ಯ ಸಂದೇಶ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿ ಹಲವಾರು ಧಾರ್ಮಿಕ ಸ್ಥಳಗಳಿಗೆ ಹೋಗುವವರಿದ್ದರೆ ಇಲ್ಲಿದೆ ಮುಖ್ಯವಾದ ಮಾಹಿತಿ

ಜುಲೈ 17ರಿಂದ ಮಂಗಳೂರು ಜಂಕ್ಷನ್‌-ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ ಬದಲಾಗಲಿದೆ. ಈ ಕುರಿತು ನೈಋತ್ಯ ರೈಲ್ವೆ ಆದೇಶ ನೀಡಿದೆ.
ಬೆಳಗ್ಗೆ 7 ಗಂಟೆಗೆ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್‌ನಿಂದ ರೈಲು ಹೊರಲಿದ್ದು ಅದೇ ದಿನ ಸಂಜೆ 4.30ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಹಾಸನ ಸಕಲೇಶಪುರ, ಚನ್ನರಾಯಪಟ್ಟಣ, ಶ್ರವಣಬೆಳಗೊಳ ಮುಂತಾದ ಊರುಗಳ ಮೂಲಕ ಸಂಚರಿಸುವ ಈ ರೈಲು ಬೆಂಗಳೂರು-ಕರಾವಳಿಯ ಸಂಪರ್ಕ ಹೊಂದಿದೆ.

ಹೊಸ ವೇಳಾಪಟ್ಟಿ ಜುಲೈ 17ರಂದು ಬದಲಾವಣೆಯಾಗಿದು, ಪ್ರಯಾಣಿಕರು ಸರಿಯಾಗಿ ಗಮನಿಸಿ ಟಿಕೆಟ್‌ ಬುಕ್‌ ಮಾಡಬೇಕೆಂದು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಸೂಚನೆ ನೀಡಿದೆ. ಈ ರೈಲು ಕರಾವಳಿ ಮತ್ತು ಬೆಂಗಳೂರು ನಡುವೆ ಸಂಚರಿಸುವ ಅನೇಕ ಪ್ರಯಾಣಿಕರಿಗೆ ಉಪಯೋಗವಾಗಿದೆ.

Leave A Reply

Your email address will not be published.