ಹೆತ್ತಮಗನನ್ನೇ ಪೆಟ್ರೋಲ್‌ ಸುರಿದು ಹತ್ಯಾ ಮಾಡಿದಳಾ ತಾಯಿ! ಅಷ್ಟಕ್ಕೂ ಕಾರಣ ಏನು?

latest news What is the reason why mother killed son by pouring petrol on him

ಬೆಂಗಳೂರು: ಸಾಮಾನ್ಯವಾಗಿ ಮಕ್ಕಳು ಏನೇ ಮಾಡಿದರೂ ಜಗವೇ ಮಗನ ವಿರುದ್ದ ಇದ್ದರೂ ತಾಯಿ ಮಾತ್ರ ಹೆತ್ತ ಮಕ್ಕಳನ್ನು ಬಿಟ್ಟು ಕೊಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ, ಇದಕ್ಕೆ ತದ್ವಿರುದ್ಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು!! ತಾಯಿಯೇ ತನ್ನ ಮಗನ ಮೇಲೆ ಪೆಟ್ರೋಲ್ (Petrol) ಎರಚಿ ಸುಟ್ಟು ಹಾಕಿದ ಪ್ರಸಂಗವೊಂದು ರಾಜ್ಯ ರಾಜಧಾನಿಯಲ್ಲಿ ವರದಿಯಾಗಿದೆ.

ಎಣ್ಣೆಯ ದಾಸರದವರು ಮಾಡುವ ಅವಾಂತರ ಅಷ್ಟಿಷ್ಟಲ್ಲ. ಇದೆ ರೀತಿ ಮದ್ಯವ್ಯಸನಿಯೊಬ್ಬ ದಿನಂಪ್ರತಿ ಕುಡಿದು ಮನೆಯವರ ಮೇಲೆ ದಾಂಧಲೆ ನಡೆಸುತ್ತಿದ್ದನಂತೆ. ಗಂಡನ ಗಲಾಟೆ ಕಂಡು ಬೇಸತ್ತ ಮಡದಿ ಮನೆ ಬಿಟ್ಟು ತವರು ಮನೆಗೆ ಹೋಗಿ ಬಿಟ್ಟಿದ್ದಾಳೆ. ಹೀಗಾಗಿ, ಮದ್ಯ ವ್ಯಸನಿ ತಾಯಿಯ ಜೊತೆಗೆ ವಾಸವಾಗಿದ್ದ.

ಚಾಂದ್ ಪಾಷಾ (40) ತಾಯಿಯಿಂದಲೆ ಸಾವಿನ ದವಡೆಗೆ ಸಿಲುಕಿದ ದುರ್ದೈವಿಯಾಗಿದ್ದು, ಸೋಮವಾರ ಕೂಡ ಕುಡಿದುಕೊಂಡು ಬಂದು ತಾಯಿ ಜೊತೆ ಗಲಾಟೆ ಮಾಡಿದ್ದನಂತೆ. ಆ ಬಳಿಕ ಸಂಜೆ 4:45ರ ಸುಮಾರಿಗೆ ಇನ್ನೊಮ್ಮೆ ಕಂಠಪೂರ್ತಿ ಕುಡಿದು ಬಂದು ಮನೆಯ ಹೊರಗಡೆ ಕುಳಿತಿದ್ದಾನೆ. ಈ ಸಂದರ್ಭ ತಾಯಿಯೆ ಮಗನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಕೊಲೆ ಮಾಡಿದ ತಾಯಿ ಸೂಫಿಯಾ (60) ಎನ್ನಲಾಗಿದೆ.

ಗಂಡನ ಹಲ್ಲೆಯನ್ನು ತಾಳಲಾರದೇ ಆತನ ಹೆಂಡತಿ ಮನೆ ಬಿಟ್ಟು ಹೋಗಿದ್ದರು ಕೂಡ ಬುದ್ಧಿ ಕಲಿಯದ ಚಾಂದ್‌ ಪಾಷ ಮತ್ತೆ ಮದ್ಯವ್ಯಸನವನ್ನು ಮುಂದುವರೆಸಿ ಹೆಂಡತಿಯನ್ನು ಮರಳಿ ಮನೆಗೆ ಕರೆತರುವಂತೆ ತಾಯಿಯೊಂದಿಗೆ ಪ್ರತಿನಿತ್ಯ ಜಗಳ ಮಾಡುತ್ತಾ ಹಲ್ಲೆಯನ್ನು ಮಾಡುತ್ತಿದ್ದ ಎನ್ನಲಾಗಿದೆ. ಮಗನ ಗಲಾಟೆ ತಾಳಲಾರದೆ ತಾಯಿ ಕೊಲ್ಲುವ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಬೆಂಕಿಯಲ್ಲಿ ಸುಟ್ಟು ಚೀರಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ನೀರು ಹಾಕಿ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್‌ ಸುರಿದಿದ್ದರಿಂದ ಶೇ.80ಕ್ಕು ಅಧಿಕ ದೇಹದ ಭಾಗಗಳು ಸುಟ್ಟು ಹೋಗಿತ್ತು. ಹೀಗಾಗಿ, ಆಸ್ಪತ್ರೆಗೆ ಹೋಗುವ ಮೊದಲೇ ಮದ್ಯವ್ಯಸನಿ ಚಾಂದ್‌ಪಾಷ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಸದ್ಯ, ಈ ಘಟನೆಯ ಸಂಬಂಧ ಆರೋಪಿ ತಾಯಿ ಸೂಫಿಯಾಳನ್ನ ಪೊಲೀಸರು ಬಂಧಿಸಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply

Your email address will not be published.