Udupi: ವರ್ಷದ ಹಿಂದೆ ಕುಡಿತ ಬಿಟ್ಟಿದ್ದ ತಂದೆ ಮತ್ತೆ ಮದ್ಯ ಸೇವನೆ, ನೊಂದ ಪುತ್ರ ನೇಣು ಬಿಗಿದು ಆತ್ಮಹತ್ಯೆ

 

ಉಡುಪಿ : ವರ್ಷದ ಹಿಂದೆ ಕುಡಿತ ಬಿಟ್ಟಿದ್ದ ತಂದೆ ಮತ್ತೆ ಕುಡಿಯಲು ಆರಂಭಿಸಿದ್ದಾರೆಂದು ನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬಲ್ಲಿ ನಡೆದಿದೆ.

ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮುಳ್ಳೂರು ಹೈಗೋಳಿ ಬಳಿಯ ಕೌಶಿಕ್ (16) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವರು.ಕೌಶಿಕ್ ಬಜಗೋಳಿಯ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾರೆ.

ಕೌಶಿಕ್‌ನ ತಂದೆ ಗೋಪಾಲ್ ಎಂಬವರು ಕಳೆದ ವರ್ಷ ಕುಡಿತ ಬಿಟ್ಟಿದ್ದರು.ಆ ಸಮಯದಲ್ಲಿ ಗೋಪಾಲ ಅವರಲ್ಲಿ ಮಗ ಕೌಶಿಕ್ ನೀವು ಮತ್ತೆ ಕುಡಿಯಲು ಪ್ರಾರಂಭಿಸಿದ್ದರೆ ಜೀವ ಕಳೆದುಕೊಳ್ಳುವುದಾಗಿ ತಿಳಿಸಿದ್ದು, ಒಂದು ವರ್ಷ ಕುಡಿತ ಬಿಟ್ಟ ಗೋಪಾಲ್ ಜು. 17ರಂದು ಮದ್ಯ ಸೇವನೆ ಮಾಡಿದ್ದರು. ಇದರಿಂದ ತೀವ್ರ ನೊಂದು ಕೊಂಡಿದ್ದ ಕೌಶಿಕ್ ನೇಣಿಗೆ ಶರಣಾಗಿ ಪ್ರಾಣ ಕಳೆದಿಕೊಂಡಿದ್ದಾರೆ.

Leave A Reply

Your email address will not be published.