Shakti yojana: ಶಕ್ತಿ ಯೋಜನೆಯಿಂದ ಇವರಿಗೆ ಭಾರೀ ಲಾಭ: ಯಾರಿಗೆ ಹೊಡೆತ?

latest news congress guarantees Who will lose and who will benefit from Shakti Yojana

Shakthi Yojana:ಕರ್ನಾಟಕದ ಜನತೆಗೆ ಐದು ಗ್ಯಾರಂಟಿಯನ್ನು ಘೋಷಣೆ ಮಾಡುವ ಮೂಲಕ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದ್ದ ಕಾಂಗ್ರೆಸ್ ಈಗ ಚುನಾವಣಾ ಪೂರ್ವ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳ ಜಾರಿಗೆ ಮುಂದಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್(Congress Party,) ಹಲವು ಕ್ಯಾಂಪೇನ್ ಹಾಗೂ ತಂತ್ರಗಾರಿಕೆಗಳ ಜೊತೆಗೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಯುವನಿಧಿ, ಶಕ್ತಿ ಹಾಗೂ ಅನ್ನಭಾಗ್ಯ. ಈ ಐದು ಗ್ಯಾರಂಟಿಗಳು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೈಹಿಡಿದಿದ್ದು ಗೊತ್ತೇ ಇದೆ. ಅದರಲ್ಲಿ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು, ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತರಲು ಕೈ ಪಾಳಯ ಹರಸಾಹಸ ಪಡುತ್ತಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಯ(Shakthi Yojana) ಜೂನ್ 11ರಂದು ಜಾರಿಗೆ ಬಂದು ಈಗಾಗಲೇ ಒಂದು ತಿಂಗಳು ಪೂರ್ಣಗೊಂಡಿದೆ. ಮಹಿಳೆಯರಿಗೆ(Women )ನೆರವಾಗುವ ನಿಟ್ಟಿನಲ್ಲಿ ಗೃಹ ಜ್ಯೋತಿ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದ್ದು,ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕೆ(Women Empowerment)ಉತ್ತೇಜನ ನೀಡುವುದು ಯೋಜನೆಯ ಉದ್ದೇಶವಾಗಿದೆ.

ಶಕ್ತಿ ಯೋಜನೆ ಮೂಲಕ ಮಹಿಳೆಯರು ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅನುವು ಮಾಡಿಕೊಡಲಾಗಿದೆ. ‘ಶಕ್ತಿ’ ಸ್ಮಾರ್ಟ್ಕಾರ್ಡ್ ವಿತರಣೆ ಮಾಡಲಿದ್ದು, ಸದ್ಯ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯ ಅರಂಭವಾಗಿಲ್ಲ. ಅಲ್ಲಿಯವರೆಗೆ ವಿಳಾಸವಿರುವ ಯಾವುದೇ ದಾಖಲೆಯಾದರೂ ಅಂದರೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಪ್ರಯಾಣಿಸಲು ಅನುವು ಮಾಡಿಕೊಡಲಾಗಿದೆ.

ಜೂನ್ 11 ರಿಂದ ಜುಲೈ 10ರ ತನಕ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್ಗಳಲ್ಲಿ 32.89 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ 16.73 ಕೋಟಿ ಮಹಿಳೆಯರು. ಶೇ 50.86ರಷ್ಟು ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.

ಶಕ್ತಿ ಯೋಜನೆ ನಿಜವಾಗಿಯೂ ಶಕ್ತಿ ತುಂಬಿದ್ದು ಯಾರಿಗೆ?
ಪ್ರತಿದಿನ ಓಡಾಟ ನಡೆಸುವ ಅನೇಕ ಮಂದಿ ಉದ್ಯೋಗದ ನಿಮಿತ್ತ ಹೊರ ಜಿಲ್ಲೆಗೆ ಬರುವುದು ಸಹಜ. ಹೀಗೆ ವಾಸ್ತವ್ಯ, ಊಟ,ಓದು , ಸ್ವಂತ ಖರ್ಚು, ಬಾಡಿಗೆ ಹೀಗೆ ಪ್ರತಿಯೊಂದು ದರ ಏರಿಕೆ ಕಾಣುತ್ತಿರುವಾಗ ದಿನನಿತ್ಯ ಓಡಾಟ ನಡೆಸುವ ಅದೆಷ್ಟೋ ಯುವತಿಯರಿಗೆ ಶಕ್ತಿ ಯೋಜನೆ ಹೆಚ್ಚು ಉಪಯೋಗವಾಗುತ್ತಿದ್ದು, ಹಣ ಉಳಿತಾಯದ ಮೂಲಕ ತಮ್ಮ ಇನ್ನಿತರ ಖರ್ಚಿಗೆ ಹಣ ವಿನಿಯೋಗ ಮಾಡಲು ನೆರವಾಗುತ್ತಿದೆ.

ಪ್ರಮುಖವಾಗಿ ಮಧ್ಯಮವರ್ಗ ಹಾಗೂ ಬಡ ವರ್ಗದ ದುಡಿಯುವ ಮಹಿಳೆಯರಿಗೆ ಈ ಯೋಜನೆಯು ಹೆಚ್ಚು ಪ್ರಯೋಜನಕಾರಿಯಾಗಿದೆ. ಶಕ್ತಿ ಯೋಜನೆ ಮೂಲಕ ವ್ಯಾಸಂಗ ಮಾಡುತ್ತಿರುವ ಎರಡು ಮೂರು ಮಂದಿ ಮಕ್ಕಳಿದ್ದರೆ , ಇಬ್ಬರು ಹೆಣ್ಣು ಮಕ್ಕಳು ಆಗಿದ್ದರೆ, ಕೊಂಚ ಮಟ್ಟಿಗಾದರೂ ಹಣ ಉಳಿತಾಯವಾಗಲಿದ್ದು , ಮಧ್ಯಮ ಹಾಗೂ ಬಡ ಕುಟುಂಬದ ಜನರಿಗೆ ಒಂದೊಂದು ರೂಪಾಯಿ ಕೂಡ ತುಂಬಾ ಮುಖ್ಯವಾಗುತ್ತದೆ.ಪ್ರತಿ ಬಾರಿ ಮಹಿಳೆಯರು ಎಲ್ಲಿಗಾದರೂ ಹೋಗಬೇಕಾದ ಗಂಡನ ಇಲ್ಲವೇ ಮನೆಯವರ ಬಳಿ ಹಣಕ್ಕಾಗಿ(Money)ಬೇಡಿಕೆಯಿಡುವ ಅವಶ್ಯಕತೆ ಈಗಿಲ್ಲ. ತಮಗೆ ಬೇಕಾದಲ್ಲಿ ಉಚಿತವಾಗಿ ಓಡಾಟ ನಡೆಸಬಹುದು.

ಶಕ್ತಿ ಆರ್ಥಿಕವಾಗಿ ಹೊಡೆತ ನೀಡಿದ್ದು ಯಾರಿಗೆ?
ಶಕ್ತಿ ಯೋಜನೆ ಜಾರಿ ಬಳಿಕ ಖಾಸಗಿ ಬಸ್ಗಳು ಜನರಿಲ್ಲದೆ ಬಿಕೋ ಎನ್ನುತ್ತಿದೆ. ಇದರ ಜೊತೆಗೆ ಆಟೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ( auto Passengers)ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಹೀಗಾಗಿ ಆಟೋಗಳಿಗೆ ಕೂಡ ನಷ್ಟ ಉಂಟಾಗುತ್ತಿದೆ. ಕರ್ನಾಟಕ ಖಾಸಗಿ ವಾಹನ ಮಾಲೀಕರ ಒಕ್ಕೂಟ ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ತಮ್ಮ ವ್ಯಾಪಾರಕ್ಕೆ ಶೇಕಡ 50ರಷ್ಟು ಹೊಡೆತ ಬಿದ್ದಿರುವುದಾಗಿ ಆರೋಪ ಮಾಡಿದೆ. ಇದೇ ರೀತಿ, ರಾಜ್ಯ ಸಾರಿಗೆ ನಿಗಮಗಳಿಗೆ ಸರ್ಕಾರ ಮರುಪಾವತಿ ಮಾಡದಿದ್ದಲ್ಲಿ ಜುಲೈ 28 ರಂದು ರಾಜ್ಯಾದ್ಯಂತ ಮುಷ್ಕರ ನಡೆಸುವುದಾಗಿ ಬೆದರಿಕೆಯೊಡ್ಡಿದೆ.

Leave A Reply

Your email address will not be published.