johnson & Johnson Baby Powder case: ಮಕ್ಕಳ ಪೌಡರ್‌ ಬಳಸಿ ಕ್ಯಾನ್ಸರ್‌ಗೆ ತುತ್ತಾದ ವ್ಯಕ್ತಿ! 154 ಕೋಟಿ ದಂಡ ತೆರಲು ಸೂಚನೆ!!!

Latest news crime news johnson & Johnson Baby Powder case

ಮಕ್ಕಳ ಆರೋಗ್ಯದ ಬಗ್ಗೆ ತಂದೆ ತಾಯಂದಿರು ಕಾಳಜಿ ವಹಿಸುತ್ತಾರೆ. ಹಾಗೆನೇ ಮಕ್ಕಳ ಚರ್ಮ ಕೂಡಾ ತುಂಬಾ ಮೃದುವಾಗಿರುವುದರಿಂದ ಅವುಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕು. ಹಾಗಾಗಿ ತಪ್ಪಾದ ಉತ್ಪನ್ನಗಳನ್ನು ಬಳಸಿದರೆ ಅದರ ರಿಸಲ್ಟ್‌ ಎಷ್ಟು ಭೀಕರವಾಗಿರುತ್ತದೆ ಎಂದು ನೀವು ಊಹಿಸಲೂ ಸಾಧ್ಯವಿಲ್ಲ. ಅಂತಹ ಒಂದು ಘಟನೆ ಈಗ ಬೆಳಕಿಗೆ ಬಂದಿದ್ದು, ಈ ಕಂಪನಿಯ ಪುಡಿಯ ಬಳೆಕಯಿಂದಾಗಿ, ಕಂಪನಿಗೆ 154 ಕೋಟಿ ದಂಡ ಪಾವತಿಸಲು ಆದೇಶ ನೀಡಲಾಗಿದೆ. ಇದು ಯಾವ ಪ್ರಕರಣ? ಏನಿದು ವಿಷಯ? ತಿಳಿಯೋಣ ಬನ್ನಿ.

ಈ ವಿಷಯವು ಪ್ರಸಿದ್ಧ ಜಾನ್ಸನ್‌ ಮತ್ತು ಜಾನ್ಸನ್‌ ಕಂಪನಿಗೆ ಸಂಬಂಧಪಟ್ಟಿದ್ದು. ಈ ಕಂಪನಿ ಮಕ್ಕಳ ಪೌಡರ್‌ ತಯಾರಿಕೆಯಲ್ಲಿ ಪ್ರಪಂಚದಾದ್ಯಂತ ಹೆಸರು ಮಾಡಿದೆ. ಆದರೆ ಇತ್ತೀಚಿನ ಪ್ರಕರಣದಲ್ಲಿ ಓರ್ವ ವ್ಯಕ್ತಿಗೆ 154 ಕೋಟಿ ರೂಪಾಯಿ ದಂಡ ಪಾವತಿಸಬೇಕೆಂದು ಯುಎಸ್‌ ನ್ಯಾಯಾಲಯವು ಕಂಪನಿಗೆ ಆದೇಶ ನೀಡಿದೆ. ಜಾನ್ಸನ್‌ ಮತ್ತು ಜಾನ್ಸನ್‌ ಬೇಡಿ ಪೌಡರ್‌ ಬಳಕೆಯಿಂದಾಗಿ ತನಗೆ ಕ್ಯಾನ್ಸರ್‌ ಬಂದಿದೆ ಎಂದು ಆರೋಪಿಸಿ ಈ ವ್ಯಕ್ತಿ ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದರು.

ಇದು ಅಮೆರಿಕದಲ್ಲಿ ನಡೆದ ಘಟನೆಯಾಗಿದ್ದು, ಆಂಥೊನಿ ಹೆರ್ನಾಂಡೆಜ್‌ ವಲಾಡೆಜ್‌ ಎಂಬ ವ್ಯಕ್ತಿಯೇ ಈ ಪ್ರಕರಣದ ರುವಾರಿ. ಈ ವ್ಯಕ್ತಿ ಪ್ರಕರಣ ದಾಖಲಿಸುವ ಮೂಲಕ ಕಂಪನಿ ವಿರುದ್ಧ ಆರೋಪ ಮಾಡಿದ್ದಾರೆ. ವಲಾಡೆಜ್‌ ಅವರು ಬಾಲ್ಯದಿಂದಲೂ ಜಾನ್ಸನ್‌ ಮತ್ತು ಜಾನ್ಸನ್‌ ಬೇಡಿ ಪೌಡರ್‌ ಬಳಕೆ ಮಾಡುತ್ತಿರುವುದಾಗಿ ಆರೋಪ ಮಾಡಿದ್ದು, ಈ ಪೌಡರ್‌ನಿಂದಾಗಿ ನನಗೆ ಕ್ಯಾನ್ಸರ್‌ ಬಂದಿದೆ. ಈ ಪುಡಿಯ ದೀರ್ಘಾವಧಿಯ ಬಳಕೆಯ ಬಳಿಕ ಎದೆಯ ಬಳಿ ಮೆಸೊಥೆಲಿಯೊಮಾ ಎಂಬ ಕ್ಯಾನ್ಸರ್‌ ಕಾಣಿಸಿಕೊಂಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Leave A Reply

Your email address will not be published.