U.T. KHADER: ನಾನು ಮನುಷ್ಯನಲ್ವಾ ಮಾರ್ರೆ ಊಟಕ್ಕೆ ಕರೆದ್ರು, ಹೋಗಿದ್ದೆ – ಸ್ಪೀಕರ್ ಖಾದರ್ ಕೊಟ್ರು ನೇರ ಪ್ರತಿಕ್ರಿಯೆ

Latest news I was invited to dinner as a man Speaker U.T. KHADER direct response

U.T. KHADER: ಐತಿಹಾಸಿಕ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಚುನಾವಣಾ ಪೂರ್ವ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹರಸಾಹಸ ಪಡುತ್ತಿದೆ. ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್ (U.T. KHADER) ಅವರನ್ನು ಕಮಲ ಪಾಳಯದ ನಾಯಕರು ಕಾಲೆಳೆಯುವ ಪ್ರಯತ್ನ ನಡೆಸಿದ ಘಟನೆ ನಡೆದಿದೆ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್‌ ಇಂಡಿಯನ್‌ ಕಾನ್ಫರೆನ್ಸ್‌ ಆಫ್‌ ಇಂಟಲೆಕ್ಚುವಲ್ಸ್‌ ಅವರು ನೀಡುವ “ದಿ ಗ್ರೇಟ್‌ ಸನ್‌ ಆಫ್‌ ಇಂಡಿಯಾ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದಿಲ್ಲಿಯ ಇಂಡಿಯಾ ಇಂಟರ್‌ ನ್ಯಾಶನಲ್‌ ಸೆಂಟರ್‌ ನಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಶಕ್ತಿಪ್ರದರ್ಶನ ನಡೆದಿದ್ದು, ಈ ವೇಳೆ ಪಕ್ಷದ ಘಟಾನುಘಟಿ ನಾಯಕರು ಭಾಗಿಯಾಗಿದ್ದರು. ಇದರ ಭಾಗವಾಗಿ ಸೋನಿಯಾ ಗಾಂಧಿ ಅವರು ಹಮ್ಮಿಕೊಂಡಿದ್ದ ಈ ಡಿನ್ನರ್ ಪಾರ್ಟಿಗೆ ಸ್ಪೀಕರ್ ಯು.ಟಿ ಖಾದರ್ ಕೂಡ ತೆರಳಿದ್ದರು. ಈ ವಿಚಾರವನ್ನೆ ಅಸ್ತ್ರವನ್ನಾಗಿಸಿ ಬಿಜೆಪಿ ನಾಯಕರು ಸ್ಪೀಕರ್ ಮೇಲೆ ಟೀಕಾ ಪ್ರಹಾರ ನಡೆಸಲು ಮುಂದಾದರು.

ಕಲಾಪದಲ್ಲಿ ಬಜೆಟ್ ಮೇಲೆ ಚರ್ಚೆ ನಡೆಸುವ ವೇಳೆ, ಬಿಜೆಪಿ ನಾಯಕರು ನೀವು ಸೋನಿಯಾ ಗಾಂಧಿ ಯವರನ್ನ ಭೇಟಿ ಮಾಡಿದ್ದಿರಂತೆ, ಡಿನ್ನರ್ ಪಾರ್ಟಿಗು ಕೂಡ ಹೋಗಿದ್ದರಂತೆ. ನೀವು ಸ್ಪೀಕರ್ ಸ್ಥಾನವನ್ನು ಅಲಂಕರಿಸಿದ ಮೇಲೆ ಹೀಗೆ ಡಿನ್ನರ್ ಪಾರ್ಟಿಗೆ ಹೋಗೋದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.
‘ದಿ ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿಯನ್ನು ತಮ್ಮ ಮುಡಿಗೆ ಹಾಕಿಕೊಂಡ ಬಳಿಕ ಮಹಾಘಟಬಂಧನ್ ನಾಯಕರ ಡಿನ್ನರ್ ಪಾರ್ಟಿಗೆ ತೆರಳಿದ್ದಾರೆ . ಇದನ್ನು ಪ್ರಶ್ನಿಸಿದ ಶಾಸಕ ಆರಗ ಜ್ಞಾನೇಂದ್ರ ಅವರು, ನೀವು ‘ವೆಸ್ಟ್ಎಂಡ್ ಹೊಟೇಲ್ನಲ್ಲಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿರುವ ವಿಚಾರ ಪತ್ರಿಕೆಗಳಲ್ಲಿ ಕೂಡ ಜಗಜ್ಜಾಹಿರಾಗಿದೆ. ನೀವು ಸಭಾಧ್ಯಕ್ಷರ ಸ್ಥಾನ ಅಲಂಕರಿಸಿದರು ಕೂಡ ಪಕ್ಷಾತೀತರಾಗುತ್ತೀರಿ. ಈ ಸ್ಥಾನದಲ್ಲಿ ಕುಳಿತ ಬಳಿಕ ಯಾವುದೇ ಪಕ್ಷದ ಹಂಗಿಗೂ ಒಳಗಾಗಬಾರದು.ಅದೇ ರೀತಿ ಭೇಟಿ ಮಾಡುವುದು ಸರಿಯಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

ಸಭಾಧ್ಯಕ್ಷ ಯು.ಟಿ ಖಾದರ್ ಅವರು ತಮ್ಮ ಮೇಲೆ ಟೀಕಾ ಪ್ರಹಾರ ನಡೆಸುವ ಮಂದಿಗೆ ಸರಿಯಾದ ಉತ್ತರ ನೀಡಿದ್ದಾರೆ.
“ನಾನೂ ಕೂಡ ಮನುಷ್ಯ, ನೀವು ಕರೆದರೂ ಊಟಕ್ಕೆ ಬರುತ್ತೇನೆ ಎಂದು ಹೇಳಿದ್ದು, ಮುಖ್ಯಮಂತ್ರಿಯವರು ಕೂಡ ನಿನ್ನೆ ರಾತ್ರಿ ಔತಣಕೂಟಕ್ಕೆ ಆಹ್ವಾನ ನೀಡಿದ್ದರು. ಹೀಗಾಗಿ, ವೆಸ್ಟ್ ಎಂಡ್ ಹೊಟೇಲ್ಗೆ ತೆರಳಿದ್ದೆ. ಇದರಲ್ಲಿ ಶಿಷ್ಟಾಚಾರ ಉಲ್ಲಂಘನೆ ಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದುಕಲಾಪದ ಚರ್ಚೆ ವೇಳೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಆರಗ ಜ್ಞಾನೇಂದ್ರ ಅವರಿಗೆ ತಿಳಿಸಿದ್ದಾರೆ.

Leave A Reply

Your email address will not be published.