National youth volunteer Scheme 2023: ರಾಷ್ಟ್ರೀಯ ಸ್ವಯಂ ಸೇವಕ ಯೋಜನೆಯ ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡೀಟೈಲ್ಸ್!

Latest news intresting news National youth volunteer Scheme 2023

National Youth Volunteer Scheme 2023: ಕೇಂದ್ರ ಸರ್ಕಾರವು ಯುವ ಜನೆತೆಗಾಗಿ ರಾಷ್ಟ್ರೀಯ ಯುವ ಸ್ವಯಂಸೇವಕ ಯೋಜನೆಯನ್ನು (National Youth Volunteer Scheme 2023)ಜಾರಿಗೆ ತಂದಿದ್ದು, ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವಾಲಯದ ನೇತೃತ್ವದ ನೆಹರು ಯುವ ಕೇಂದ್ರ ಸಂಘಟನೆ (NYKS) ಈ ಯೋಜನೆಯನ್ನು ಮೇಲ್ವಿಚಾರಣೆಯನ್ನು ಮಾಡುತ್ತದೆ.ನೀವು ಕೂಡ ಈ ಯೋಜನೆಯಡಿ ಭಾಗಿಯಾಗಬೇಕು ಅಂದುಕೊಂಡಿದ್ದರೆ, ಈ ಕುರಿತ ಮಾಹಿತಿ ತಿಳಿದಿರುವುದು ಅವಶ್ಯಕ. ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಪ್ರತಿ ವರ್ಷ ಕೇಂದ್ರವು (Central Government)ಈ ಯೋಜನೆಯಡಿ 12 ಸಾವಿರ ಸ್ವಯಂಸೇವಕರನ್ನು ಆಯ್ಕೆ ಮಾಡಲಿದ್ದು, ಅವರನ್ನು ಆಯಾ ರಾಜ್ಯಗಳಲ್ಲಿನ ಬ್ಲಾಕ್ ಮಟ್ಟದ ಪ್ರದೇಶಗಳಿಗೆ ಕಳುಹಿಸಿ ಸೇವೆ ಮಾಡಲು ಅನುವು ಮಾಡಿಕೊಡಲಾಗುತ್ತದೆ. ಈ ಯೋಜನೆಯಡಿ ಸ್ವಯಂಸೇವಕರಾಗಿ ಸೇರುವವರನ್ನು ರಾಷ್ಟ್ರೀಯ ಯುವ ದಳ ಎಂದು ಕರೆಯಲಾಗುತ್ತದೆ.ಈ ಯೋಜನೆಯಡಿಯಲ್ಲಿ ಯುವಕರಿಗೆ ಎರಡು ವರ್ಷಗಳ ಕಾಲ ಗೌರವಧನದ ಜೊತೆಗೆ ಕೆಲಸ ಕೂಡ ಮಾಡಬಹುದು.

ಈ ಸ್ವಯಂಸೇವಕ ಯೋಜನೆಗೆ ಸೇರಲು 18 ರಿಂದ 29 ವರ್ಷದೊಳಗಿನವರು ಮಾತ್ರ ಅರ್ಹರಾಗಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ 4 ವಾರಗಳ ತರಬೇತಿ ನೀಡಲಾಗುತ್ತದೆ.ಈ ಯೋಜನೆಗೆ ಸೇರುವುದರಿಂದ ಗರಿಷ್ಠ ಎರಡು ವರ್ಷಗಳವರೆಗೆ ಸ್ವಯಂಸೇವಕರಾಗಿ ಕೆಲಸ ಮಾಡುವ ಸುವರ್ಣ ಅವಕಾಶ ಲಭ್ಯವಾಗುವುದಲ್ಲದೆ, ಪ್ರತಿ ತಿಂಗಳು ರೂ. 5 ಸಾವಿರ ರೂ.ಗೌರವಧನವನ್ನು ನೀಡಲಾಗುತ್ತದೆ.

ಈ ಸ್ವಯಂಸೇವಕ ಯೋಜನೆಗೆ ಸೇರಲು ಬಯಸುವವರು 10ನೇ ತರಗತಿ(SSLC) ಉತ್ತೀರ್ಣರಾಗಿರಬೇಕು.ಪದವಿ ಪೂರ್ಣಗೊಳಿಸಿದ ಮತ್ತು ತಾಂತ್ರಿಕ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಯುವ ಸ್ವಯಂಸೇವಕ ಆಯ್ಕೆಯಲ್ಲಿ ಆದ್ಯತೆ ನೀಡಲಾಗುತ್ತದೆ. ಇದರ ಜೊತೆಗೆ ಆ್ಯಂಡ್ರಾಯ್ಡ್ ಫೋನ್ ಸೇರಿದಂತೆ ವಿವಿಧ ರೀತಿಯ ಆಪ್ ಗಳನ್ನು ಬಳಸಿ ಅನುಭವವಿರುವ ಅಭ್ಯರ್ಥಿಗಳಿಗೆ ಕೂಡ ಆದ್ಯತೆ ನೀಡಲಾಗುತ್ತದೆ.

ಕಾಲೇಜುಗಳಲ್ಲಿ ಸಾಮಾನ್ಯ ವಿದ್ಯಾರ್ಥಿಗಳಾಗಿ ಅಧ್ಯಯನ ಮಾಡುತ್ತಿರುವವರು ಈ ಯೋಜನೆಗೆ ಸೇರಲು ಅರ್ಹರಲ್ಲ ಎಂಬುದನ್ನು ಗಮನಿಸಬೇಕು. ಅವರು ತಮ್ಮ ಕಾಲೇಜುಗಳಲ್ಲಿ NCC ಅಥವಾ NSS ಯೋಜನೆಗಳಿಗೆ ಸೇರಬಹುದು. ಅರೆಕಾಲಿಕ ಸ್ವಯಂಸೇವಕರಾಗಿಯೂ ಕೆಲಸ ಮಾಡಲು ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
ಈ ಯೋಜನೆಗೆ ಸೇರಲು ಬಯಸುವವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಯುವ ಸ್ವಯಂಸೇವಕರ ಅಧಿಸೂಚನೆ ಹೊರಡಿಸಲಿದ್ದಾರೆ. ಆಯಾ ಪ್ರದೇಶದ ಪ್ರಮುಖ ದಿನಪತ್ರಿಕೆಗಳಲ್ಲೂ ಜಾಹೀರಾತು ನೀಡಲಾಗುತ್ತದೆ. ಆ ಬಳಿಕ ನೀವು ಅರ್ಜಿ ಸಲ್ಲಿಸಬಹುದು. ಇದಕ್ಕೆ ಯಾವುದೇ ಶುಲ್ಕವಿಲ್ಲ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಭಾವಚಿತ್ರ,ಆಧಾರ್ ಕಾರ್ಡ್, 10ನೇ ತರಗತಿ ಮಾರ್ಕ್ಸ್ ಕಾರ್ಡ್,ಜಾತಿ ಪ್ರಮಾಣ ಪತ್ರ, ಉನ್ನತ ಶಿಕ್ಷಣ ಪ್ರಮಾಣಪತ್ರಗಳು ಮತ್ತು ವಿಳಾಸವನ್ನ ಹೊಂದಿರುವ ಆಧಾರ್/ಪಡಿತರ ಚೀಟಿ/ವೋಟರ್ ಐಡಿ ಯಾವುದಾದರು ಒಂದು ಬೇಕಾಗುತ್ತದೆ.

ಆಯ್ಕೆ ಹೇಗೆ ಮಾಡಲಾಗುತ್ತದೆ?
ಜಿಲ್ಲಾ ಯುವಜನ ವ್ಯವಹಾರಗಳ ಅಧಿಕಾರಿ ಮತ್ತು ಇಬ್ಬರು ಅನುಭವಿ ಸದಸ್ಯರ ನೇತೃತ್ವದ ಸಮಿತಿಯು ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕ ಸ್ವಯಂಸೇವಕರನ್ನು ಆಯ್ಕೆ ಮಾಡುತ್ತಾರೆ.

ನೆಹರು ಯುವಜನ ಕೇಂದ್ರದ ಪದಾಧಿಕಾರಿಗಳು, ರಾಷ್ಟ್ರೀಯ ಯುವ ಸ್ವಯಂಸೇವಕರಾಗಿ ಆಯ್ಕೆಯಾದವರನ್ನು ಆಯಾ ಪ್ರದೇಶದ ಬ್ಲಾಕ್ ಮಟ್ಟದಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಲಾಗುತ್ತದೆ. ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಕುರಿತು ಜನರಿಗೆ ವಿವರಣೆ ನೀಡಿ, ಸ್ವಯಂಸೇವಕರು ಪ್ಲಾಸ್ಟಿಕ್ ಮುಕ್ತ ಪಂಚಾಯತ್ ಮಾಡಲು ಸ್ವಚ್ಛ ಭಾರತ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಒಂದು ಬ್ಲಾಕ್ ನಲ್ಲಿರುವ ಸಮಸ್ಯೆಗಳು ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ನಿರ್ವಹಿಸಬೇಕು. ಆ ಭಾಗದ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವ ಜೊತೆಗೆ ಮಹಿಳಾ ಸ್ವಯಂಸೇವಕರು ಅಲ್ಲಿನ ಮಹಿಳೆಯರನ್ನು ಸಂಘಟಿಸಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸಬೇಕು.

Leave A Reply

Your email address will not be published.