ಪ್ರಿಯಕರನಿಗಾಗಿ ಹಳ್ಳಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪ್ರಿಯತಮೆ! ಕತ್ತಲ ಮೌನದಲ್ಲಿ ನಡೆದದ್ದು ಭೇಟಿ ಮಾತ್ರ ಅಲ್ಲ…ಆದದ್ದು ಬೇರೆ!!!

latest news lover cut off the electricity in the village for lover

ಪ್ರೀತಿ ಮಾಯೆ ಅನ್ನೋದು ಎಲ್ಲರಿಗೂ ಗೊತ್ತಿರುವಂತದ್ದೇ. ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿ ತನ್ನ ಪ್ರಿಯಕರನ ಭೇಟಿ ಆಗೋದಕ್ಕೆ ಮಾಡಿದ ಕೆಲಸ ಊಹಿಸಲಸಾಧ್ಯ. ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು ಎಂಬುದನ್ನು ಧ್ಯೇಯ ವಾಕ್ಯ ಮಾಡಿಕೊಂಡ ಯುವತಿ ತನ್ನ ಪ್ರಿಯಕರನ ಭೇಟಿಗಾಗಿ ಇಡೀ ಊರಿನ ವಿದ್ಯುತ್ ಕಡಿತ ಮಾಡಿದ ಅಚ್ಚರಿಯ ಘಟನೆ ಬಿಹಾರದ ಬೆತಿಯಾ ಎಂಬಲ್ಲಿ ನಡೆದಿದೆ.

ಬೆತಿಯಾ ಗ್ರಾಮದ ನಿವಾಸಿಯಾದ ಯುವತಿ ತನ್ನ ಪಾಗಲ್ ಪ್ರೇಮಿಯನ್ನು ಭೇಟಿಯಾಗುವ ಸಲುವಾಗಿ ಟ್ರಾನ್ಸ್ಫಾರ್ಮರ್ನಲ್ಲಿರುವ ಏರ್ ಬ್ರೇಕ್ ಸ್ವಿಚ್ನ್ನು ಕೆಳಗೆ ಬೀಳಿಸಿ ಇಡೀ ಊರು ಕತ್ತಲಲ್ಲಿರುವ ಸಂದರ್ಭ ಗುಟ್ಟಾಗಿ ಹೋಗಿ ತನ್ನ ಗೆಳೆಯನನ್ನು ಭೇಟಿಯಾಗುತ್ತಿದ್ದಳು ಎನ್ನಲಾಗಿದೆ.

ಯುವತಿಯ ಹೆಸರನ್ನು ಬಹಿರಂಗಗೊಳಿಸದ ಗ್ರಾಮಸ್ಥರು, ಯುವಕ-ಯುವತಿಯನ್ನು ರೆಡ್ಹ್ಯಾಂಡ್ಆಗಿ ಹಿಡಿದು ಥಳಿಸಿದ್ದು, ಈ ಕುರಿತಾದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಒಂದೆರಡು ಬಾರಿ ಇದೆ ರೀತಿ ವಿದ್ಯುತ್ ಕಡಿತವಾದ ಸಂದರ್ಭ ಯಾರಿಗೂ ಈ ವಿಚಾರ ಗೊತ್ತಾಗಿಲ್ಲ.ಆದರೆ, ರಾತ್ರಿ ಪದೇ ಪದೇ ವಿದ್ಯುತ್ ಕಡಿತ ಪ್ರಕರಣ ಮುಂದುವರಿದಾಗ ಊರಿನ ಮಂದಿಗೆ ಅನುಮಾನ ವ್ಯಕ್ತವಾಗಿ ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಹೊರಟಿದ್ದಾರೆ. ಈ ರೀತಿ ವಿದ್ಯುತ್ ಕಡಿತವಾದಾಗ ಕಳ್ಳತನ ಪ್ರಕರಣ ಕೂಡ ಹೆಚ್ಚಾಗುತ್ತಿತ್ತು. ಜುಲೈ 14 ರಂದು ಎಂದಿನಂತೆ ಯುವತಿ ಯುವಕನ ಭೇಟಿಗಾಗಿ ವಿದ್ಯುತ್ ಕಡಿತಗೊಳಿಸಿದ ಸಂದರ್ಭ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ವೇಳೆ ಜೊತೆಯಲ್ಲಿದ್ದ ಯುವಕನಿಗೆ ಥಳಿಸಲು ಮುಂದಾಗಿದ್ದಾರೆ.

ಈ ವೇಳೆ ಬಾಲಕಿ ತನ್ನ ಪ್ರಿಯಕರನನ್ನು ಬಚಾವ್ ಮಾಡುವ ಸಲುವಾಗಿ ಆತನಿಗಾಗಿ ಜನರೊಂದಿಗೆ ಘರ್ಷಣೆಗೆ ಮುಂದಾಗಿದ್ದಾಳೆ. ಹೀಗಾಗಿ, ಗ್ರಾಮಸ್ಥರು ಈ ಪ್ರಕರಣವನ್ನು ನೌತಾನ್ ಪೊಲೀಸ್ ಠಾಣೆಯ ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರೀತಿಗೆ ಎರಡು ಕುಟುಂಬ ಕೂಡ ಗ್ರೀನ್ ಸಿಗ್ನಲ್ ನೀಡಿದ್ದು, ಎರಡೂ ಕಡೆಯವರು ಯುವತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.