BJP Booth President Murder: ಬಿಜೆಪಿ ನಾಯಕನ ಭೀಕರ ಹತ್ಯೆ, ಹೊಂಚು ಹಾಕಿ ದೊಣ್ಣೆ, ರಾಡ್‌ನಿಂದ ಹಲ್ಲೆ ಮಾಡಿ ಕೊಲೆ!!!

latest news politics murder news Bjp booth President death by beaten

BJP Booth President Murder: ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡನ ಹತ್ಯೆಯೊಂದು (BJP Booth President Murder) ನಡೆದಿದೆ. ಅಪರಿಚಿತರು ಲಾಠಿಯಿಂದ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಬಿಜೆಪಿಯ ಬೂತ್‌ ಅದ್ಯಕ್ಷನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತ ಬೂತ್‌ ಅಧ್ಯಕ್ಷರ ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡಿದ್ದು, ಕೆಲ ವರ್ಷಗಳ ಹಿಂದೆ ಇದೇ ಬಿಜೆಪಿ ಮುಖಂಡರೊಬ್ಬರ ಸಹೋದರ ಕೂಡಾ ರೀತಿ ಹತ್ಯೆ ಮಾಡಲಾಗಿತ್ತು ಎಂದು ವರದಿಯಾಗಿದೆ.

ಈ ಘಟನೆ ಸಂಗ್ರಾಮಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಧೌರ್ಹರಾ ಗ್ರಾಮದಲ್ಲಿ ನಡೆದಿದೆ. ಬಿಜೆಪಿಯ ಬೂತ್‌ ಅಧ್ಯಕ್ಷರಾದ ದಿನೇಶ್‌ ಸಿಂಗ್‌ ಅವರು ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದಾಗ, ಭಿತರಿ ಗ್ರಾಮದ ಬಳಿ ಹೊಂಚು ಹಾಕಿ ಕುಳಿತುಕೊಂಡಿದ್ದ ಆರು ಜನರು ದೊಣ್ಣೆ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಬಿಜೆಪಿ ಮುಖಂಡ ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಬೂತ್‌ ಅಧ್ಯಕ್ಷರನ್ನು ಅಲ್ಲೇ ಬಿಟ್ಟು, ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ ಇವರು ಬಿದ್ದಿರುವುದನ್ನು ಯಾರೂ ನೋಡಿರುವುದಿಲ್ಲ.

ಅಕಸ್ಮಾತ್ತಾಗಿ ಆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಬಿಜೆಪಿ ಮುಖಂಡ ಗಾಯಗೊಂಡು ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಪಡೆದ ಪೊಲೀಸರು ತರಾತುರಿಯಲ್ಲಿ ಆಗಮಿಸಿ ಬಿಜೆಪಿ ಮುಖಂಡನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಅವರು ಚಿಕಿತ್ಸೆಯಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಸದ್ಯ ಶವವನ್ನು ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದಕ್ಕೂ ಮೊದಲು ದಿನೇಶ್‌ ಸಿಂಗ್‌ ಅವರ ಸಹೋದರನನ್ನು ಕೂಡಾ ಹತ್ತು ವರ್ಷಗಳ ಹಿಂದೆ ಯಾವುದೋ ಒಂದು ಸಣ್ಣ ಕಾರಣಕ್ಕೆ ಹತ್ಯೆ ಮಾಡಲಾಗಿತ್ತು. ಕುಟುಂಬಸ್ಥರ ಅಳಲು ಹೆಚ್ಚಾಗಿದೆ. ಬೆದರಿಕೆ ಕರೆಗಳ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಓರ್ವ ಸಹೋದರನನ್ನು ಕಳೆದುಕೊಂಡಿದ್ದು, ಈಗ ಮತ್ತೋರ್ವ ಸಹೋದರನನ್ನು ಕಳೆದುಕೊಂಡಿದ್ದೇವೆ. ಪೊಲೀಸರು ಸರಿಯಾದ ಕ್ರಮ ಕೈಗೊಂಡಿದ್ದರೆ ಇಂದು ನಮ್ಮ ಅಣ್ಣನ ಪ್ರಾಣ ಉಳಿಸಬಹುದಿತ್ತು ಎಂದು ಕುಟುಂಬದವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ತಮ್ಮನ ಕೊಲೆ ಕೇಸಲ್ಲಿ ಅಣ್ಣ ಬಿಜೆಪಿ ಮುಖಂಡ ದಿನೇಶ್‌ ಸಿಂಗ್‌ ಪ್ರಮುಖ ಸಾಕ್ಷಿಯಾಗಿದ್ದು, ಇದರಿಂದಾಗಿ ಇವರಿಗೆ ಬೆದರಿಕೆ ಕರೆ ಬರುತ್ತಿತ್ತು ಎಂದು ಹೇಳಲಾಗಿದೆ. ಇದೇ ಇವರ ಕೊಲೆಗೆ ಕಾರಣ ಎನ್ನಲಾಗಿದೆ

Leave A Reply

Your email address will not be published.