ಬಾತ್ ಟಬ್ಬಿನಲ್ಲಿ ಸ್ನಾನಕ್ಕಿಳಿದ ಬಿಗ್ ಬಾಸ್ ಧನುಶ್ರೀ! ಲೋಡ್ ಗಟ್ಟಲೆ ಮೇಕಪ್ ಬಳಿದ ರೀಲ್ ಸ್ಟಾರ್, ಪುಲ್ ಟ್ರೋಲ್!!!

Latest news reels star viral photo Photos of Bigg Boss Dhanushree bathing in bathtub

ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇಂದು ಮೊಬೈಲ್ ಎಂಬ ಸಾಧನ ಬಳಕೆ ಮಾಡದವರೆ ವಿರಳ. ಅದರಲ್ಲಿಯೂ ಕೊರೋನಾ ಮಹಾಮಾರಿ ರಾಜ್ಯದಲ್ಲಿ ಕಾಲಿಟ್ಟ ಬಳಿಕ ಮೊಬೈಲ್,ಲ್ಯಾಪ್ ಟಾಪ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಸೋಶಿಯಲ್ ಮೀಡಿಯಾದಂತಹ (Social Media) ಪ್ಲಾಟ್ನಾರ್ಮ್ಗಳನ್ನು ಉಪಯೋಗಿಸಿಕೊಳ್ಳುತ್ತಾ ಕೆಲ ಕಲಾವಿದರು ಬಾರಿ ಮಟ್ಟದ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ(Bigg Boss 8 Dhanushree) ಎಂಟ್ರಿ ಕೊಟ್ಟ ಧನುಶ್ರೀ ವಾರದಲ್ಲೆ ಹೊರ ಬಂದರು. ಆ ಬಳಿಕ ಕನ್ನಡ ಸಿನಿಮಾ ಒಂದಕ್ಕೆ ಸಹಿ ಮಾಡಿದ ಧನುಶ್ರೀ ಫೋಟೋಶೂಟ್ ಹಾಗೂ ವಿಡಿಯೋ ಮಾಡುವುದರಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.

ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿ ಮನೆಯಿಂದ ಹೊರ ಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಸಿದ್ದಿ ಪಡೆಯುವುದು ಸಹಜ. ಇನ್ನು ಕೆಲವರು ರಿಲ್ಸ್ ಮಾಡುತ್ತಲೇ ಬಿಗ್ ಬಾಸ್ ನಂತಹ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಿಗೂ ಲಗ್ಗೆ ಇಟ್ಟಿದ್ದಾರೆ. ಅವರಲ್ಲಿ ಸೋನು ಶ್ರೀನಿವಾಸ್ ಗೌಡ (Sonu Gowda) ಹಾಗೂ ಧನುಶ್ರೀ (Actress Dhanushree) ಕೂಡ ಸೇರಿದ್ದು,

ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada TV) ಪ್ರಸಾರವಾದ ಸುದೀಪ್ (Kiccha Sudeep) ಅವರ ಸಾರಥ್ಯದ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ದಿಯಾಗಿ ಮನೆಗೆ ಎಂಟ್ರಿ ಕೊಟ್ಟ ಧನುಶ್ರೀ ಅವರು ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲಾಗದೆ ಮೊದಲ ವಾರದಲ್ಲಿ ಮನೆಯಿಂದ ಹೊರ ಬಂದ ಧನುಶ್ರೀ ಈಗ ಸಖತ್ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ ಏನು ಈ ಕಹಾನಿ ಗೊತ್ತಾ?

ಹೆಣ್ಣು ಮಕ್ಕಳು ಎಂದ ಕೂಡಲೇ ಮೊದಲು ಎಲ್ಲರಿಗೂ ನೆನಪಾಗುವುದು ಸೌಂದರ್ಯ, ಅಲಂಕಾರ. ಅದರಲ್ಲಿಯೂ ಹೆಣ್ಣು ಮಕ್ಕಳು ಮನೆಯಿಂದ ಹೊರ ಕಾಲಿಡುವಾಗ ಸುಣ್ಣ ಬಣ್ಣ ಹಚ್ಚಿಯೆ ಗಂಟೆಗಟ್ಟಲೇ ಕನ್ನಡಿ ಮುಂದೆ ನಿಂತು ಸಮಾಧಾನವಾದ ಮೇಲೆ ಹೊರ ಬರುವುದು. ಆದರೆ, ಇದಕ್ಕೆ ತದ್ವರುದ್ಧವಾಗಿ ಸಹಜವಾಗಿ ಯಾವುದೇ ಅಲಂಕಾರ ಇಲ್ಲದೆ ಹೊರಡುವವರು ಕೂಡ ಇದ್ದಾರೆ ಎಂಬುದು ಅಷ್ಟೇ ಸತ್ಯ.ಅರೆ, ಅಷ್ಟಕ್ಕೂ ಹೆಣ್ಣಿನ ಅಲಂಕಾರಕ್ಕು ಧನುಶ್ರೀ ಗು ಎಲ್ಲಿಂದೆಲ್ಲಿಯ ಸಂಬಂಧ ಅಂತಿರಾ?.

ಸದಾ ಸೋಶಿಯಲ್ ಮೀಡಿಯಾಗಳ ಆಕ್ಟಿವ್ ಆಗಿರುವ ನಟಿ ಧನುಶ್ರೀ ಓರ್ವ ಮೇಕಪ್ ಆರ್ಟಿಸ್ಟ್ ಆಗಿದ್ದು, ಇದೀಗ ಇನ್ನಾ ಗ್ರಾಮ್ನಲ್ಲಿ ಶೇರ್ ಮಾಡಿರುವ ಫೋಟೋ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿದೆ. ಹಾಡಿಗೆ ತಕ್ಕಂತೆ ಹೊಸ ಹೊಸ ಮುಖಭಾವದ ಪ್ರಯೋಗ ಮಾಡುತ್ತಾ ರೀಲ್ಸ್ ಮೂಲಕ ಟ್ರೆಂಡ್ ಸೃಷ್ಟಿ ಮಾಡಿದ ಧನುಶ್ರೀ ಅವರು ತಮ್ಮ ಮೇಕಪ್ ಇಲ್ಲದೆ ಹೊರ ಕಾಲಿಡುವ ಕ್ರಮವೇ ಇಲ್ಲವಂತೆ. ನಟಿ ಆಗಾಗ ತಮ್ಮ ಮೇಕಪ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾ ಇರುತ್ತಾರೆ. ಇದೀಗ ಬಾತ್ ಟಬ್ದಲ್ಲಿ ಕೆಂಪು ಬಣ್ಣದ ಉಡುಪನ್ನು ತೊಟ್ಟು ಕುಳಿತು ಫೋಟೋಗೆ ಫೋಸ್ ನೀಡಿರುವಂತಹ ಪೋಸ್ಟ್ ಶೇರ್ ಮಾಡಿದ್ದು, ಇದೀಗ ನೆಟ್ಟಿಗರ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಬಾತ್ ಟಬ್ದಲ್ಲಿ ಕೆಂಪು ಬಣ್ಣದ ಉಡುಪನ್ನು ತೊಟ್ಟು ಕುಳಿತ ಫೋಟೋದಲ್ಲಿ ಕೂಡ ಅತಿಯಾದ ಮೇಕಪ್ ಮಾಡಿರುವ ನಟಿಯನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದು, ಅಯ್ಯೋ ದೇವರೇ ಬಾತ್ ರೂಂ ನಲ್ಲೂ ಮೇಕಪಾ?ಪೈಂಟ್ ಹಾಕಿರೋದ ಎಂದೆಲ್ಲ ಪ್ರಶ್ನೆ ಮಾಡಿರುವ ನೆಟ್ಟಿಗರು ಸ್ನಾನ ಮಾಡುವಾಗ ಕೂಡ ಮೇಕಪ್ ಬೇಕಾ? ಎಂದು ತರಹೇವಾರಿ ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ, ವೈರಲ್ ಆಗಿರುವ ಫೋಟೋ ಹೆಚ್ಚು ಟ್ರೋಲಾಗುತ್ತಿದ್ದು, ಧನುಶ್ರೀ ಅವರು ನಿಜವಾಗಿಯೂ ನ್ಯಾಚುರಲ್ ಬ್ಯೂಟಿ ಅಲ್ಲವೆ ಅಲ್ಲ! ಇಲ್ಲದಿದ್ದರೆ ಯಾರಾದರೂ ಸ್ನಾನ ಮಾಡುವಾಗ ಮೇಕಪ್ ಉಪಯೋಗಿಸುತ್ತಾರಾ ಎಂದು ನೆಟ್ಟಿಗರು ಕಾಮೆಂಟ್ಸ್ ಮೂಲಕ ನಟಿಯ ಕಾಲೆಳೆಯಿತ್ತಿದ್ದಾರೆ

Leave A Reply

Your email address will not be published.