Mangalore: ಅಡ್ಯಾರ್ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು!

Mangalore death news rider died on the spot as the bike skidded

Mangalore: ಮಂಗಳೂರು( Mangalore)ಅಡ್ಯಾರ್ ಬಳಿಯ ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರನಾದ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ(Student )ಸ್ಥಳದಲ್ಲೇ ಸಾವನ್ನಪ್ಪಿದ(Died )ಧಾರುಣ ಘಟನೆ ನಡೆದಿದೆ.

ಕೇರಳ ಮೂಲದ ಮಹಮ್ಮದ್ ನಶತ್ (21) ಮೃತ ದುರ್ದೈವಿಯಾಗಿದ್ದು, ವಳಚ್ಚಿಲ್ ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾನೆ. ಯುವಕ ಪಡೀಲ್ ಕಡೆಯಿಂದ ವಳಚ್ಚಿಲ್ ಕಾಲೇಜಿನತ್ತ ಬೈಕಿನಲ್ಲಿ ಸ್ಕಿಡ್ ಆಗಿದ್ದು ಡಿವೈಡರ್ ಬಡಿದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ತೀವ್ರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಅತೀ ವೇಗದ ಚಾಲನೆಯಿಂದ ಈ ಅಪಘಾತ ಸಂಭವಿಸಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಇಂದು ಬೆಳಗ್ಗೆ 11.40 ರ ಸುಮಾರಿಗೆ ನಡೆದಿದೆ.

ಮಂಗಳೂರು ಸಂಚಾರಿ ದಕ್ಷಿಣ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವೆಸ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

Leave A Reply

Your email address will not be published.