Uttar Pradesh: ರಾತ್ರಿ ಪ್ರೇಮಿಕಾಳ ಮನೆಗೆ ಆಕೆಯ ಆಸೆಯಂತೆ ಬಳೆ ತೊಡಿಸಲು ಬಂದ ಪ್ರಿಯಕರ! ಬಳೆ ಶಬ್ದ ಮಾಡಿತು ಕಥೆ ಕೈಲಾಸ!!!

Uttar Pradesh news Bareilly news lover reached girlfriend home to wear bangle family member caught

Uttar Pradesh: ಪ್ರೇಮಿಕಳ ಆಸೆ ಈಡೇರಿಸಲು ಕತ್ತಲ ಮರೆಯಲ್ಲಿ ಹೋಗಿ ಸಿಕ್ಕಿ ಬಿದ್ದ ಪ್ರೇಮಿಗೆ, ಯುವತಿಯ ಮನೆಯವರು ಚೆನ್ನಾಗಿ ಗೂಸಾ ಹೊಡೆದು ಥಳಿಸಿದ ಘಟನೆಯೊಂದು ಉತ್ತರಪ್ರದೇಶದ( Uttar Pradesh) ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಅಗಿದ್ದೇನೆಂದರೆ ಈ ಯುವಕನ ಪ್ರೇಯಸಿ ನೀನು ನನಗೆ ಬಳೆ ತೊಡಿಸಬೇಕೆಂಬ ಕೋರಿಕೆ ಮುಂದಿಟ್ಟಿದ್ದಾಳೆ. ಅದಕ್ಕಾಗಿ ಈ ಪ್ರೇಮಿ ಮಾರುಕಟ್ಟೆಯಿಂದ ಬಳೆಗಳನ್ನು ಖರೀದಿಸಿ ರಾತ್ರಿಯ ಕತ್ತಲಲ್ಲಿ ತನ್ನ ಗೆಳತಿಯ ಮನೆಗೆ ಹೋಗಿದ್ದಾನೆ. ಆದರೆ ಯಾವ ಕ್ಷಣದಲ್ಲಿ ಈ ಬಳೆ ತೊಡಿಸುವ ಶಾಸ್ತ್ರ ಆಗುತ್ತಿತ್ತೋ ಬಳೆಯ ಸದ್ದಿನಿಂದ ಮನೆ ಮಂದಿ ಎಚ್ಚರಗೊಂಡಿದ್ದಾರೆ. ಕೂಡಲೇ ಗೆಳತಿಯ ಕುಟುಂಬಸ್ಥರು ಸೇರಿ ಇಬ್ಬರನ್ನೂ ರೆಡ್‌ಹ್ಯಾಂಡಾಗಿ ಹಿಡಿದಿದ್ದಾರೆ. ನಂತರ ಯುವಕನಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಪ್ರಕರಣವು ಹಫೀಜ್‌ಗಂಜ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವಕ ಯುವತಿ ಬಹಳ ದಿನಗಳಿಂದ ಪ್ರೀತಿ ಮಾಡುತ್ತಿದ್ದು, ಇಬ್ಬರು ಕೂಡಾ ರಹಸ್ಯವಾಗಿಯೇ ಭೇಟಿಯಾಗುತ್ತಿದ್ದರು. ಈ ಸಮಯದಲ್ಲಿ ಅಲ್ಲಿ ಹಬ್ಬದ ಪ್ರಯುಕ್ತ ಗೆಳತಿಗೆ ತನ್ನ ಬಾಯ್‌ಫ್ರೆಂಡ್‌ ಬಳೆ ತೊಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಳೆ. ಪ್ರೇಮಿ ಕೂಡಲೇ ಮಾರುಕಟ್ಟೆಗೆ ಹೋಗಿ ಬಳೆ ಖರೀದಿ ಮಾಡಿದ್ದಾನೆ.

ಹಾಗೆನೇ ಆಕೆ ರಾತ್ರಿ ಮನೆಗೆ ಬಾ ಎಂದು ಪ್ರಿಯಕರನಿಗೆ ಹೇಳಿದ್ದಾಳೆ. ಪ್ರಿಯಕರ ಆ ಸಮಯಕ್ಕಾಗಿ ಕಾತುರದಿಂದ ಕಾಯುತ್ತಿದ್ದ. ರಾತ್ರಿಯಾದ ಕೂಡಲೇ ಆತ ಆಕೆಯ ಮನೆ ಬಳಿ ತಲುಪಿದ್ದಾನೆ. ಗೆಳತಿ ಆತನಿಗೆ ಫೋನ್‌ ಮಾಡಿ ಎಲ್ಲರೂ ಮಲಗಿದ್ದಾರೆ, ನೀನು ಮನೆಗೆ ಬಾ ಎಂದು ಹೇಳಿದ್ದಾಳೆ. ಗ್ರೀನ್‌ ಸಿಗ್ನಲ್‌ ದೊರಕಿದ ಕೂಡಲೇ ಗೆಳೆಯ ಗೆಳತಿಯ ಮನೆ ತಲುಪಿದ. ಆದರೆ ಅವನು ಬಳೆ ತೊಡಿಸಿದಾಗ, ಬಂದ ಶಬ್ದದಿಂದ ಗೆಳತಿಯ ಕುಟುಂಬಸ್ಥರು ಎಚ್ಚರಗೊಂಡಿದ್ದಾರೆ.

ಕೂಡಲೇ ಕುಟುಂಬಸ್ಥರು ಇಬ್ಬರನ್ನೂ ರೆಡ್‌ಹ್ಯಾಂಡಾಗಿ ಹಿಡಿದಿದ್ದಾರೆ. ನಂತರ ಯುವಕನಿಗೆ ಗೂಸಾ ನೀಡಿದ್ದಾರೆ. ಈ ಗಲಾಟೆ ಶಬ್ದ ಕೇಳಿ ಸುತ್ತಮುತ್ತಲಿನವರೂ ರಾತ್ರಿ ಜಮಾಯಿಸಿದ್ದಾರೆ. ಮೊದಲು ಕಳ್ಳನೆಂದು ಭಾವಿಸಿದ ಜನ ಪ್ರಿಯಕರನಿಗೆ ಚೆನ್ನಾಗಿ ಥಳಿಸಿದ್ದಾರೆ. ನಂತರ ಎಲ್ಲಾ ವಿಷಯ ಗೊತ್ತಾದಾಗ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವತಿಯ ಕುಟುಂಬಸ್ಥರು ಯಾವುದೇ ದೂರು ನೀಡಿಲ್ಲ ಎಂದು ಹಫೀಜ್‌ಗಂಜ್‌ ಚೇತ್ರಮ್‌ ವರ್ಮಾ ತಿಳಿಸಿದ್ದು, ಯುವಕನ ವಿರುದ್ಧ ಶಾಂತಿಭಂಗದ ಕೇಸ್‌ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.