ಮಗಳನ್ನು ದುಬೈ ಫ್ಲೈಟ್‌ ಹತ್ತಿಸಿ ವಾಪಾಸ್ಸಾಗುವಾಗ ಕಾರು ಭೀಕರ ಅಪಘಾತ! ಇಬ್ಬರ ಸಾವು!

While returning daughter from flight to people died including the driver in car accident near Ranebennur

Car Accident: ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಗಳನ್ನು ದುಬೈಗೆ ಕಳುಹಿಸಿ ಊರಿಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಆಲ್ಟೋ ಕಾರೊಂದು ರಸ್ತೆ ಬದಿಯ ಹುಣಸೆ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ನಿನ್ನೆ (ಜು.18)ರಂದು ನಡೆದಿದೆ. ಮೃತರನ್ನು ಜಯಂತಿ (50), ಕಾರು ಚಾಲಕ ವಿಠ್ಠಲ್‌ (47) ಎಂದು ಗುರುತಿಸಲಾಗಿದೆ.

ಇವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಲೇಕಲ್‌ ಗ್ರಾಮದವರು. ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿದ್ದರಿಂದ ಕಾರು ನಿಯಂತ್ರಣ ತಪ್ಪಿ ಈ ಅಪಘಾತ (Car Accident ) ಸಂಭವಿಸಿದೆ ಊಹಿಸಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾತ್ರಿ ಪ್ರೇಮಿಕಾಳ ಮನೆಗೆ ಆಕೆಯ ಆಸೆಯಂತೆ ಬಳೆ ತೊಡಿಸಲು ಬಂದ ಪ್ರಿಯಕರ! ಬಳೆ ಶಬ್ದ ಮಾಡಿತು ಕಥೆ ಕೈಲಾಸ!!!

Leave A Reply

Your email address will not be published.