Dasara Elephants: ಈ ಬಾರಿಯ ನಾಡಹಬ್ಬ ದಸರಾಗೆ ಬರುವ ಆನೆಗಳಿಗೆ ಈ ಟೆಸ್ಟ್‌ ಕಡ್ಡಾಯಗೊಳಿಸಿದ ಅರಣ್ಯ ಇಲಾಖೆ!!!

forest department has order to this test mandatory for elephants coming for mysore dasara

Dasara Elephants: ಈ ಬಾರಿ ನಡೆಯುವ ನಾಡಹಬ್ಬ ದಸರಾಗೆ (Dasara) ಸಿದ್ಧತೆಗಳು ಆರಂಭಗೊಂಡಿದ್ದು, ಇದರಲ್ಲಿ ಮುಖ್ಯವಾಗಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಆನೆಗಳ ಆಯ್ಕೆಯ ಬಗ್ಗೆ ಕೆಲವೊಂದು ಮಾಹಿತಿ ಬಂದಿದೆ. ಈ ಬಗ್ಗೆ ಅರಣ್ಯ ಪ್ರಕ್ರಿಯೆಯನ್ನು ಮುಂದುವರಿಸಿದೆ.

2022ರ ದಸರಾ ಸಂದರ್ಭದಲ್ಲಿ ಗರ್ಭಿಣಿ ಆನೆಯನ್ನು ತಾಲೀಮಿಗೆ ಬಳಸಿಕೊಂಡಿರುವ ಘಟನೆಯೊಂದು ನಡೆದಿತ್ತು. ಇದು ನಿಜಕ್ಕೂ ಪ್ರಾಣಿಪ್ರಿಯರ ಸಿಟ್ಟಿಗೆ ಕಾರಣವಾಗಿತ್ತು. ಹಾಗಾಗಿ ಈ ಬಾರಿ ಈ ಕುರಿತು ಅರಣ್ಯ ಇಲಾಖೆ ಮುಖ್ಯವಾದ ಕ್ರಮವೊಂದನ್ನು ಕೈಗೊಂಡಿದೆ. ಅಂದ ಹಾಗೆ ದಸರಾ ಸಮಯದಲ್ಲಿಯೇ ಲಕ್ಷ್ಮಿ ಎಂಬ ಆನೆ ಮರಿಗೆ ಜನ್ಮ ಕೂಡಾ ನೀಡಿತ್ತು. ಇದೆಲ್ಲ ಘಟನೆ ಅರಣ್ಯ ಇಲಾಖೆಯ ಮೇಲೆ ಪ್ರಾಣಿ ಪ್ರಿಯ ಸಿಟ್ಟು ಹೆಚ್ಚಿಸಲು ಕಾರಣವಾಗಿತ್ತು. ಹಾಗಾಗಿ ಈ ಬಾರಿ ಈ ಮುಜುಗರಕ್ಕೊಳಗಾಗದೇ ಇರಲು ಅರಣ್ಯ ಇಲಾಖೆ ಮಾಸ್ಟರ್‌ ಪ್ಲ್ಯಾನ್‌ ಮಾಡಿಕೊಂಡಿದ್ದು, ಈ ಬಾರಿಯ ದಸರಾ ಆನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್‌ ಕಡ್ಡಾಯ ಮಾಡಿದೆ.

ಈ ನಿರ್ಧಾರದಿಂದ ಈ ಬಾರಿ ಆನೆಯ ಆಯ್ಕೆ ವಿಚಾರದಲ್ಲಿ ಎಚ್ಚರಿಕೆ ಮಾಡಲಾಗುತ್ತಿದೆ. ಮೈಸೂರಿನ ದಸರಾಗೆ ಬರುವ ಆನೆಗಳಿಗೆ ಅರಣ್ಯದಿಂದ ಬರುವ ಮೊದಲು ಮತ್ತು ನಂತರ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಹದಿನಾಲ್ಕು ಆನೆಗಳನ್ನು ಈ ಬಾರಿ ದಸರಾಗೆ ಕರೆತರಲು ಯೋಚನೆ ಮಾಡಲಾಗಿದ್ದು, ಈ ತಿಂಗಳಾಂತ್ಯಕ್ಕೆ ಗಜಪಡೆಯ ಪಟ್ಟಿ ನಿರ್ಧಾರವಾಗಲಿದೆ. ಮೈಸೂರಿಗೆ ಆಗಸ್ಟ್‌ ತಿಂಗಳಲ್ಲಿ ಗಜಪಡೆಗಳ ಆಗಮನವಾಗಲಿದೆ.

Leave A Reply

Your email address will not be published.