Koragajja: ನಿದ್ದೆಗಣ್ಣಿನಲ್ಲಿ ಮಧ್ಯರಾತ್ರಿ ಕೊರಗಜ್ಜನ ದೈವಸ್ಥಾನಕ್ಕೆ ಹೋದ ಮಗು; ನಂತರ ನಡೆದದ್ದೇ ಪವಾಡ!

koragajja-miracle-in-udupi-child-back-home-safely

Udupi: ಕರಾವಳಿ ಭಾಗದ ಜನರಲ್ಲಿ ತುಳು ಆಚರಣೆ, ದೈವದ ಮೇಲೆ ವಿಶೇಷವಾದ ನಂಬಿಕೆಯಿದೆ.ನಂಬಿದ ದೇವರು ಕೈ ಬಿಟ್ಟರು ದೈವ ಎಂದಿಗೂ ಕೈ ಬಿಡುವುದಿಲ್ಲ ಎಂಬುವ ಬಲವಾದ ನಂಬಿಕೆ ಜನರಲ್ಲಿ ಅಚ್ಚಳಿಯದೆ ಉಳಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೊರಗಜ್ಜನ ಪವಾಡ ವೊಂದು ನಡೆದಿದೆ. ಮಧ್ಯರಾತ್ರಿ ನಿದ್ದೆಗಣ್ಣಿನಲ್ಲಿ ಮಗುವೊಂದು ಕೊರಗಜ್ಜನ ದೈವಸ್ಥಾನಕ್ಕೆ ತೆರಳಿ ಸುರಕ್ಷಿತವಾಗಿ ಮನೆಗೆ ಹಿಂತಿರುಗಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಕಾಂತಾರ ಸಿನಿಮಾ ರಿಲೀಸ್ ಆದ ಬಳಿಕ ಕೊರಗಜ್ಜನ ಬಗ್ಗೆ ಎಲ್ಲೆಡೆ ಭಕ್ತಿ ಭಾವ ಇಮ್ಮಡಿಯಾಗಿದೆ. ಕೊರಗಜ್ಜ (koragajja)ದಕ್ಷಿಣ ಕನ್ನಡ ಹಾಗೂ ಉಡುಪಿ (Udupi) ಜಿಲ್ಲೆಯ ಜನರ ಆರಾಧ್ಯ ದೈವ. ಯಾವುದೇ ಸಮಸ್ಯೆ ಎದುರಾದರೂ ಮೊದಲು ಜನರು ಮೊರೆ ಹೋಗುವುದು ದೈವಕ್ಕೆ. ಅದು ಯಾವುದೇ ವಸ್ತು ಕಳುವಾದರು ಸರಿ, ಆರೋಗ್ಯ ಸಮಸ್ಯೆ,ಹೀಗೆ ಕೊರಗಜ್ಜನನ್ನು ಭಕ್ತಿಯಿಂದ ನಂಬುವ ಮಂದಿಗೆ ಅದೆಷ್ಟೋ ಕಾರಣಿಕ ಪವಾಡಗಳು ನಡೆದಿವೆ. ಇದೇ ರೀತಿ, ದೈವದ ದೆಸೆಯಿಂದ ಮಗುವೊಂದು ಕ್ಷೇಮವಾಗಿ ಮನೆಗೆ ಮರಳಿದ ಘಟನೆ ನಡೆದಿದೆ.

‌ಕಾರಣಿಕ ಶಕ್ತಿಯನ್ನು ‌ಮೆರೆಯುತ್ತಿರುವ ಪವಾಡಕ್ಕೆ ಬೇಕಾದಷ್ಟು ನಿದರ್ಶನಗಳು ‌ನಮಗೇ ಆಗಾಗ ಕಾಣಸಿಗುತ್ತವೆ. ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜ ಪವಾಡ ನಡೆದಿದ್ದು, ಇಂದು ಜುಲೈ 20 ರಂದು ಮುಂಜಾನೆ 3 ಗಂಟೆಗೆ ಉಡುಪಿಯ ಕುಂದಾಪುರ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ರಾತ್ರಿ ನಿದ್ದೆ ಕಣ್ಣಿನಲ್ಲಿ ನಡೆಯುತ್ತಿದ್ದ ಮಗುವನ್ನು ತಡೆಯುವ ಮುಲಕ ಕೊರಗಜ್ಜ ಪವಾಡ ಮೆರೆದಿದ್ದು,ಈ ಮೂಲಕ ನಂಬಿದವರ ಎಂದಿಗೂ ನಾ ಕೈ ಬಿಡೆನು ಎಂಬುದನ್ನು ನಿರೂಪಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದ ಕೆದೂರಿನಲ್ಲಿ ಇರುವ ಕಾರಣಿಕದ ಕೊರಗಜ್ಜ ದೈವಸ್ಥಾನ ನಾಮಫಲಕದ ಮುಂದೆ ಮಗು ನಿದ್ದೆಯ ಕಣ್ಣಿನಲ್ಲೇ ರಸ್ತೆಯಲ್ಲಿ ನಡೆದುಕೊಂಡು ಬಂದು ಬಿಟ್ಟಿದೆ. ಮಧ್ಯರಾತ್ರಿ 3 ಗಂಟೆಗೆ ಇದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವ ವ್ಯಕ್ತಿ ಆ ಮಗುವನ್ನು ನೋಡಿ ಕಾರು ನಿಲ್ಲಿಸಿದ್ದಾರೆ.

ಕಾರು ನಿಲ್ಲಿಸಿ ಮಗುವನ್ನು ಮಾತಾಡಿಸಿದ ಸಂದರ್ಭ ನಿದ್ದೆಗಣ್ಣಲ್ಲಿ ಮಗು ನಡೆದುಕೊಂಡು ಬಂದಿರುವ ವಿಚಾರ ಬಯಲಾಗಿದೆ. ವಿಶ್ವ ಅವರು ಮಗುವನ್ನು ಸುರಕ್ಷಿತವಾಗಿ ಆಕೆಯ ಮನೆಗೆ ಹೋಗಿ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಸದ್ಯ, ಈ ಘಟನೆಯ ಬಗ್ಗೆ ಮಾಹಿತಿ ಕೇಳುತ್ತಿದ್ದಂತೆ ಸ್ಥಳೀಯರು ಇದೆಲ್ಲ ಕೊರಗಜ್ಜ ಪವಾಡ ಎಂದೇ ನಂಬಿದ್ದು, ಮಗು ಕ್ಷೇಮವಾಗಿ ತಲುಪಿದ್ದು ಕೊರಗಜ್ಜನ ದಯೆಯಿಂದ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.