ಪುತ್ತೂರು: ಉದ್ಯಮಿಯ ಕಾರಿನ ಮೇಲೆ ದಾಳಿ ,ನಗ,ನಗದು ಲೂಟಿ

Latest news businessman was attacked and robbed of gold and money in Puttur

Robbery At puttur : ಪುತ್ತೂರು(Puttur)ಕಾರಿನಲ್ಲಿ ಬಂದ ಕಿಡಿಗೇಡಿಗಳು ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಜುಲೈ 18 ರ ತಡರಾತ್ರಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ಕೊಂಚ ದೂರದಲ್ಲಿದ್ದ ಅದೇ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಲ್ಲದೆ ಕೈಯಲ್ಲಿದ್ದ ಚಿನ್ನದುಂಗುರ( Gold ring)ಮತ್ತು ಜೇಬಿನಲ್ಲಿದ್ದ ಬರೋಬ್ಬರಿ 9 ಸಾವಿರ ರೂಪಾಯಿ ನಗದನ್ನು ದರೋಡೆ ಮಾಡಿದ ಘಟನೆಯ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಪುತ್ತೂರು ತಾಲೂಕಿನ ಕೊಳ್ತಿಗೆ ಸಮೀಪದ ಪಾಂಬಾರು ನಿವಾಸಿ ಪ್ರದೀಪ್ ಕುಮಾರ್ ರೈ ಪಾಂಬಾರು (41) ಅವರು ಈ ಪ್ರಕರಣದ ಕುರಿತು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜುಲೈ 18 ರಂದು ರಾತ್ರಿ 10.30 ರ ಸುಮಾರಿಗೆ ಪ್ರದೀಪ್ ರವರ ಹತ್ತಿರದ ಸಂಬಂಧಿ ಪುತ್ತೂರಿನ ಬೊಳ್ವಾ ನಲ್ಲಿರುವ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಊಟ ತರುವ ಸಲುವಾಗಿ ಪ್ರದೀಪ್ ಕುಮಾರ್ ಹೊರಟಿದ್ದರಂತೆ.

ಪ್ರದೀಪ್ ಅವರು ಬೊಳುವಾರು ಬೈಪಾಸ್ ನ ಮೂಲಕ ತನ್ನ ಬ್ರಿಜಾ ಕಾರಿನಲ್ಲಿ ರಸ್ತೆ ಮಧ್ಯದ ತಿರುವು ಪಡೆಯುತ್ತಿದ್ದ ವೇಳೆ ಹೊಟೇಲ್ ಉದಯಗಿರಿ ಎದುರು ಕಾದು ಕುಳಿತಿದ್ದ ರೀತಿಯಲ್ಲಿ ದುಷ್ಕರ್ಮಿಗಳಿದ್ದ ಡಸ್ಟರ್ ಕಾರು ಎದುರಿನ ಪೆಟ್ರೋಲ್ ಪಂಪ್ ನಿಂದ ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಂದು ಪ್ರದೀಪ್ ಚಲಾಯಿಸುತ್ತಿದ್ದ ಕಾರನ್ನು(Car ) ಅಡ್ಡಗಟ್ಟಿದ್ದಾರೆ. ಅದೇ ದಿಕ್ಕಿನಲ್ಲಿ ಬಂದ ಈ ಡಸ್ಟರ್ ಕಾರಿನ ಸವಾರ ಸಿಗ್ನಲ್ ಹಾಕುವ ವಿಚಾರವಾಗಿ ಗಲಾಟೆ ಮಾಡಲು ಆರಂಭಿಸಿದ್ದಾರೆ ಎನ್ನಲಾಗಿದೆ. ಡಸ್ಟರ್ ಕಾರಿನಲ್ಲಿದ್ದ ಇಬ್ಬರು ಕಿಡಿಗೇಡಿಗಳು ಪ್ರದೀಪ್ ಅವರಿಗೆ ಅವಾಚ್ಯವಾಗಿ ನಿಂದಿಸಿ ಹೋಗಿದ್ದಾರೆ ಎಂದು ಪ್ರದೀಪ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರದೀಪ್ ಚಲಾಯಿಸುತ್ತಿದ್ದ ಬೀಝಾ ಕಾರಿನ ಗಾಜಿಗೆ ಕಿಡಿಗೇಡಿಗಳು ಕೈಯಿಂದ ಹೊಡೆದಿದ್ದು, ಈ ಸಂದರ್ಭ ಡ್ರೈವರ್ ಸೀಟು ಬದಿಯ ಕಾರಿನ ಬಾಗಿಲಿನ ಗಾಜನ್ನು ಚಾಲಕ ಕೆಳಗೆ ಸರಿಸಿದ್ದಾರೆ.ಕೂಡಲೇ ಚಾಲಕನ ಕುತ್ತಿಗೆಗೆ ಕೈ ಹಾಕಿದ ದುಷ್ಕರ್ಮಿಗಳು ಬಟ್ಟೆಯನ್ನು ಹರಿದು, ಕೈಯಲ್ಲಿದ್ದ 5 ಗ್ರಾಂ ಉಂಗುರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಪ್ಯಾಂಟಿನ ಜೇಬಿನಲ್ಲಿದ್ದ ಪರ್ಸನ್ನು ಎಳೆದು ಸುಮಾರು 10ಸಾವಿರ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಪ್ರದೀಪ್ ಅವರಿಗೆ ಕೈ, ಕುತ್ತಿಗೆ ಭಾಗಕ್ಕೆ ಗಾಯಗಳಾಗಿದೆ ಎಂದು ಆರೋಪಿಸಿ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಸ್ಥಳಿಯ ಸಿಸಿಟಿವಿಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿದು ಬಂದಿದೆ.

Leave A Reply

Your email address will not be published.