Bengaluru Murder Case: ಬೆಂಗಳೂರಿನಲ್ಲಿ ಹಾಡಹಗಲೇ ಭೀಕರ ಕೊಲೆ! ಕ್ಯಾಶಿಯರ್‌ ಕೊಲೆ ಮಾಡಿದ ಹೌಸ್‌ಕೀಪರ್‌?!

Latest news death news Bengaluru Murder Case housekeeper murdered the cashier

Bengaluru Murder Case: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾರದ ಹಿಂದಷ್ಟೇ ಕಂಪನಿಯೊಂದರ ಎಂಡಿ ಮತ್ತು ಸಿಇಒ ಹತ್ಯೆ ಪ್ರಕರಣ ಮಾಸುವ ಮುನ್ನವೇ ದಂಪತಿಯ ಹತ್ಯೆ ಪ್ರಕರಣವೊಂದು ಜನರನ್ನು ಬೆಚ್ಚಿ ಬೀಳಿಸಿತ್ತು. ಇದೀಗ, ಹಾಡಹಗಲೇ ಪ್ರತಿಷ್ಠಿತ ಹೋಟೆಲ್ ಕ್ಯಾಶಿಯರ್ ನನ್ನು (Bengaluru Murder Case)ಹತ್ಯೆ ಮಾಡಿ ಪರಾರಿ ಆಗಿರುವ ಘಟನೆ ಜೀವನ್ ಭೀಮಾ ನಗರದ ಮುರುಗೇಶ್ ಪಾಳ್ಯದ ಹೋಟೆಲಿನಲ್ಲಿ ನಡೆದಿದೆ.

ಬೆಂಗಳೂರಿನ(Bengaluru)ಪ್ರತಿಷ್ಠಿತ ಸಿಟಡೆಲ್ ಹೋಟೆಲ್ ಕ್ಯಾಶಿಯರ್ಆದ ಸುಭಾಷ್ ನನ್ನು ಹತ್ಯೆ ಮಾಡಿರುವ ಘಟನೆ ಜೀವನ್ ಭೀಮಾ ನಗರದ ಮುರುಗೇಶ್ ಪಾಳ್ಯದ ಹೋಟೆಲಿನಲ್ಲಿ(Hotel )ನಡೆದಿದ್ದು, ಅದೇ ಹೋಟೆಲಿನಲ್ಲಿ ಹೌಸ್ ಕೀಪರ್(House Keeper)ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಭಿಷೇಕ್ ಎಂಬಾತ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಸಿಟಡೆಲ್ ಹೋಟೆಲ್ ಕ್ಯಾಷಿಯರ್. ಸುಭಾಷ್ ಹೋಟೆಲ್ ಸೋಫಾದ ಮೇಲೆ ಮಲಗಿದ್ದ ಸಂದರ್ಭ ದೊಣ್ಣೆಯಿಂದ ಹೊಡೆದು ಹೌಸ್ ಕೀಪರ್ ಅಭಿಷೇಕ್ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕುಡಿದ ನಶೆಯಲ್ಲಿ ಹೌಸ್ ಕೀಪರ್ ಹತ್ಯೆ ಮಾಡಿರುವ ಅನುಮಾನ ಭುಗಿಲೆದ್ದಿದ್ದು, ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜೆ.ಬಿ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜೆ.ಬಿ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Leave A Reply

Your email address will not be published.