Delhi News: ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಟ್ರೆಡ್‌ಮಿಲ್‌ನಿಂದ ವಿದ್ಯುತ್‌ ಸ್ಪರ್ಶ!!! ವ್ಯಕ್ತಿ ಸಾವು

Latest news death news young man died of electrocution on the treadmill of a gym in Delhi

ದೆಹಲಿಯಲ್ಲಿ ಟ್ರೆಡ್‌ಮಿಲ್‌ನಲ್ಲಿ ವರ್ಕೌಟ್‌ ಮಾಡುತ್ತಿರುವಾಗ ಯುವಕನೋರ್ವ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಮಂಗಳವಾರ ಬೆಳಗ್ಗೆ ಏಳು ಗಂಟೆಗೆ ಈ ಘಟನೆ ನಡೆದಿದ್ದು, ಟ್ರೆಡ್‌ಮಿಲ್‌ನಲ್ಲಿ ವಿದ್ಯುತ್‌ ಸ್ಪರ್ಶವಾಗಿ ಯುವಕ ಸಾವನ್ನಪ್ಪಿದ್ದಾಗಿ ವರದಿಯಾಗಿದೆ.

ಮೃತ ಯುವಕ 24 ವರ್ಷದವನಾಗಿದ್ದು, ಜಿಮ್‌ ಅಪರೇಟರ್‌ ಅನುಭವ್‌ ದುಗ್ಗಲ್‌ ವಿರುದ್ಧ ಪೊಲೀಸರು ನಿರ್ಲಕ್ಷ್ಯದಿಂದ ಸಾವಿಗೆ ಕಾರಣ ಎಂಬ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ತನಿಖೆ ಮಾಡಿದ ಎಫ್‌ಎಸ್‌ಎಲ್‌ ತಂಡ ಲೋಹದ ಭಾಗದಲ್ಲಿ ಕರೆಂಟ್‌ ಬಂದು ಸಾವು ಸಂಭವಿಸಿದೆ ಎಂದು ಪೊಲೀಸರಿಗೆ ತಿಳಿಸಿದೆ. ಪ್ರತ್ಯಕ್ಷದರ್ಶಿ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಲಾಗಿದೆ. ಹಾಗೆನೇ ಜಿಮ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೃತ ಯುವಕ ಸಕ್ಷಂ ದಿವ್ಯ ಜ್ಯೋತಿ ಅಪಾರ್ಟ್‌ಮೆಂಟ್‌ ಸೆಕ್ಟರ್‌ -19 ರೋಹಿಣಿಯಲ್ಲಿ ವಾಸವಾಗಿದ್ದು, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಜಿಮ್‌ನಲ್ಲಿ ವರ್ಕೌಟ್‌ ಮಾಡಲು ಹೋಗಿದ್ದರು. ಕುಟುಂಬದವರು ಮಗನ ಮದುವೆಗೆ ಹೆಣ್ಣು ಹುಡುಕುತ್ತಿದ್ದರು ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ.

Leave A Reply

Your email address will not be published.