Indian Railways: ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್! ಕೈಗೆಟಕುವ ದರದಲ್ಲಿ ಆಹಾರ ಸೇವೆ!

latest news Goodnews from Indian Railways You can travel by train at a low cost

Indian Railways : ಭಾರತದಲ್ಲಿ ಲಕ್ಷಾಂತರ ಪ್ರಯಾಣಿಕರು(Railway Passengers) ರೈಲ್ವೇ ಮೂಲಕ ಪ್ರಯಾಣಿಸುವುದು ಗೊತ್ತಿರುವ ವಿಚಾರವೇ! ಈಗಾಗಲೇ ಭಾರತೀಯ ರೈಲ್ವೆ( Indian Railway)ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. ಇದರ ನಡುವೆ ರೈಲ್ವೇ ಇಲಾಖೆ ಮತ್ತೊಂದು ಸಿಹಿ ಸುದ್ದಿಯೊಂದನ್ನೂ ನೀಡಿದೆ.

ಭಾರತೀಯ ರೈಲ್ವೇ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿಶೇಷ ನಿರ್ಣಯ ಕೈಗೊಂಡಿದೆ. ರೈಲ್ವೇಯಿಂದ ಬಂದಿರುವ ಮಾಹಿತಿಯ ಅನುಸಾರ, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ(Express Trains) ವಿಕಲಚೇತನರಿಗೆ (Handicapped)ಲೋವರ್ ಬರ್ತ್‌ಗಳನ್ನು ಒದಗಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜೊತೆಗೆ ದೈಹಿಕ ನ್ಯೂನತೆ ಹೊಂದಿರುವ ಪ್ರಯಾಣಿಕರಿಗೆ ಲೋವರ್ ಬರ್ತ್ ನೀಡಲು ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಹಸಿವಾದರೆ ಏನು ಮಾಡೋದು ಎಂದು ಚಿಂತಿಸಬೇಕಾಗಿಲ್ಲ.

ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಸಾಮಾನ್ಯ ಬೋಗಿಯ ಮುಂದೆ ‘ಎಕಾನಮಿ ಮೀಲ್ಸ್’ ಸ್ಟಾಲ್ ಸ್ಥಾಪಿಸಲಾಗುವ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಮಂದಿ ಆಹಾರ ಇಲ್ಲವೇ ಪಾನೀಯಕ್ಕಾಗಿ ನಿಲ್ದಾಣದಲ್ಲಿ ಓಡಾಟ ನಡೆಸಬೇಕಾಗುತ್ತದೆ. ಈ ನಡುವೆ ರೈಲ್ವೆ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಎಕಾನಮಿ ಊಟವನ್ನು ಆರಂಭಿಸಲಾಗಿದೆ.

ರೈಲ್ವೆ ಮಂಡಳಿ ಜೂನ್ 27, 2023 ರಂದು ಹೊರಡಿಸಿದ ಪತ್ರದಲ್ಲಿ, ಜಿಎಸ್ ಬೋಗಿಗಳ ಬಳಿಯ ಪ್ಲಾಟ್ಫಾರ್ಮ್ನಲ್ಲಿ ಎಕಾನಮಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಈ ಕೌಂಟರ್ ಗಳ ಸ್ಥಳವನ್ನು ವಲಯ ರೈಲ್ವೆ ನಿರ್ಣಯ ಮಾಡಲಾಗುತ್ತದೆ. ಪ್ರಯಾಣಿಕರಿಗೆ ರೈಲ್ವೆ ನಿಗದಿಪಡಿಸಿದ ಕ್ಯಾಟರಿಂಗ್ ಬೆಲೆಯ ಅನುಸಾರ, 20 ರೂ.ಗೆ ಪುರಿ, ತರಕಾರಿಗಳು ಮತ್ತು ಉಪ್ಪಿನಕಾಯಿ ಪ್ಯಾಕೆಟ್ ದೊರೆಯುತ್ತವೆ. ಇದರಲ್ಲಿ 7 ಪೂರಿಗಳು, 150 ಗ್ರಾಂ ತರಕಾರಿಗಳ ಜೊತೆಗೆ ಉಪ್ಪಿನಕಾಯಿ ಕೂಡ ಸೇರಿದೆ. ಊಟದ ಟೈಪ್ ಒಂದರ ಅನುಸಾರ, ಪೂರಿ, ತರಕಾರಿ ಮತ್ತು ಉಪ್ಪಿನಕಾಯಿಗೆ 20 ರೂ. ವೆಚ್ಚವಾಗಿದೆ. ಉಪಾಹಾರದಲ್ಲಿ ರಾಜ್ಮಾ-ರೈಸ್, ಖಿಚ್ಡಿ, ಕುಲ್ಚೆ-ಚೋಲೆ, ಚೋಲೆ-ಭಾತುರೆ, ಪಾವ್ಭಾಜಿ ಅಥವಾ ಮಸಾಲಾ ದೋಸೆ 50ರೂಪಾಯಿಗೆ ಸಿಗಲಿದೆ. ಟೈಪ್ 2 ಗೆ 350 ಗ್ರಾಂ ತಿಂಡಿ ಊಟಕ್ಕೆ 50 ರೂ.ಆಗಿರಲಿದೆ. ಇದರ ಜೊತೆಗೆ ಪ್ರಯಾಣಿಕರಿಗೆ 200 ಎಂಎಂ ಪ್ಯಾಕೇಜ್ಡ್ ಸೀಲ್ಡ್ ಗ್ಲಾಸ್ಗಳು ದೊರೆಯಲಿವೆ.

Leave A Reply

Your email address will not be published.