Kenya Deaths: ಸಾಯುವವರೆಗೆ ಉಪವಾಸ ಮಾಡಿದರೆ ಯೇಸು ಕ್ರಿಸ್ತನ ಭೇಟಿ; ಸತ್ತವರ ಸಂಖ್ಯೆ 403 ಕ್ಕೆ ಏರಿಕೆ

Latest news Kenya Deaths More than 400 people who were fasting until they had breath died

Kenya: ಕಾಲ ಎಷ್ಟೇ ಬದಲಾದರೂ ಕೂಡ ಜನರ ಮೂಢನಂಬಿಕೆಗಳು ಬದಲಾಗಿಲ್ಲ. ಈಗಲೂ ಎಷ್ಟೋ ಕಡೆ ನರಬಲಿ ತೆರೆಮರೆಯಲ್ಲಿ ನಡೆಯುತ್ತಿವೆ. ಆದರೆ, ಯೇಸು ಕ್ರಿಸ್ತನನ್ನು (Jesus) ಆತ್ಮಿಕವಾಗಿ ಸಂಧಿಸಲು ಉಸಿರು ಇರುವ ತನಕ ಉಪವಾಸ ವ್ರತಾಚರಣೆಯಲ್ಲಿ ತೊಡಗಿದ್ದ 400ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ಕೀನ್ಯಾದಲ್ಲಿ (Kenya) ನಡೆದಿದೆ.

ಮಲಿಂದಿ ಪಟ್ಟಣ ಸಮೀಪದಲ್ಲಿರುವ ಶಕಹೋಲಾ ಅರಣ್ಯ ಪ್ರದೇಶದಲ್ಲಿ ಡೂಮ್ಸ್ ಡೇ ಆರಾಧನೆ (Doomsday Cult) ಎಂಬ ವ್ರತಾಚರಣೆ ನಡೆದಿದ್ದು,ಇದರಲ್ಲಿ ನೂರಾರು ಮಂದಿ ಭಾಗವಹಿಸಿದ್ದಾರೆ. ಡೂಮ್ಸ್ ಡೇ ಆರಾಧನೆ ಎಂದರೆ ಯೇಸುವನ್ನು ಸಂಧಿಸಲು ಜೀವ ಇರುವವರೆಗೆ ಉಪವಾಸ ವ್ರತಾಚಾರಣೆ ಮಾಡುವುದಾಗಿದೆ. ಕೀನ್ಯಾದಲ್ಲಿ ಈಗಾಗಲೇ ಬಡತನ, ಪೌಷ್ಟಿಕಾಂಶ ಕೊರತೆಯಿಂದ ಜನ ನರಳುತ್ತಿರುವ ನಡುವೆಯೇ ಮೂಢನಂಬಿಕೆ ಕೂಡ ಸೇರಿಕೊಂಡು ಅನೇಕ ಮಂದಿಯ ಸಾವಿಗೆ ಕಾರಣವಾದ ಘಟನೆ ನಡೆದಿದೆ.

ನೀವು ಸಾಯುವ ತನಕ ಉಪವಾಸ ಮಾಡಿದರೆ ಯೇಸು ಕ್ರಿಸ್ತನನ್ನು ನೇರವಾಗಿ ಭೇಟಿಯಾಗುತ್ತೀರಿ ಎಂದು ಗುಡ್ ಇಂಟರ್‌ನ್ಯಾಷನಲ್ ಚರ್ಚ್‌ನ ಪಾದ್ರಿ ಪೌಲ್ ಮ್ಯಾಕೆಂಜೀ ಎಂಬ ಪಾದ್ರಿ ಹೇಳಿದ್ದು, ಈ ಮಾತನ್ನು ನಂಬಿ ಯೇಸು ಕ್ರಿಸ್ತನನ್ನು ಭೇಟಿ ಮಾಡಬೇಕೆಂಬ ಬಯಕೆಯಿಂದ ಕೀನ್ಯಾದಲ್ಲಿ ಆಹಾರ, ನೀರು ಸೇವಿಸಿದೆ ಇಂತಹ ಮೂಢನಂಬಿಕೆಯ ಆಚರಣೆ ಮಾಡಿ ಸಾಮೂಹಿಕವಾಗಿ ಜನ ಉಪವಾಸ ಕೈಗೊಂಡಿದ್ದಾರೆ. ಇದುವರೆಗೆ 403 ಮಂದಿ (Kenya Deaths) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದ ಯೇಸುವಿನ ಭಕ್ತರನ್ನು ಡೂಮ್ಸ್‌ಡೇ ಆರಾಧಾನೆಗೆ ಪ್ರೇರಿಪಿಸಿದ್ದ ಧಾರ್ಮಿಕ ನಾಯಕರ ಪೌಲ್ ಮ್ಯಾಂಕೆಝಿ ಅವರನ್ನು ಬಂಧಿಸಲಾಗಿದೆ.

ಕಳೆದ ಏಪ್ರಿಲ್‌ನಿಂದ ಈ ಆಚರಣೆ ಮಾಡಲಾಗಿದ್ದು, ಇದುವರೆಗೆ ಕೀನ್ಯಾದ ಪೂರ್ವ ಭಾಗದಲ್ಲಿರುವ ಶಕಹೋಲಾ ಅರಣ್ಯದಲ್ಲಿ ನೂರಾರು ಜನರ ಶವ ಪತ್ತೆಯಾಗುತ್ತಿದೆ. ಕ್ರೈಸ್ತ ಪಾದ್ರಿಯ ಮಾತು ನಂಬಿಕೊಂಡ ಜನ ಅರಣ್ಯ ಪ್ರದೇಶದಲ್ಲಿ ಉಪವಾಸ ಮಾಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಪ್ರಮುಖವಾಗಿ ಹಸಿವಿನಿಂದ ಹೆಚ್ಚು ಮಂದಿ ಮೃತಪಟ್ಟಿರುವ ವಿಚಾರ ಬಯಲಾಗಿದೆ. ಮಕ್ಕಳನ್ನೊಳಗೊಂಡು ಹಲವರು ಮೃತಪಟ್ಟಿದ್ದು, ಕೆಲವರನ್ನು ಕತ್ತು ಹಿಸುಕಿ ಸಾಯಿಸಿದ್ದು, ಇನ್ನೂ ಕೆಲವರನ್ನು ಹೊಡೆದು, ಉಸಿರುಗಟ್ಟಿಸಿ ಕೊಳ್ಳಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.ಸದ್ಯ, ಈ ಪ್ರಕರಣವನ್ನು ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.

Leave A Reply

Your email address will not be published.