Viral News: ಇನ್ಸ್‌ಪೆಕ್ಷನ್‌ಗೆ ನಾನು ಬಂದಾಗ ನೀವು ಯಾಕೆ ಇರಲಿಲ್ಲ ಎಂದ ಬಾಸ್‌ ಪ್ರಶ್ನೆಗೆ ಉದ್ಯೋಗಿ ನೀಡಿದ ಉತ್ತರ ಹೇಗಿತ್ತು ಗೊತ್ತೇ? ಆನ್ಸರ್‌ ಫುಲ್‌ ವೈರಲ್‌

employee answer to a boss question about why you weren't there when the inspection came

Viral News: ಸಾಮಾನ್ಯವಾಗಿ ಯಾವುದೇ ಆಫೀಸ್ ಕೆಲಸವಾದರೂ ಟೈಮ್ ಗೆ ಸರಿಯಾಗಿ ಬರುವವರು ಕೆಲವರಿದ್ದರೆ, ಮತ್ತೆ ಕೆಲವರು ತಮ್ಮದೇ ಟೈಮಿಂಗ್ಸ್, ತಮ್ಮದೇ ರೂಲ್ಸ್ ಅನ್ನೋ ಹಾಗೇ ಬಂದು ಬಾಸ್ ಕೈಯಲ್ಲಿ ಬೆಳಿಗ್ಗೆಯೇ ಸಹಸ್ರ ನಾಮರ್ಚನೆ ಮಾಡಿಕೊಳ್ಳದೆ ಇದ್ದರೆ ಸಮಾಧಾನವಾಗದು. ಇದೇ ರೀತಿ, ತಡವಾಗಿ ಬಂದ ಉದ್ಯೋಗಿಯನ್ನು ಬಾಸ್ ಪ್ರಶ್ನಿಸಿದ್ದಕ್ಕೆ ಆತ ಕೊಟ್ಟ ಉತ್ತರ ಎಲ್ಲೆಡೆ ವೈರಲ್(Viral News)ಆಗಿ ಸಂಚಲನ ಮೂಡಿಸಿದೆ.

ರಾಜಸ್ಥಾನದಲ್ಲಿ(Rajasthan)ಸರ್ಕಾರಿ ಉದ್ಯೋಗಿಯೊಬ್ಬ(Government Employee)ಕಚೇರಿಗೆ ತಡವಾಗಿ ಬಂದಿದ್ದು, ಉದ್ಯೋಗಿ ಕೆಲಸದ ವಿಚಾರದಲ್ಲಿ ತೋರಿದ ಅಸಡ್ಡೆ ಹಾಗೂ ಅಶಿಸ್ತನ್ನು ಗಮನಿಸಿ ಮೇಲಧಿಕಾರಿ ಆ ಉದ್ಯೋಗಿಯನ್ನ ಪ್ರಶ್ನಿಸಿದ್ದು, ಆತ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ಕೋಟಾ ಝನ್‌ನ ಮುಖ್ಯ ಇಂಜಿನಿಯರ್ ಆದ ಜಿ.ಎಸ್.ಬೈರ್ವಾ ಅವರು ಜಲೈ 14ರಂದು ಜೈಪುರ ವಿದ್ಯುತ್ ವಿತರಣ ನಿಗಮಕ್ಕೆ ಅಚಾನಕ್ ಆಗಿ ಇನ್‌ಸ್ಪೆಕ್ಷನ್‌ಗಾಗಿ ಬಂದಿದ್ದಾರೆ. ಈ ಸಂದರ್ಭ ಜೈಪುರದ ವಿದ್ಯುತ್ ವಿತರಣ ನಿಗಮ ಲಿಮಿಟೆಡ್‌ನಲ್ಲಿ ಕಮರ್ಷಿಯಲ್ ಅಸಿಸ್ಟೆಂಟ್ ಆಗಿರುವ ಅಜಿತ್ ಸಿಂಗ್‌ ಅಲ್ಲಿರಲಿಲ್ಲ. ಬೆಳಗ್ಗೆ ಬೈರ್ವಾ ಅವರು ತಪಾಸಣೆಗೆ ಆಗಮಿಸಿದ ಸಂದರ್ಭ ಅಜಿತ್ ಸಿಂಗ್ ಕಾರ್ಯ ಸ್ಥಳದಲ್ಲಿ ಇರಲಿಲ್ಲ. ಅಷ್ಟೆ ಅಲ್ಲದೇ, ಹಾಜರಿ ಪುಸ್ತಕದಲ್ಲಿ ಅವರ ಸಹಿ ಕೂಡ ಇರಲಿಲ್ಲ. ಇದರಿಂದಾಗಿ ಕೋಪದಿಂದ ಜಿ.ಎಸ್.ಬೈರ್ವಾ ಅವರು ಅಜಿತ್ ಸಿಂಗ್‌ಗೆ ಗೈರಾಗಿರುವುದಕ್ಕೆ ಸ್ಪಷ್ಟನೆ ನೀಡಿ ಎಂದು ನೋಟಿಸ್‌ ಕಳುಹಿಸಿದ್ದಾರೆ.

ಮೇಲಧಿಕಾರಿ ಜಿ. ಎಸ್.ಬೈರ್ವಾ ಕೊಟ್ಟ ನೋಟಿಸ್ಗೆ ಉತ್ತರ ನೀಡಿರುವ ಅಜಿತ್ ಸಿಂಗ್, ‘ನೀವೆಂದೂ ಸರಿಯಾದ ಸಮಯಕ್ಕೆ ಬಂದಿಲ್ಲ. ಹಾಗಾಗಿ, ನಾನೂ ಕೂಡ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂದು ಹೇಳಿದ್ದಾರೆ. ಅಜಿತ್ ಸಿಂಗ್ ಅವರು ನೋಟಿಸ್‌ಗೆ ಕೊಟ್ಟ ಉತ್ತರದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದು, ಉದ್ಯೋಗಿಯ ಉತ್ತರಕ್ಕೆ ಹೀಗೂ ಮೇಲಧಿಕಾರಿಗಳಿಗೆ ಉತ್ತರ ನೀಡಬಹುದೆ ಎಂದು ನೆಟ್ಟಿಗರು ಕೂಡ ಅಚ್ಚರಿಗೊಂಡಿದ್ದಾರೆ. ಇದೇ ರೀತಿ ಉತ್ತರ ನೀಡುತ್ತಾ ಬಂದರೆ ನೌಕರಿ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಕೂಡ ಕೆಲವರು ವ್ಯಾಖ್ಯಾನ ಮಾಡುತ್ತಿದ್ದಾರೆ.

 

Leave A Reply

Your email address will not be published.