ಕಚೇರಿಯಲ್ಲೇ ನೇಣು ಬಿಗಿದು ಮಹಿಳಾ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ : ಕಿರುಕುಳ ನೀಡಿದ ಆರೋಪಿತ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

 

ಉಡುಪಿ : ಕಾರ್ಕಳದಲ್ಲಿ ಕಚೇರಿಯಲ್ಲೇ ಮಹಿಳಾ ಉದ್ಯೋಗಿಯೊಬ್ಬರು ಜು.14ರಂದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಿದ್ದಾನೆಂದು ಆರೋಪಕ್ಕೆ ಗುರಿಯಾಗಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಕಾರ್ಕಳದ ಮಾರ್ಕೆಟ್‌ ರೋಡ್‌ನಲ್ಲಿರುವ ಮಹಿಳಾ ಕೋ- ಆಪರೇಟಿವ್‌ ಬ್ಯಾಂಕಿನಲ್ಲಿ ಕಚೇರಿ ಸಹಾಯಕಿಯಾಗಿದ್ದ ಪ್ರಮೀಳಾ ಅವರು ಜು.14ರಂದು ಬೆಳಗ್ಗೆ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳಾ ಕೋ-ಆಪರೇಟಿವ್ ಸೊಸೈಟಿಯ ಉದ್ಯೋಗಿ ಪ್ರಮೀಳ ಅವರ ಸಹೋದರ ಕಸಬಾ ಗ್ರಾಮದ ಮಾರ್ಕೆಟ್ ರೋಡ್ ನಿವಾಸಿ ಪ್ರದೀಪ್ ದೇವಾಡಿಗ ನೀಡಿದ ದೂರಿನಲ್ಲಿ ಸಂತೋಷ ಯಾನೆ ಹರಿತನಯನ ಕಿರುಕುಳದಿಂದ ಪ್ರಮೀಳ (31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು

ಪ್ರಮೀಳಾ ಅವರ ಮದುವೆ ನರೇಶ ಎಂಬವರ ಜತೆಗೆ ಆಗಿತ್ತು. ಆದರೆ ಅವರು 3 ವರ್ಷಗಳಿಂದ ಪ್ರದೀಪ್ ದೇವಾಡಿಗರ ಮನೆಯಲ್ಲಿದ್ದು, ಕಚೇರಿಗೆ ಹೋಗಿ ಬರುತ್ತಿದ್ದರು. ನಿತ್ಯ 9 ಗಂಟೆಗೆ ಕಚೇರಿಗೆ ಹೋಗುವ ಪ್ರಮೀಳಾ ಜು. 14ರಂದು 8.20ಕ್ಕೆ ಹೋಗಿದ್ದರು. ಬೇರೆ ಉದ್ಯೋಗಿಗಳು ಕಚೇರಿಗೆ ಬರುವ ಮೊದಲೇ ನೆಣುಹಾಕಿಕೊಂಡಿದ್ದರು. ಅಂದು ಬೆಳಗ್ಗೆ ಉದ್ಯೋಗ ನಿಮಿತ್ತ ಕಲಬುರಗಿಯಲ್ಲಿದ್ದ ಪ್ರದೀಪ ದೇವಾಡಿಗರಿಗೆ ಅವರ ಹೆಂಡತಿ ಪ್ರಮೀಳ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು.

ಪ್ರದೀಪ ದೇವಾಡಿಗ ಊರಿಗೆ ಬಂದು ವಿಚಾರಿಸಿದಾಗ ನರೇಶರವರ ದೂರದ ಸಂಬಂಧಿಕ ಸಂತೋಷ ಯಾನೆ ಹರಿತನಯ ಎಂಬಾತ ಕಿರುಕುಳ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಪ್ರಮೀಳ ಈ ಕುರಿತು ತನ್ನ ಗೆಳತಿಗೆ ತಿಳಿಸಿದ್ದರು.

3 ಲ.ರೂ. ಕೊಡಬೇಕೆಂದು ಹರಿತನಯ 4 ತಿಂಗಳಿಂದ ಕಿರುಕುಳ ನೀಡುತ್ತಿದ್ದಾನೆ ಎಂಬುದಾಗಿ ಪ್ರಮೀಳ ಹೇಳಿಕೊಂಡಿದ್ದರು. ಈ ಕಿರುಕುಳದಿಂದ ಬೇಸತ್ತು ನೋವನ್ನು ಯಾರಿಗೂ ಹೇಳಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಹರಿತನಯನ ಕಿರುಕುಳವೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306ರಡಿಯಲ್ಲಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣ ದಾಖಲಾಗಿತ್ತು.

ಇದೀಗ ಆರೋಪಿತ ಸಂತೋಷ ಯಾನೆ ಹರಿತನಯ ಅವರ ಮೃತದೇಹವು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

Leave A Reply

Your email address will not be published.