Pan card: PAN Card ಇರೋ ಮಹಿಳೆಯರಿಗೆ 10,000 ನೀಡುವ ಕುರಿತು ಸರಕಾರ ಕೊಡ್ತು ಬಿಗ್ ಅಪ್ಡೇಟ್!

Latest news 10,000 order to women with PAN card is true or false

PAN Card: ಪ್ಯಾನ್‌ ಕಾರ್ಡ್ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ ಪ್ರಮುಖ ದಾಖಲೆಯಾಗಿದೆ. ಕೇಂದ್ರ ಸರ್ಕಾರ ಕಳೆದ ಹಲವು ವರ್ಷಗಳಿಂದ ಪಾನ್ಕಾರ್ಡ್ಗೆ ಆಧಾರ್ ಕಾರ್ಡ್ ಸಂಖ್ಯೆ(Aadhar – PAN Card Link) ಜೋಡಿಸುವಂತೆ ಸಾರ್ವಜನಿಕರಿಗೆ ಅನೇಕ ಬಾರಿ ಮನವಿ ಮಾಡಿದ್ದು, ಇದಕ್ಕಾಗಿ ಅವಧಿಯನ್ನು ವಿಸ್ತರಣೆ ಮಾಡುತ್ತಲೇ ಬಂದಿದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಗಡುವು ಕೂಡ ಈಗ ಮುಗಿದಿದೆ. ಒಂದು ವೇಳೆ, ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ ಅನೇಕ ಸಮಸ್ಯೆ ಎದುರಾಗುವುದು ಖಚಿತ.

ಪ್ಯಾನ್‌ ಕಾರ್ಡ್ ಇರುವ ಮಹಿಳೆಯರಿಗೆ(Womens )10 ಸಾವಿರ ಹಣವನ್ನು ಉಚಿತವಾಗಿ ನೀಡಲಾಗುತ್ತದೆ ಎಂಬ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದರ ವಾಸ್ತವ ಸತ್ಯವೇನು ಎಂಬ ಗೊಂದಲ ಜನ ಸಾಮಾನ್ಯರಲ್ಲಿ ಕಾಡುತ್ತಿದೆ. ಸದ್ಯ, ಈ ಕುರಿತು ಸರಕಾರ ಸ್ಪಷ್ಟನೆ ನೀಡಿದೆ.

Pan card

ಎಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ (Pan Card)ಪ್ರಮುಖ ದಾಖಲೆಗಳಲ್ಲಿ ಒಂದು. ಪ್ಯಾನ್ ಕಾರ್ಡ್ ಇಲ್ಲದೇ ಯಾವುದೇ ರೀತಿಯ ಹಣಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವುದು ಸುಲಭವಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪಾನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ(Central Government)ಆರ್ಥಿಕ ನೆರವು ದೊರೆಯುವ ಕುರಿತು ಕೆಲ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆದರೆ, ನಿಜಕ್ಕೂ ಕೇಂದ್ರ ಸರ್ಕಾರ ಈ ರೀತಿ ಯಾವುದಾದರೂ ಯೋಜನೆ ಜಾರಿಗೆ ತಂದಿದೆಯೆ ಎಂದು ಗಮನಿಸಿದರೆ, ಅಸಲಿ ವಿಚಾರ ಪರಿಶೀಲಿಸಿದ ಬಳಿಕ ಈ ಸುದ್ದಿ ಸಂಪೂರ್ಣವಾಗಿ ಸುಳ್ಳು (Fake News)ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದಿಂದ ಅಂತಹ ಯಾವುದೇ ಯೋಜನೆ ಜಾರಿ ಮಾಡಲಾಗಿಲ್ಲ.

‘ಯೋಜನಾ 4ಯು’ ಹೆಸರಿನ ಯೂಟ್ಯೂಬ್ ಚಾನೆಲ್‌ನ ವೀಡಿಯೊದಲ್ಲಿ ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರಿಗೆ ₹ 10,000 ನಗದು ನೀಡುತ್ತಿದೆ ಎಂದು ಹೇಳುತ್ತಿದೆ ಎಂದು ಪಿಐಬಿ ತನ್ನ ಅಧಿಕೃತ ಟ್ವೀಟ್‌ನಲ್ಲಿ ಬರೆದುಕೊಂಡಿದೆ. ಇದರ ಜೊತೆಗೆ ಇಂತಹ ವೈರಲ್ ಸುದ್ದಿಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸರ್ಕಾರ ಸೂಚಿಸಿದ್ದು, ಕೇವಲ ಸರ್ಕಾರಿ ವೆಬ್‌ಸೈಟ್ ಅನ್ನು ಮಾತ್ರ ನಂಬಿ ಎಂದು ಸರ್ಕಾರ ಸೂಚಿಸಿದೆ. ಇದಕ್ಕಾಗಿ ನೀವು ಅಧಿಕೃತ ಲಿಂಕ್ https://factcheck.pib.gov.in/ ಗೆ ಭೇಟಿ ನೀಡಬಹುದು. ಇದರ ಹೊರತಾಗಿ ನೀವು ವೀಡಿಯೊವನ್ನು WhatsApp ಸಂಖ್ಯೆ +918799711259 ಅಥವಾ ಇಮೇಲ್: [email protected] ಗೆ ಕಳುಹಿಸಬಹುದು.

ಇತ್ತೀಚಿಗೆ ಸುಳ್ಳು ಸುದ್ದಿಗಳನ್ನು ರವಾನಿಸುವ ಮಂದಿಯ ಸಂಖ್ಯೆ ಹೆಚ್ಚಾಗಿದೆ. ನಿಮಗೂ ಈ ರೀತಿಯ ಸುಳ್ಳು ಸುದ್ದಿ ಬಂದರೆ, ವೈರಲ್ ಸಂದೇಶದ ಸತ್ಯಾಸತ್ಯತೆಯನ್ನು ನೀವು ಚೆಕ್ ಮಾಡಬಹುದು. ಇಂತಹ ನಕಲಿ ಸಂದೇಶಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆಸರ್ಕಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

Leave A Reply

Your email address will not be published.