Udupi: ಆಸ್ಪತ್ರೆಯ ನಿರ್ಲಕ್ಷ್ಯ ಧೋರಣೆಯಿಂದ ವಿದ್ಯಾರ್ಥಿನಿ ನಿಖಿತಾ ಸಾವು ಪ್ರಕರಣ: ಉಡುಪಿ ಆಸ್ಪತ್ರೆಯಿಂದ ಕುಟುಂಬಕ್ಕೆ 20ಲಕ್ಷ ಪರಿಹಾರ!

Latest news death news Case of student Nikhita death due to hospital negligence

Udupi: ಇತ್ತೀಚೆಗೆ ಆಸ್ಪತ್ರೆಯ ನಿರ್ಲಕ್ಷ್ಯ ಧೋರಣೆ ಯಿಂದ ಕಾಲೇಜು ವಿದ್ಯಾರ್ಥಿನಿ ನಿಖಿತಾ ಮೃತಪಟ್ಟ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ, ಉಡುಪಿಯ (Udupi) ಆಸ್ಪತ್ರೆಯ ಆಡಳಿತ ಮಂಡಳಿ ಈ ಕುಟುಂಬಕ್ಕೆ 20 ಲಕ್ಷ ರೂ.ಗಳ ಪರಿಹಾರ ಧನವನ್ನು ಜುಲೈ 20ರಂದು ಹಸ್ತಾಂತರ ಮಾಡಿದೆ.

ಇತ್ತೀಚೆಗೆ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿನಿಯ ಸಾವಿಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆಯೆ ಕಾರಣವೆಂದು ಆರೋಪಿಸಿ ಉಡುಪಿ ಆಸ್ಪತ್ರೆಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸಂಘಟನೆಗಳ ಆಗ್ರಹಿಸಿದ್ದರು. ಇದಕ್ಕೆ ಒಪ್ಪಿದ ಆಸ್ಪತ್ರೆ ಆಡಳಿತ ಮಂಡಳಿ ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ನೀಡಿದೆ.

ನಿಖಿತಾ ತಂದೆ-ತಾಯಿಗೆ ಈ ಪರಿಹಾರ ಹಣ ಮಗಳ ಸಾವಿನ ನೋವನ್ನು ತುಂಬದು. ಆದರೆ ಮಗಳಿಗಾಗಿ ಕಟ್ಟಿದ ಹೊಸಮನೆಯ ಸಾಲ ತೀರಿಸುವ ನಿಟ್ಟಿನಲ್ಲಿ ನೆರವಾಗಬಹುದು. ಬೇರೆ ಮಕ್ಕಳಿಲ್ಲದ ಹಿನ್ನೆಲೆ ಮೃತ ವಿದ್ಯಾರ್ಥಿನಿಯ ಪೋಷಕರಿಗೆ ಆಸರೆಯಾಗಲಿದೆ. ನ್ಯಾಯಪರ ಹೋರಾಟ, ಸಮುದಾಯ ಸಂಘಟನೆಗಳ ಮನವಿಗಳಿಗೆ ಸಂದ ಜಯವಿದು ಎಂದು ಕುಲಾಲ ಸಂಘಟನೆ ಮುಖಂಡ ಡಾ.ಎಂ. ಅಣ್ಣಯ್ಯ ಕುಲಾಲ್ ಬಣ್ಣಿಸಿದ್ದಾರೆ. ಕುಟುಂಬದ ನೋವಿಗೆ ಸ್ಪಂದಿಸಿದ ಆಸ್ಪತ್ರೆ ನಿಲುವು ಶ್ಲಾಘನೀಯ ಎಂದು ಈ ಬಗ್ಗೆ ಡಾ.ಎಂ. ಅಣ್ಣಯ್ಯ ಕುಲಾಲ್ ಪ್ರಕಟಣೆ ನೀಡಿದ್ದಾರೆ.

Leave A Reply

Your email address will not be published.