Education News: CBSE 10 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆ ದಿನಾಂಕದ ಕುರಿತು ಮಹತ್ವದ ಮಾಹಿತಿ ಪ್ರಕಟ!

Latest news Education News Information about CBSE 10th and 12th Board Exam Date

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE ) ಬೋರ್ಡ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಮುಂಬರುವ ವರ್ಷದಲ್ಲಿ 10 ಮತ್ತು 12 ನೇ ತರಗತಿಗಳಿಗೆ ಯಾವಾಗ ಪರೀಕ್ಷೆ (Exams) ನಡೆಯಲಿದೆ ಎಂಬ ಗೊಂದಲ ಹೆಚ್ಚಿನವರಿಗೆ ಕಾಡುವುದು ಸಹಜ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಪರೀಕ್ಷೆ ಸಿದ್ಧತೆ ನಡೆಸಿಕೊಳ್ಳಲು ಈ ಮಾಹಿತಿ ತುಂಬಾ ಮುಖ್ಯವಾಗಿರುತ್ತದೆ. CBSE ಬೋರ್ಡ್ ಪರೀಕ್ಷೆಗಳ ದಿನಾಂಕದ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, CBSE ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

2023-24 ಶೈಕ್ಷಣಿಕ ವರ್ಷದ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15, 2024 ರಂದು ಆರಂಭವಾಗಿ ಏಪ್ರಿಲ್ 10 ರಂದು ಕೊನೆಗೊಳ್ಳಲಿದೆ. ಮಂಡಳಿಯ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಪೋಸ್ಟ್ ಮಾಡಲಾದ ಸುತ್ತೋಲೆಯಲ್ಲಿ ದಿನಾಂಕವನ್ನು ಪ್ರಕಟಿಸಲಾಗಿದೆ. ಈ ಕುರಿತ ಟೈಮ್ ಟೇಬಲ್ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಈ ಪರೀಕ್ಷೆಗಳನ್ನು ಸರಿಸುಮಾರು 55 ದಿನಗಳ ಅವಧಿಗೆ ನಡೆಸಲಾಗುತ್ತದೆ. ಏಪ್ರಿಲ್ 10, 2024 ರೊಳಗೆ ಕೊನೆಗೊಳ್ಳುವ ಸಂಭವದ ಕುರಿತು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

CBSE ದಿನಾಂಕ ಶೀಟ್ 2024 ಡೌನ್‌ಲೋಡ್ ಮಾಡುವ ವಿಧಾನ ಹೀಗಿದೆ:
ಮೊದಲಿಗೆ, ಅಧಿಕೃತ ವೆಬ್‌ಸೈಟ್‌ಗೆ cbse.gov.in ಭೇಟಿ ನೀಡಿ ಮುಖಪುಟದಲ್ಲಿ ಇತ್ತೀಚಿನ ಅಧಿಸೂಚನೆಗಳ ಕಾಲಮ್ಗೆ ಹೋಗಬೇಕು. ಆ ಬಳಿಕ CBSE 10, 12ನೇ ತರಗತಿ ದಿನಾಂಕದ ಶೀಟ್ಅನ್ನು ಕ್ಲಿಕ್ ಮಾಡಬೇಕು. ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ನಿಮ್ಮ ಪರದೆಯ ಮೇಲೆ PDF ಫೈಲ್ ಕಾಣಿಸುತ್ತದೆ. ಇದರಲ್ಲಿ ಪರೀಕ್ಷೆಯ ವೇಳಾಪಟ್ಟಿಯನ್ನು ನೋಡಬಹುದು.

Leave A Reply

Your email address will not be published.