Fraud Case: ಪ್ರೀತಿ ನಾಟಕದಲ್ಲಿ ಲೈಂಗಿಕ ಆಸೆ ಪೂರೈಸಿದ ಯುವಕ! ಹುಡುಗಿ ಗರ್ಭಿಣಿ ಎಂದಾಗ…

Latest news fake love Fraud Case boy has cheated a girl in the name of love

Fraud Case : ಪ್ರೀತಿ ಕುರುಡು ಎಂಬಂತೆ ಪ್ರೀತಿ(Love )ಪ್ರೇಮದ ಹೆಸರಲ್ಲಿ ನಾಟಕವಾಡಿ ಮೋಸ ಮಾಡುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಗರ್ಭಪಾತ ಮಾಡಿಸಿ ಎಸ್ಕೇಪ್ ಆಗಲು ಹೊರಟಿದ್ದ ಯುವಕನನ್ನು (Boy)ಯುವತಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ವರದಿಯಾಗಿದೆ.

ಚಿಕ್ಕಬಳ್ಳಾಪುರ ಇಲ್ಲಿನ ಶಿಡ್ಲಘಟ್ಟ ನಗರದಲ್ಲಿ ಪ್ರೀತಿ-ಪ್ರೇಮ ಎಂದು ಮರುಳು ಮಾತಿನಲ್ಲೇ ನಂಬಿಸಿ ಯುವತಿಯನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದ ಪ್ರಿಯಕರ ಚೇತನ್ ವನಿತಾಳನ್ನು ಎರಡು ವರ್ಷಗಳಿಂದ ಪ್ರೀತಿಸುವ ನಾಟಕವಾಡಿದ್ದ. ಕಿರಿಗಿಂಬಿ ಗ್ರಾಮದ ಚೇತನ್ ಎಂಬ ವ್ಯಕ್ತಿ ಇಟಪ್ಪನಹಳ್ಳಿ ಗ್ರಾಮದ ಬಾಬು ಎಂಬವರ ಪುತ್ರಿ ವನಿತಾಳಿಗೆ ಪ್ರೀತಿಸಿ (Love case) ವಂಚಿಸಲು (Fraud case) ಯತ್ನಿಸಿದ್ದಾನೆ.

ಚೇತನ್ ವನಿತಾಳೊಂದಿಗೆ 2 ವರ್ಷ ಪ್ರೀತಿ ಹೆಸರಲ್ಲಿ ನಾಟಕವಾಡಿ ಯುವತಿಯನ್ನು ಪುಸಲಾಯಿಸಿ ದೈಹಿಕ ಸಂರ್ಪಕ ಬೆಳಸಿದ್ದು ಸಾಲದೆಂಬಂತೆ ಆಕೆ ಗರ್ಭಿಣಿ ಎಂಬುದು ಗೊತ್ತಾಗುತ್ತಿದ್ದಂತೆ ಗರ್ಭಪಾತ (Abortion)ಮಾಡಿಸಲು ಪದೆಪದೇ ಒತ್ತಾಯ ಮಾಡುತ್ತಿದ್ದ ಎನ್ನಲಾಗಿದೆ. ಮದುವೆಯಾಗದೆ ದೈಹಿಕ ಸಂಪರ್ಕ ಹೊಂದಿದ್ದವನಿಗೆ ಪ್ರೇಯಸಿ ಗರ್ಭಿಣಿಯಾಗಿದ್ದಾಳೆ ಎಂಬ ವಿಚಾರ ತಿಳಿದ ಬಳಿಕ ಯುವಕ ಗರ್ಭಪಾತ ಮಾಡಿಸಿ ಪರಾರಿ (Love case) ಯಾಗುವ ಹೊಂಚು ಹಾಕಿದ್ದ.

ಇಂದು ಶುಕ್ರವಾರದಂದು ಪ್ರಿಯಕರ ಗರ್ಭಪಾತ ಮಾಡಿಸಲು ವನಿತಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಈ ವಿಷಯ ತಿಳಿದು ಯುವತಿ ಮತ್ತು ಯುವತಿಯ ಮನೆಯವರು ಯುವತಿಗೆ ಮೋಸ ಮಾಡುವ ಯೋಜನೆ ಹಾಕಿದ ಹುಡುಗನಿಗೆ ಪ್ರೇಯಸಿ ಮತ್ತು ಆಕೆಯ ಕುಟುಂಬಸ್ಥರು ಸೇರಿ ಪ್ರಿಯಕರನಿಗೆ ನಡು ರಸ್ತೆಯಲ್ಲಿ (Assault case) ಹಿಗ್ಗ ಮುಗ್ಗ ಥಳಿಸಿದ್ದಾರೆ. ಪ್ರಿಯತಮೆಯ ಥಳಿತಕ್ಕೆ ಹೆದರಿದ ಚೇತನ್ ನಡು ರಸ್ತೆಯಲ್ಲೇ ತಾಳಿ ಕಟ್ಟಿದ್ದಾನಂತೆ. ಅಂತೂ ಇಂತೂ ಪ್ರೀತಿ ಹೆಸರಲ್ಲಿ ನಾಟಕವಾಡಿದ ಹುಡುಗನಿಗೆ ಪ್ರೇಯಸಿ ತಕ್ಕ ಪಾಠ ಕಲಿಸಿದ್ದಾಳೆ

Leave A Reply

Your email address will not be published.