Mysore: ಪುಂಡರ ವ್ಹೀಲಿಂಗ್ ಅಟ್ಟಹಾಸ! ಶಿಕ್ಷಕಿ ತಲೆಗೆ ತೀವ್ರ ಪೆಟ್ಟು, ಗಂಭೀರ!

latest news Mysore news teacher suffered a severe head injury due to the boys' bike wheeling

Mysore: ವಾಹನ ಚಾಲನೆ ಕುರಿತು ಸರ್ಕಾರ ಅದೆಷ್ಟೇ ಕ್ರಮ ಕೈಗೊಂಡರು ಕೂಡ ಯುವಜನತೆ ಮಾತ್ರ ತಮ್ಮ ಹುಚ್ಚಾಟವನ್ನೂ ನಿಲ್ಲಿಸದೇ ಸಾವಿನ ದವಡೆಗೆ ಸಿಲುಕಿದ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇವೆ.ಅದರಲ್ಲಿಯೂ ಇತ್ತೀಚೆಗೆ ಮೈಸೂರಿನಲ್ಲಿ(Mysore) ಬೈಕ್‌ ವೀಲಿಂಗ್ (Bike Wheeling) ಪ್ರಕರಣಗಳು ಹೆಚ್ಚಾಗುತ್ತಿವೆ.

ರೂಲ್ಸ್ ಗಳಿರುವುದೇ ಬ್ರೇಕ್ ಮಾಡೋದಕ್ಕೆ ಎಂಬ ಫಿಲಾಸಫಿ ಯನ್ನ ಪಾಲಿಸುವವರೇ ಹೆಚ್ಚು ಮಂದಿ. ಅದರಲ್ಲಿಯೂ ಯುವ ಜನತೆಯ ಕಥೆ ಕೇಳೋದೇ ಬೇಡ. ಟ್ರಾಫಿಕ್ ರೂಲ್ಸ್( Traffic Rules) ಗಳನ್ನ ಬ್ರೇಕ್ ಮಾಡಿ ಪೋಲೀಸರ ಕೈಯಲ್ಲಿ ತಗಾಲಾಕಿಕೊಳ್ಳುವ ಕೆಲವು ಮಂದಿ ದಂಡ ಪಾವತಿಸಿದ ಬಳಿಕವೂ ಮತ್ತೆ ಮುಂದುವರಿಸುವುದು ತಮ್ಮ ಹಳೆ ಚಾಳಿಯನ್ನು ಎಂಬುದು ವಿಪರ್ಯಾಸ. ಸ್ಕೂಟರ್ , ಬೈಕಿನಲ್ಲಿ ಇಬ್ಬರು ಮೂವರು ಎಂದು ಡಬಲ್, ಟ್ರಿಬಲ್ ರೈಡಿಂಗ್ ಮಾಡಿಕೊಂಡು ಹುಚ್ಚು ಸಾಹಸ ಪ್ರದರ್ಶನ ಮಾಡುತ್ತಾ ಜೀವಕ್ಕೆ ಆಪತ್ತು ತಂದುಕೊಳ್ಳುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಇತ್ತೀಚಿಗೆ ಜುಲೈ 18ರಂದು ಸಂಜೆಯ ವೇಳೆಗೆ ಮೈಸೂರಿನಲ್ಲಿ ಗಾಯತ್ರಿಪುರಂ ಚರ್ಚ್ ಬಳಿ ಕೆಟಿಎಂ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಮಾಡಿಕೊಂಡು ಬಂದ ಮೂವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಶಿಕ್ಷಕಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಮನೆಗೆ ತೆರಳುತ್ತಿದ್ದ ಶಿಕ್ಷಕಿಗೆ ಟ್ರಿಬಲ್ ರೈಡಿಂಗ್ ವೀಲಿಂಗ್ ಮಾಡಿಕೊಂಡು ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿಯ ತಲೆಗೆ ಗಂಭೀರ ಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಡೆದಿದೆ. ಹೀಗಿದ್ದರೂ ಕೂಡ ಈ ಘಟನೆ ವೇಳೆ ಡಿಕ್ಕಿ ಹೊಡೆದ ಸವಾರರು ವಾಹನವನ್ನು ಕೂಡ ನಿಲ್ಲಿಸದೆ ಅಲ್ಲಿಂದ ವೇಗವಾಗಿ ಸಾಗಿ ಅಲ್ಲಿಂದ ಎಸ್ಕೇಪ್ ಆಗಿಬಿಟ್ಟಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಶಿಕ್ಷಕಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಶಿಕ್ಷಕಿಯ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.