Mangalore: 60 ಮಂದಿಯನ್ನು ಗಡಿಪಾರು ಮಾಡಲಾಗುವುದು :ಯಾವ ಸಂಘಟನೆ ಎಂದು ಗೊತ್ತಿಲ್ಲ. ಸಮಾಜಘಾತುಕರ ವಿರುದ್ಧ‌ ನಿರಂತರ ಕ್ರಮ- ಕಮೀಷನರ್

Latest news Police notice to three Bajrang Dal activists involved in ethical police case

Mangalore:  ನೈತಿಕ ಪೊಲೀಸ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಬಜರಂಗದಳ ಕಾರ್ಯಕರ್ತರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ. ನಿಮ್ಮನ್ನು ಯಾಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಮರೋಳಿಯಲ್ಲಿ ನಡೆದಿದ್ದ ಹೋಳಿ ಆಚರಣೆಗೆ ಅಡ್ಡಿ ಪಡಿಸಿದ್ದು ಮತ್ತು ಕಂಕನಾಡಿಯಲ್ಲಿ ಸುಲ್ತಾನ್ ಗೋಲ್ಡ್ ಜುವೆಲ್ಲರಿಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 3 ಗಣೇಶ್ ಆರೋಪಿಗಳಾಗಿದ್ದ ಬಾಲಚಂದ್ರ ಅತ್ತಾವರ, ಅತ್ತಾವರ ಮತ್ತು ಜಯಪ್ರಕಾಶ್ ಶಕ್ತಿನಗರ ಎಂಬ ಮೂವರ ವಿರುದ್ಧ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.ಈ ಬಗ್ಗೆ ಸ್ಥಳೀಯ ಠಾಣೆಗಳ ಇನ್ಸ್ ಪೆಕ್ಟರ್ ಗಳು ನೀಡಿರುವ ವರದಿ ಆಧರಿಸಿ ಈ ಮೂವರನ್ನು ಮಂಗಳೂರು ನಗರಪೊಲೀಸರು ನೋಟೀಸ್ ನೀಡಿದ್ದು, ನಿಮ್ಮನ್ನು ಯಾಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ಮರೋಳಿಯಲ್ಲಿ ನಡೆದಿದ್ದ ಹೋಳಿ ಆಚರಣೆಗೆ ಅಡ್ಡಿ ಪಡಿಸಿದ ಜೊತೆಗೆ ಕಂಕನಾಡಿಯಲ್ಲಿ ಸುಲ್ತಾನ್ ಗೋಲ್ಡ್ ಜುವೆಲ್ಲರಿಗೆ ನುಗ್ಗಿ ಹಲ್ಲೆ ನಡೆಸಿದ ಆರೋಪಿಗಳಾದ ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ ಮತ್ತು ಜಯಪ್ರಕಾಶ್ ಶಕ್ತಿನಗರ ಎಂಬ ಮೂವರ ವಿರುದ್ಧ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.

ಈ ಕುರಿತಂತೆ ಸ್ಥಳೀಯ ಠಾಣೆಗಳ ಇನ್ಸ್ ಪೆಕ್ಟರ್ ಗಳು ನೀಡಿರುವ ವರದಿಯ ಮೇರೆಗೆ ಮೂವರನ್ನು ಮಂಗಳೂರು ನಗರ ಪೊಲೀಸ್ ವಿಭಾಗದ ಡಿಸಿಪಿ ಅಂಶುಕುಮಾರ್ ಮುಂದೆ ಹಾಜರಾಗಲು ಸೂಚಿಸಲಾಗಿದೆ. ನಿರಂತರವಾಗಿ ಕ್ರಿಮಿನಲ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಅಪರಾಧಗಳಿಗೆ ಪರೋಕ್ಷವಾಗಿ ಸಹಕರಿಸುವುದು ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ. ಈ ಮೂವರಿಗೆ ನೋಟೀಸ್ ನೀಡಲಾಗಿದ್ದು, ಮಂಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ರೀತಿ ಶಿಸ್ತಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.

ಆಯಾ ಠಾಣೆಗಳ ವ್ಯಾಪ್ತಿಯ ಅಧಿಕಾರಿಗಳು ಕಮಿಷನರಿಗೆ ವರದಿ ಸಲ್ಲಿಸಿದ ಅನುಸಾರ ಜುಲೈ 21 ಇಲ್ಲವೇ ಅದರೊಳಗೆ ಬಂದು ಈ ಕುರಿತು ಲಿಖಿತ ಸ್ಪಷ್ಟನೆ ನೀಡುವಂತೆ ನೋಟೀಸ್ ನೀಡಲಾಗಿದೆ. ಈ ಕುರಿತು ಪೊಲೀಸ್ ಕಮಿಷನ‌ ಕುಲದೀಪ್ ಜೈನ್ ಅವರು ಮಾಹಿತಿ ನೀಡಿದ್ದಾರೆ.

ನೈತಿಕ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರ ಮೇಲೆ ಪ್ರಸ್ತಾವನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಒಂದು ವರ್ಷದಲ್ಲಿ 60 ಮಂದಿಯನ್ನು ಗಡೀಪಾರು ಮಾಡಲು ಪಟ್ಟಿ ಸಲ್ಲಿಸಲಾಗಿದೆ. ಆ ಪೈಕಿ ಹಲವು ಸಂಘಟನೆಯವರು ಇರುವ ಸಾಧ್ಯತೆಯಿದೆ. ಅಪರಾಧ ಕೃತ್ಯಗಳಲ್ಲಿ ತೊಡಗಿದವರು ಯಾರೇ ಆಗಿದ್ದರೂ ಕೂಡ ಅವರು ಆರೋಪಿಗಳಷ್ಟೇ . ಅವರು ಯಾವ ಸಂಘಟನೆಯವರು ಇಲ್ಲವೇ ಅವರ ಹಿನ್ನೆಲೆಯೇನು ಎಂಬುದು ನಮಗೆ ಗೊತ್ತಿಲ್ಲ. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇವರ ವಿರುದ್ಧ ರೌಡಿ ಶೀಟ್ ತೆರೆಯೋದು, ಗೂಂಡಾ ಹೇರುವ ಪ್ರಕ್ರಿಯೆಯೂ ಆಗಲಿದೆ. ಜಿಲ್ಲೆಯ ಶಾಂತಿ ಕಾಪಾಡುವ ದೃಷ್ಟಿಯಿಂದ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದಿದ್ದಾರೆ.

Leave A Reply

Your email address will not be published.