Viral News: 3 ನೇ ತರಗತಿ ವಿದ್ಯಾರ್ಥಿ ಮಹಡಿ ಮೇಲಿಂದ ಜಿಗಿತ! ಕಾರಣವೇನು ಗೊತ್ತೇ? ಪೋಷಕರೇ ಎಚ್ಚರ

Latest news Viral News incident a student jumped from a school building

Viral News: ಇತ್ತೀಚೆಗಂತೂ ಯಾವುದಾದರೂ ಸಿನಿಮಾಗಳನ್ನ ನೋಡಿದಾಗ ಅದರಲ್ಲಿ ಬರುವ ಸಾಹಸಮಯ ದೃಶ್ಯಗಳನ್ನು ಅನುಕರಣೆ ಮಾಡುವ ಟ್ರೆಂಡ್ ಈಗ ಹೆಚ್ಚಾಗಿದೆ. ಅದೇ ರೀತಿ, ತಾನೇ ಸ್ಪೈಡರ್ ಮ್ಯಾನ್(Spider Man)ಎಂಬ ಭ್ರಮೆಯಿಂದ 3 ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದಿಂದ(School)ಜಿಗಿದ ಘಟನೆ ನಡೆದಿದೆ.

ಈ ಘಟನೆ ನಡೆದಿದ್ದು, ಕಾನ್ಪುರದ ಡಾ. ವೀರೇಂದ್ರ ಸ್ವರೂಪ್ ಶಿಕ್ಷಣ ಶಾಲೆಯಲ್ಲಿ ಎಂದು ತಿಳಿದು ಬಂದಿದೆ. ಬುಧವಾರ ಶಾಲಾ ಸಮಯದಲ್ಲಿ ಎಂಟು ವರ್ಷದ 3 ನೇ ತರಗತಿಯ ವಿದ್ಯಾರ್ಥಿ(Student) ವಿದ್ಯಾರ್ಥಿ ಕ್ರಿಶ್ ಚಿತ್ರದಲ್ಲಿ ಹೃತಿಕ್ ರೋಷನ್ ಅವರ ಸ್ಪೈಡರ್ ಮ್ಯಾನ್ ಪಾತ್ರದ ಸಾಹಸಗಳನ್ನು ನೋಡಿ ತಾನು ಕೂಡ ಸೂಪರ್ ಪವರ್ (Super Power) ಹೊಂದಿದ್ದೇನೆ ಎಂಬ ಭಾವನೆಯಿಂದ ಜಿಗಿಯಲು ಮುಂದಾಗಿದ್ದಾನೆ.

ಹೀಗಾಗಿ, ಅನಿಲ್ ಕಾಲೋನಿಯ ನಿವಾಸಿಯಾಗಿರುವ ಮಗು ಶಾಲೆಗೆ ತನ್ನ ತರಗತಿಯಿಂದ ಹೊರಗಡೆ ಬಂದು ಕಾರಿಡಾರ್ ಮೇಲೆ ಕಂಬವೊಂದನ್ನು ಏರಿ ನಿಂತು ಮೊದಲನೇ ಮಹಡಿಯ ಸರಳುಗಳನ್ನು ಹಿಡಿದು ಕೆಳಗೆ ಹಾರಿದ್ದಾನೆ. ಈ ವಿಡಿಯೋ (Video) ಕೂಡ ವೈರಲ್(Viral News) ಆಗುತ್ತಿದೆ. ವಿದ್ಯಾರ್ಥಿ ಶಾಲಾ ಸಮಯದಲ್ಲಿ ಮೊದಲ ಮಹಡಿಯ ಜಿಗಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಹೀಗಾಗಿ , ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಸದ್ಯ, ಈ ಘಟನೆಯ ದೃಶ್ಯಾವಳಿಗಳು ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave A Reply

Your email address will not be published.