Josephine Chapline: ಕಾಮಿಡಿ ಲೆಜೆಂಡ್‌ ಚಾರ್ಲಿ ಚಾಪ್ಲಿನ್ ಮಗಳು ಜೋಸೆಫೀನ್ ಚಾಪ್ಲಿನ್ ನಿಧನ!

charlie-chaplin-daughter-josephine-chaplin-demise-at-the-age-of-74

Josephine Chapline: ಜೀವನದಲ್ಲಿ ಏನೇ ಕಷ್ಟ ನೋವು ಬಂದಾರೂ ಜನರನ್ನು ನಗಿಸಿದ್ದ ಪ್ರಸಿದ್ಧ ನಟ ಚಾರ್ಲಿ ಚಾಪ್ಲಿನ್‌. ಈಗಲೂ ಈ ಹೆಸರು ಕೇಳಿದಾಗ ಎಲ್ಲರ ಮುಖದಲ್ಲಿ ನಗು ಮೂಡುತ್ತದೆ. ಈಗ ಬಂದಿರುವ ಸುದ್ದಿ ಏನೆಂದರೆ ಕಾಮಿಡಿ ಲೆಜೆಂಡ್‌ ಚಾರ್ಲಿ ಚಾಪ್ಲಿ ಅವರ ಪುತ್ರಿ ತಮ್ಮ 74 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಜುಲೈ 13ರಂದು ಇವರ ನಿಧನವಾಯಿತು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಮಾರ್ಚ್ 28, 1949 ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದ ಜೋಸೆಫೀನ್ ಚಾಪ್ಲಿನ್, ಚಾರ್ಲಿ ಚಾಪ್ಲಿನ್ ಮತ್ತು ಊನಾ ಓ’ನೀಲ್ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದರು. ಅವರು 1952 ರಲ್ಲಿ ತಮ್ಮ ತಂದೆಯ ‘ಲೈಮ್ಲೈಟ್’ ಮೂಲಕ ತಮ್ಮ ಚಿಕ್ಕ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಜೋಸೆಫೀನ್ ಚಾಪ್ಲಿನ್‌ಗೆ ಚಾರ್ಲಿ, ಆರ್ಥರ್ ಮತ್ತು ಜೂಲಿಯನ್ ರೋನೆಟ್ ಎಂಬ ಮೂವರು ಪುತ್ರರಿದ್ದಾರೆ.

Leave A Reply

Your email address will not be published.