Bengaluru: ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಫುಲ್ ಖುಷಿಯ ಸುದ್ದಿ: ಸಿಗಲಿದೆ ನಿಮಗೆ ಆ್ಯಪಲ್‌ ಲ್ಯಾಪ್‌ಟಾಪ್‌!

Latest news Bangalore University PhD students will get an Apple laptop

Bengaluru: ಬೆಂಗಳೂರು(Bengaluru) ವಿಶ್ವವಿದ್ಯಾಲಯದ ಪಿಎಚ್ಡಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರು ವಿವಿ ತ್ರಿಜಭನೆಯಾದ ಬಳಿಕ ವಿವಿಯು ಇದೇ ಮೊದಲ ಬಾರಿಗೆ ಪಿಎಚ್ಡಿ ವಿದ್ಯಾರ್ಥಿಗಳಿಗೆ ಆ್ಯಪಲ್ ಲ್ಯಾಪ್ಟಾಪ್ (Apple Laptop For PHD Students)ನೀಡಲು ಮುಂದಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿರುವ 181 ವಿದ್ಯಾರ್ಥಿಗಳಿಗೆ ಈ ಆ್ಯಪಲ್ ಲ್ಯಾಪ್ಟಾಪ್ ದೊರೆಯಲಿದೆ.ಬೆಂಗಳೂರು ವಿವಿಯಲ್ಲಿ 2019ನೇ ಬ್ಯಾಚ್ನಲ್ಲಿ ಪಿಎಚ್ಡಿಗೆ 700 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಈ ಪೈಕಿ 181 ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಇವರಿಗೆ ಲ್ಯಾಪ್ ಟಾಪ್ ದೊರೆಯಲಿದೆ. ಪಿಎಚ್ಡಿಗೆ ಪ್ರವೇಶ ಪಡೆದು ಮೂರು ವರ್ಷ ಕಳೆದಿದ್ದರೂ ಕೂಡ ಲ್ಯಾಪ್ಟಾಪ್ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪ್ರವೇಶ ಪಡೆದು ಮೂರು ವರ್ಷ ಕಳೆದಿದ್ದು, ಇದೀಗ, ಹೊಸದಾಗಿ ಪಿಎಚ್ಡಿ ಪ್ರವೇಶ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಹೀಗಿದ್ದರೂ ಕೂಡ ಹಳೆ ಸಂಶೋಧನಾ ವಿದ್ಯಾರ್ಥಿಗಳಿಗೆ ಈವರೆಗೆ ಉಚಿತ ಲ್ಯಾಪ್ಟಾಪ್ ದೊರೆತಿಲ್ಲ ಎನ್ನಲಾಗಿದೆ.

ಸಾಮಾನ್ಯವಾಗಿ ಕೋರ್ಸ್ ವರ್ಕ್ ಮುಗಿದ ನಂತರ ಲ್ಯಾಪ್ಟಾಪ್ ನೀಡುವ ಪ್ರಕ್ರಿಯೆ ನಡೆಯುತ್ತದೆ. ಕೋರ್ಸ್ ವರ್ಕ್ ಬಳಿಕ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಹೆಚ್ಚಿನ ಅವಧಿ ಮೀಸಲಿಡಬೇಕಾಗುತ್ತದೆ. ಹೀಗಾಗಿ, ಲ್ಯಾಪ್ಟಾಪ್ ಅವಶ್ಯಕತೆ ಹೆಚ್ಚಿದ್ದ ಹಿನ್ನೆಲೆ ಸಂಶೋಧನಾ ವಿದ್ಯಾರ್ಥಿಗಳು ಬೆಂಗಳೂರು ವಿವಿ ಆಡಳಿತಕ್ಕೆ ಲ್ಯಾಪ್ ಟಾಪ್ ಗಾಗಿ ಬೇಡಿಕೆ ಮುಂದಿಟ್ಟು ಎಷ್ಟೋ ಅವಧಿ ಕಳೆದ ಬಳಿಕ ಇದೀಗ, ಮನವಿಗೆ ವಿವಿಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರು ವಿವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಶ 82 ಸಾವಿರ ರೂ.ಮೌಲ್ಯದ ಲ್ಯಾಪ್ಟಾಪ್ಗಳನ್ನು ಖರೀದಿ ಮಾಡಿದೆ. ಹೀಗಾಗಿ, 1.50 ಕೋಟಿ ರೂ. ವೆಚ್ಚ ಮಾಡಿದೆ. ವಿದ್ಯಾರ್ಥಿಗಳಿಗೆ ವಿತರಿಸಲು ಉನ್ನತ ಶಿಕ್ಷಣ ಸಚಿವರ ದಿನಾಂಕಕ್ಕಾಗಿ ಕಾಯುತ್ತಿದೆ ಎನ್ನಲಾಗಿದೆ.

Leave A Reply

Your email address will not be published.