Viral News: ಹೀಗೂ ಆಗುತ್ತೆ. ನಂಬಿ! 1969ರಲ್ಲಿ ಪೋಸ್ಟ್‌ ಮಾಡಿದ ಲೆಟರ್‌ 2023 ರಲ್ಲಿ ತಲುಪಿತು!

Latest news Can you believe that a letter posted in 1969 has reached 2023

Washington: ಒಂದಾನೊಂದು ಕಾಲದಲ್ಲಿ ನಮ್ಮ ಹಿರಿಯರು ಯಾವುದೇ ಸೌಕರ್ಯಗಳಿಲ್ಲದೆ ಪ್ರಕೃತಿಯ ಜೊತೆಗೆ ಅವಿನಾಭವ ಅನುಬಂಧ ಹೊಂದಿದ್ದು ದಿನಕ್ಕೊಂದು ಹೊಸ ಪ್ರಯೋಗಕ್ಕೆ ನಾಂದಿ ಹಾಡಿ ಇಂದು ನಾವು ಬಳಕೆ ಮಾಡುತ್ತಿರುವ ಅದೆಷ್ಟೋ ವಸ್ತುಗಳು ಅವರ ಪ್ರಯೋಗ ಪ್ರಯತ್ನದ ಪ್ರತಿಫಲ ಎಂದರೆ ತಪ್ಪಾಗದು. ಆದರೆ, ಮುಂದೊಂದು ದಿನ ಅದೆಷ್ಟೋ ವಸ್ತುಗಳು( Dissapear Things)ಕಾಣಸಿಗುವುದೇ ಅನುಮಾನ ಎನ್ನುವುದು ಸುಳ್ಳಲ್ಲ. ಹೇಳಿ ಕೇಳಿ ಇದು ಡಿಜಿಟಲ್ ಯುಗ. ಮೊಬೈಲ್ ಎಂಬ ಮಾಯಾವಿಯ ಬಳಕೆ ಬಳಿಕ ವಿಜ್ಞಾನ, ಕೃಷಿ, ತಂತ್ರಜ್ಞಾನ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಅನ್ವೇಷಣೆಗೆ ನಾವು ತೆರೆದುಕೊಳ್ಳುತ್ತಿದ್ದೇವೆ.

ಒಂದಾನೊಂದು ಕಾಲದಲ್ಲಿ ಸಂದೇಶಗಳನ್ನು ರವಾನೆ ಮಾಡಲು ಪಕ್ಷಿಗಳನ್ನ ಬಳಕೆ ಮಾಡುತ್ತಿದ್ದದ್ದು ಗೊತ್ತಿರುವ ಸಂಗತಿ. ಆ ಬಳಿಕ ಅನೇಕ ಮಾರ್ಪಾಡುಗಳಾಗಿ ಇಂದು ಪತ್ರಗಳು, ಯಾವುದೇ ಮಾಹಿತಿ ರವಾನೆಗೆ ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿರುವುದು ಗೊತ್ತೇ ಇದೆ. ಆದರೂ ಕೂಡ ಮೊಬೈಲ್(Mobile) ಎಂಬ ಸಾಧನದ ಅನ್ವೇಷಣೆಯ ಬಳಿಕ ಪತ್ರ ಬರೆಯುವ ಸಂಖ್ಯೆ ಕಡಿಮೆ ಆಗಿರುವುದಂತು ಸುಳ್ಳಲ್ಲ. ಇಂದು ಅನೇಕ ಸ್ಥಳಗಳಲ್ಲಿ ಪೋಸ್ಟ್ ಬಾಕ್ಸ್ ಗಳನ್ನು ಕಡಿತ ಮಾಡಲಾಗುತ್ತಿದೆ. ಇಂದು ತಂತ್ರಜ್ಞಾನ ಬೆಳೆದಂತೆ ಏನೇ ಮಾಹಿತಿ ಇದ್ದರೂ ಮೊಬೈಲ್ ಮೂಲಕ ಕ್ಷಣ ಮಾತ್ರದಲ್ಲಿ ರವಾನೆ ಮಾಡಬಹುದು. ಹೀಗಿದ್ದಾಗ, ಬೆರಳೆಣಿಕೆಯ ಮಂದಿ ಮಾತ್ರ ಪತ್ರಗಳನ್ನು ರವಾನೆ ಮಾಡುತ್ತಿದ್ದಾರೆ.

ಅಂಚೆ ಮಾಡುವುದೆಲ್ಲ ಈಗಿನ ಕಾಲಕ್ಕೆ ಹಳೆಯ ಸಂಪ್ರದಾಯ ಎಂಬಂತೆ ಆಗಿಬಿಟ್ಟಿದೆ. ಸದ್ಯ, ಅಮೆರಿಕದಲ್ಲಿ ಪತ್ರದ ವಿಚಾರ ಭಾರೀ ಸದ್ದು ಮಾಡುತ್ತಿದೆ.ಅದಕ್ಕೆ ಕಾರಣವೂ ಇದೆ. ಇಂದು ಬರೆದ ಪತ್ರ ಒಂದು ವಾರ ಇಲ್ಲವೇ ತಿಂಗಳುಗಳಲ್ಲಿ ತಲುಪಿರುವ ಸಂಗತಿಗಳನ್ನು ಕೇಳಿರುತ್ತೀರಿ! ಆದರೆ, 1969ರಲ್ಲಿ ಮಾಡಲಾಗಿದ್ದ ಪೋಸ್ಟ್ ವೊಂದು ಇದೀಗ 2023ರಲ್ಲಿ ವಿಳಾಸಕ್ಕೆ (Viral News) ತಲುಪಿದ ಘಟನೆ ವರದಿಯಾಗಿದೆ.

ಬರೋಬ್ಬರಿ 54 ವರ್ಷಗಳ ಬಳಿಕ ಪೋಸ್ಟ್ ವೊಂದು ಅದರ ವಿಳಾಸಕ್ಕೆ ತಲುಪಿದ್ದು, ಆದರೆ ಈಗ ಪತ್ರ ತಲುಪಬೇಕಾದ ವಿಳಾಸಕ್ಕೆ ಬಂದಿದ್ದರು ಕೂಡ ಯಾರಿಗೆ ತಲುಪಬೇಕಿತ್ತೋ ಅವರಿಗೆ ತಲುಪಲು ಸಾಧ್ಯವಾಗಿಲ್ಲ. ಯಾಕೆಂದರೆ, ಈ ವಿಳಾಸದಲ್ಲಿ ಈಗ ಬೇರೆ ಕುಟುಂಬದವರು ನೆಲೆಸಿದ್ದಾರೆ.ಗ್ಯಾಸ್ಪೋನ್ಸ್ ಎಂಬ ಹೆಸರಿಗೆ ಪೋಸ್ಟ್ ಬಂದಿದ್ದು ಆ ವ್ಯಕ್ತಿ ಯಾರು ಎನ್ನುವ ವಿಚಾರ ಕೂಡ ಅಂಚೆ ಪಡೆದವರಿಗೆ ಗೊತ್ತಿಲ್ಲ ಎನ್ನಲಾಗಿದೆ. ಹೀಗಾಗಿ, ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

“ಇದೊಂದು ವಿಚಿತ್ರ. ನಿಮಗೆ ಯಾರಿಗಾದರೂ ಈ ಗ್ಯಾಸ್ಪೋನ್ಸ್ ಯಾರು ಎಂದು ತಿಳಿದಿದ್ದರೆ ದಯವಿಟ್ಟು ತಿಳಿಸಿ, ವಿಚಿತ್ರವೆಂದರೆ ಇದರಲ್ಲಿ ವಿಳಾಸದಲ್ಲಿ ಗ್ಯಾಸ್ಟೋನ್ಸ್ ಇಲ್ಲವೇ ಆ ವಿಳಾಸದಲ್ಲಿ ಯಾರಿದ್ದಾರೋ ಅವರಿಗೆ ಎಂದು ಬರೆಯಲಾಗಿದೆ” ಎಂದು ಪೋಸ್ಟ್ ಅನ್ನು ಪಡೆದ ಜೆಸ್ಸಿಕಾ ಮಾಹಿತಿ ಶೇರ್ ಮಾಡಿದ್ದಾರೆ.

ಇನ್ನು ಜೆಸ್ಸಿಕಾ ಅವರ ನೆರೆಹೊರೆಯವರ ಮಾಹಿತಿ ಅನುಸಾರ ಗ್ಯಾಸ್ಪೋನ್ಸ್ ಅವರು ಜೆಸ್ಸಿಕಾ ಅವರ ಮನೆಯೆ ಮಾಜಿ ಮಾಲೀಕರಾಗಿದ್ದರು. ಅಷ್ಟೆ ಅಲ್ಲದೇ , ಜೆಸ್ಸಿಕಾ ಅವರು ಈಗಿರುವ ಮನೆಯಲ್ಲಿ 90ರ ದಶಕದ ತನಕ ನೆಲೆಸಿದ್ದರಂತೆ.ಈ ಪೋಸ್ಟ್ ಅನ್ನು ಜೆಸ್ಸಿಕಾ ಅವರು ಫೇಸ್‌ಬುಕ್‌ನಲ್ಲಿ ಜುಲೈ 18ರಂದು ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ಪೋಸ್ಟ್ ಲೈಕ್ ಜೊತೆಗೆ ತರಹೇವಾರಿ ಕಾಮೆಂಟ್ ಪಡೆದುಕೊಂಡಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಈ ಅಂಚೆ ಇಷ್ಟು ತಡವಾಗಿ ಬಂದಿದ್ದು ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ನಾನಾ ಬಗೆಯ ಚರ್ಚೆಗಳು ನಡೆಯುತ್ತಿವೆ. “ಇದೆ ರೀತಿ ನಮಗೂ ನಮ್ಮ ಪೂರ್ವಜರ ಯಾವುದಾದರೂ ಅಂಚೆ ಸಿಗುವ ಹಾಗಿದ್ದರೆ ಅದೆಷ್ಟು ಚೆನ್ನಾಗಿತ್ತು” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಏನೇ ಇರಲಿ ಬರೋಬ್ಬರಿ 54 ವರ್ಷಗಳ ಬಳಿಕ ಬಂದ ಅಂಚೆ ಸರಿಯಾದ ವಿಳಾಸಕ್ಕೆ ತಲುಪಿರುವುದೇ ವಿಶೇಷ.

Leave A Reply

Your email address will not be published.